ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಸಾಧನೆ ಮಾಡಿದೆ. ಸೋಮವಾರ ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಎಮಿಸ್ಯಾಟ್ ಸೇರಿದಂತೆ ಒಟ್ಟು 29 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ-ಸಿ45 ಅನ್ನು ಉಡಾವಣೆಗೊಳಿಸಲಾಗಿದ್ದು, ಇದು ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.
ಎಮಿಸ್ಯಾಟ್ ಉಪಗ್ರಹವು ಶತ್ರುಗಳ ರಾಡರ್ ಪತ್ತೆ ಮತ್ತು ಪೂರ್ವ ಎಚ್ಚರಿಕ ವ್ಯವಸ್ಥೆಯಾಗಿ ಕಾರ್ಯನಿರ್ವಹಣೆ ಮಾಡಲಿದೆ. ವಿದ್ಯುತ್ಕಾಂತೀಯ ಮಾಪನ ಮಾಡಲೂ ಇದು ಇಸ್ರೋಗೆ ಸಹಾಯ ಮಾಡಲಿದೆ.
ಡಿಆರ್ಡಿಒ ಅಭಿವೃದ್ಧಿಪಡಿಸಿದ ಎಮಿಸ್ಯಾಟ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸೆಟಲೈಟ್ ಸೇರಿದಂತೆ ಅಮೆರಿಕದ 24, ಸ್ವಿರ್ಟ್ಜರ್ ಲ್ಯಾಂಡಿನ 1, ಸ್ಪೇನ್ 1, ಲಿಥುಯೇನಿಯಾದ 2 ಉಪಗ್ರಹಗಳನ್ನು ಪಿಎಸ್ಎಲ್ವಿ-ಸಿ45 ರಾಕೆಟ್ ಹೊತ್ತೊಯ್ದಿದ್ದು, 3 ಕಕ್ಷೆಗಳಲ್ಲಿ ಈ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ.
ಎಮಿಸ್ಯಾಟ್ ಉಪಗ್ರಹವನ್ನು ಡಿಆರ್ಡಿಒ ಅಭಿವೃದ್ಧಿಪಡಿಸಿದೆ, ಮೊದಲ ಬಾರಿಗೆ ರಾಕೆಟ್, ವಿವಿಧ 3 ಕಕ್ಷೆಗಳಲ್ಲಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
ಪಿಎಸ್ಎಲ್ವಿ-ಸಿ45 ಇಸ್ರೋಗೆ ಬಹಳ ಪ್ರಮುಖವಾದ ಮೈಲಿಗಲ್ಲು. ಇದು ಕೇವಲ ನಮ್ಮ ಉಪಗ್ರಹವನ್ನು ಮಾತ್ರವಲ್ಲ, ಇತರ ರಾಷ್ಟ್ರಗಳ ಉಪಗ್ರಹಗಳನ್ನೂ ನಭಕ್ಕೆ ಚಿಮ್ಮಿಸುತ್ತಿದೆ. ಈ ಮಿಷನಿನ ವಿಭಿನ್ನತೆ ಎಂದರೆ, ಉಪಗ್ರಹಗಳನ್ನು ಮೂರು ಕಕ್ಷೆಗಳಲ್ಲಿ ಇಡಲಿದೆ. ಇದು ಮಿಷನ್ ಶೇ. 100 ರಷ್ಟು ಯಶಸ್ಸನ್ನು ಗಳಿಸಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್ ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.