ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿನ ಸರ್ಕಾರಿ ಸ್ವಾಮ್ಯದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಎಂಜಿನಿಯರ್ಸ್ ಲಿಮಿಟೆಡ್ (GRSE) ಭಾರತೀಯ ನೌಕಾಸೇನೆಗೆ 100 ಯುದ್ಧನೌಕೆಗಳನ್ನು ನಿರ್ಮಿಸಿ ಮತ್ತು ವಿತರಿಸುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಶಿಪ್ಯಾರ್ಡ್ ಎನಿಸಿಕೊಂಡಿದೆ.
ಹಡಗಿನ ಕಮಾಂಡಿಂಗ್ ಅಧಿಕಾರಿ, ಭಾರತೀಯ ನೌಕೆಯ ಲೆಫ್ಟಿನೆಂಟ್ ಸಿಡಿಆರ್ ಗೋಪಿನಾಥ್ ನಾರಾಯಣನ್ ಅವರಿಗೆ 100 ನೇ ಹಡಗು-ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ (ಎಲ್ಸಿಯು) ಯನ್ನು GRSE ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಡ್ವಾಣಿ ವಿ ಕೆ ಸಕ್ಸೇನಾ ಅವರು ಹಸ್ತಾಂತರ ಮಾಡಿದರು. ಇದು ನೌಕಾಪಡೆಯಿಂದ ಎಂಟು ಹಡಗುಗಳ ಆರ್ಡರ್ ನಲ್ಲಿನ ಆರನೇಯ ಹಡಗಾಗಿದೆ ಎಂದು ಕಂಪನಿಯು ಪ್ರಕಟನೆಯಲ್ಲಿ ತಿಳಿಸಿದೆ.
ಈ ಹಡಗುಗಳು ಅಂಡಮಾನ್ ಮತ್ತು ನಿಕೋಬಾರ್ ನೌಕಾ ಕಮಾಂಡ್ನಲ್ಲಿ ನೆಲೆಯೂರಲಿದೆ. ಶೋಧ ಕಾರ್ಯಾಚರಣೆ, ವಿಪತ್ತು ಪರಿಹಾರ ಕಾರ್ಯಾಚರಣೆಗಳು, ಸರಬರಾಜು ಮತ್ತು ಮರುಪೂರಣ ಮತ್ತು ದೂರದ ದ್ವೀಪಗಳಿಂದ ಸ್ಥಳಾಂತರಿಸುವಂತಹ ವಿವಿಧ ಸಂದರ್ಭಗಳಲ್ಲಿ ಈ ನೌಕೆಗಳನ್ನು ಬಳಸಬಹುದಾಗಿದೆ.
landing craft utility ಗಳು ಒಂದು ಗಂಟೆಗೆ 27.78 km ವೇಗದಲ್ಲಿ ಚಲಿಸುತ್ತದೆ. ಪ್ರತಿ ನೌಕೆ 216 ಸಿಬ್ಬಂದಿಗೆ ಸ್ಥಳಾವಕಾಶ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಲ್ಯಾಂಡಿಂಗ್ ಕಾರ್ಯಾಚರಣೆಗಳ ಸಂದರ್ಭದಲ್ಲಿ ಫಿರಂಗಿ ಬೆಂಬಲವನ್ನು ಆರ್ಟಿಲ್ಲರಿ ಸಪೋರ್ಟ್ ಒದಗಿಸಲು ಎರಡು ಕ್ಲೋಸ್ ರೇಂಜ್ ನಾವೆಲ್ ಗನ್ಗಳನ್ನು ಇದು ಹೊಂದಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮಿನಿರತ್ನ PSU, GRSE ಭಾರತೀಯ ನೌಕಾಪಡೆಗೆ, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಮಾರಿಷಸ್ ಕೋಸ್ಟ್ ಗಾರ್ಡ್ಗೆ ಹಡಗುಗಳನ್ನು ನಿರ್ಮಾಣ ಮಾಡುತ್ತದೆ. ಕಾರ್ಯಗತಗೊಳಿಸಲಾದ ವೇದಿಕೆಗಳಲ್ಲಿ ಅದರ ಫ್ರಿಗೇಟ್ಗಳು, ಕ್ಷಿಪಣಿ ಕೊರ್ವೆಟ್ಗಳು, ಆ್ಯಂಟಿ ಸಬ್ ಮರೀನ್ ವಾರ್ ಪೇರ್ ಕೊರ್ವೆಟ್ಗಳು, ಫ್ಲೀಟ್ ಟ್ಯಾಂಕರ್ಗಳು, ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ, ನೌಕೆಗಳು, ಕಡಲಾಚೆಯ ಗಸ್ತು ಹಡಗುಗಳು ಮತ್ತು ವೇಗದ ದಾಳಿಯ ನೌಕೆಗಳನ್ನು ಈ ಸಂಸ್ಥೆ ನಿರ್ಮಾಣ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.