ಕೋಲ್ಕತ್ತಾ: ಕೋಲ್ಕತ್ತಾದ ದುರ್ಗಾ ಪೂಜೆ, ಯುನೆಸ್ಕೋದ ಸಾಂಸ್ಕೃತಿಕ ಸಂಸ್ಥೆ 2020ರ ಪಟ್ಟಿಗೆ ಭಾರತದ ಅಧಿಕೃತ ನಾಮನಿರ್ದೇಶನವಾಗಿದೆ. ರಕ್ಷಣೆ ಮತ್ತು ಸಂರಕ್ಷಣೆಯ ಅಗತ್ಯವಿರುವ ವಿಶ್ವದ ಸಾಂಸ್ಕೃತಿಕ ಸಂಸ್ಥೆಗಳು ಈ ಪಟ್ಟಿಯಲ್ಲಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯದಡಿಯಲ್ಲಿನ ನೋಡಲ್ ಏಜೆನ್ಸಿಯಾದ ಸಂಗೀತ್ ನಾಟಕ ಅಕಾಡಮಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ.
ಪ್ರತಿವರ್ಷ, ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (AUNESCO) ಯು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಪಟ್ಟಿಗೆ ಸೇರಿಸುತ್ತದೆ ಮತ್ತು ವಿಭಿನ್ನ ಸಂಸ್ಕೃತಿಗಳ ಒಟ್ಟುಗೂಡಿಸುವಿಕೆಯ ದುರ್ಗಾ ಪೂಜೆ ಭಾರತದ 2020ರ ಪಟ್ಟಿಗೆ ಭಾರತದ ಆಯ್ಕೆಯಾಗಿದೆ ಎಂದು ಸಂಗೀತ್ ನಾಟಕ್ ಅಕಾಡಮಿ ಹೇಳಿದೆ. ಯುನೆಸ್ಕೊ ಪಟ್ಟಿಯಲ್ಲಿ ಭಾರತವು ಪ್ರಸ್ತುತ 13 ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿದೆ. ಯೋಗವನ್ನು 2016 ರಲ್ಲಿ ಸೇರಿಸಲಾಗಿದ್ದರೆ, ಕುಂಭಮೇಳವನ್ನು 2017 ರಲ್ಲಿ ವಿಶ್ವ ಪರಂಪರೆಯ ಭಾಗವನ್ನಾಗಿಸಲಾಗಿತ್ತು. ಟಿಬೆಟಿಯನ್ ಔಷಧಿಯೆಂದು ಸಾಮಾನ್ಯವಾಗಿ ಕರೆಯಲ್ಪಡುವ “ಸೋವ-ರಿಗ್ಪಾ” ಈ ವರ್ಷದ ಪಟ್ಟಿಗಾಗಿ ನಾಮನಿರ್ದೇಶನಗೊಂಡಿದೆ.
“ಕೋಲ್ಕತಾದ ದುರ್ಗಾ ಪೂಜೆಯು ವಿಶೇಷ ಕಲಾತ್ಮಕ ಪ್ರೊಫೈಲ್ ಅನ್ನು ಅಭಿವೃದ್ಧಿಪಡಿಸಿದೆ, ಆಧುನಿಕ ಕಲಾಕಾರರು ಮತ್ತು ವಿನ್ಯಾಸಕಾರರು ಹೊಸ ನಗರ ಕಲೆಗಳನ್ನು ರಚಿಸಲು ಒಂದುಗೂಡುತ್ತಾರೆ. ಇದು ಒಂದು ಅನನ್ಯ ಆಯಾಮವನ್ನು ನೀಡುತ್ತದೆ ಎಂದು ಪ್ರೊಫೆಸರ್ ತಪತಿ ಗುಹಾ ಠಾಕುಟ ತಿಳಿಸಿದ್ದಾರೆ. ಅಕಾಡಮಿಗಾಗಿ ಐವರು ಸದಸ್ಯರನ್ನು ಒಳಗೊಂಡ ಸಂಶೋಧಕರ ತಂಡ ನಾಮನಿರ್ದೇಶನ ವಸ್ತುವನ್ನು ಸಿದ್ಧಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.