ನವದೆಹಲಿ: ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಮತ್ತೊಂದು ದೊಡ್ಡ ಜಯ ಸಿಕ್ಕಿದೆ. ಚೀನಾದ ಪ್ರಮುಖ ಸಂಸ್ಥೆ ಹೈಯರ್ ಗ್ರೇಟರ್ ನೊಯ್ಡಾದಲ್ಲಿ ಮೆಗಾ ಇಂಡಸ್ಟ್ರಿಯಲ್ ಪಾರ್ಕ್ ಅನ್ನು ಸ್ಥಾಪನೆ ಮಾಡುತ್ತಿದ್ದು, ಇದಕ್ಕೆ ರೂ.3,070 ಕೋಟಿ ಬಂಡವಾಳ ಹೂಡುತ್ತಿದೆ. ಮಾರ್ಚ್ 29ರಂದು ಈ ಪಾರ್ಕ್ಗೆ ಭೂಮಿ ಪೂಜೆ ನೆರವೇರಿದೆ. 2020ರ ಅಂತ್ಯದ ವೇಳೆಗೆ ಇದು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ ಎಂದು ಹಿಂದೂ ಬ್ಯುಸಿನೆಸ್ ಲೈನ್ ವರದಿ ಮಾಡಿದೆ.
ಒಂದು ಬಾರಿ ಕಾರ್ಯಾರಂಭ ಮಾಡಿದರೆ, ವಾರ್ಷಿಕ ಇದು 2 ಮಿಲಿಯನ್ ರೆಫ್ರಿಜರೇಟರ್ ಉತ್ಪಾದನೆ ಮಾಡಲಿದೆ. ಇದರಿಂದ ಭಾರತದಲ್ಲಿ ರೆಫ್ರಿಜರೇಟರ್ ಗಳ ಉತ್ಪಾದನೆ ದುಪ್ಪಟ್ಟುಗೊಳ್ಳಲಿದೆ. ಈ ಪಾರ್ಕ್ ವಾರ್ಷಿಕ 1.5 ಮಿಲಿಯನ್ ವಾಷಿಂಗ್ ಮೆಶಿನ್, 1 ಮಿಲಿಯನ್ ಏರ್ ಕಂಡೀಷನ್ ಉತ್ಪಾದನೆ ಮಾಡಲಿದೆ. ಪ್ರಸ್ತುತ ರೆಫ್ರಿಜರೇಟರ್ ಕಂಪನಿಯ ವಾರ್ಷಿಕ ವಹಿವಾಟಿಗೆ ಶೇ.40ರಷ್ಟು ಕೊಡುಗೆ ನೀಡುತ್ತಿದೆ.
ಹೈಯರ್ ಕಂಪನಿಯ ಈ ದೊಡ್ಡ ಮಟ್ಟದ ಹೂಡಿಕೆಯಿಂದ ಭಾರತಕ್ಕೆ ಎರಡು ರೀತಿಯ ಪ್ರಯೋಜನವಾಗಲಿದೆ. 1. ಭಾರತ ಅತೀದೊಡ್ಡ ಕೊಡುಗೆ ನೀಡುವ ಅಂತಾರಾಷ್ಟ್ರೀಯ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ, ಇನ್ನಷ್ಟು ಪ್ರಗತಿಗೆ ದಾರಿ ಮಾಡಿಕೊಡಲಿದೆ. 2. ಪುಣೆಯಲ್ಲಿರುವ ಯುನಿಟ್ ಸಂಪೂರ್ಣ ಸಾಮರ್ಥ್ಯಕ್ಕೆ ಏರಿದೆ ಮತ್ತು ಮುಂದಿನ ವರ್ಷದಿಂದ ಅದು ಸಾಮರ್ಥ್ಯ ಮೀರಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಹೈಯರ್ ಹೂಡಿಕೆಯಿಂದ ಸಾಮರ್ಥ್ಯ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ.
ಹೈಯರ್ ಕಂಪನಿ ಭಾರತದಲ್ಲಿ 15 ವರ್ಷಗಳನ್ನು ಪೂರೈಸಿದೆ ಮತ್ತು ಹೋಮ್ ಅಪ್ಲಿಯನ್ಸ್ನಲ್ಲಿ ಪ್ರಮುಖ ಮೂರು ಕಂಪನಿಯಲ್ಲಿ ಒಂದಾಗಿ ಹೊರಹೊಮ್ಮಿದೆ. ಇದು ಗ್ರೇಟರ್ ನೊಯ್ಡಾದಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪನೆ ಮಾಡುವುದರಿಂದ ಸಾಕಷ್ಟು ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.