ನವದೆಹಲಿ: ಸೋಲಾರ್ ಪವರ್ ಪ್ರಾಜೆಕ್ಟ್ಗಳ ಅಭಿವೃದ್ಧಿಗಾಗಿ ಮಹಾರತ್ನ ಪಬ್ಲಿಕ್ ಸೆಕ್ಟರ್ ಯುನಿಟ್ GAIL India Ltd ಮತ್ತು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಸ್ ಇಎಲ್) ಪರಸ್ಪರ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿವೆ.
ಹವಾಮಾನ ಬದಲಾವಣೆಯ ಕುರಿತಾದ ವಿಶ್ವಸಂಸ್ಥೆಯ ಹವಮಾನ ವೈಪರೀತ್ಯದ ಬಗೆಗಿನ ಫ್ರೇಮ್ ವರ್ಕ್ ಕನ್ವೆನ್ಷ್ನ ಅಡಿಯಲ್ಲಿ, ಭಾರತದ ಉದ್ದೇಶಿತ ರಾಷ್ಟ್ರೀಯ ನಿರ್ಣಯದ ಕೊಡುಗೆಗಳಿಗೆ ಅನುಗುಣವಾಗಿ ಸೌರ ವಿದ್ಯುತ್ ಯೋಜನೆಗಳ ಗಣನೀಯ ಬಂಡವಾಳವನ್ನು ನಿರ್ಮಿಸಲು ಮತ್ತು ಅದರ ಸ್ಪರ್ಧಾತ್ಮಕ ಸಾಮರ್ಥ್ಯಗಳನ್ನು ಹತೋಟಿಗೆ ತರಲು ಈ ಒಪ್ಪಂದ ಸಹಾಯ ಮಾಡಲಿದೆ.
2022ರ ವೇಳೆಗೆ ಭಾರತ 100 ಗಿಗಾವ್ಯಾಟ್ ಸೋಲಾರ್ ಪವರ್ ಉತ್ಪಾದನೆ ಮಾಡುವ ಮತ್ತು ನಾಗರಿಕರಿಗೆ 24 ಗಂಟೆಗಳ ಕಾಲ ಅದನ್ನು ಪೂರೈಸುವ ಮಹತ್ವದ ಗುರಿಯನ್ನು ಇಟ್ಟುಕೊಂಡಿದೆ.
ಸುಂಕ ಮತ್ತು ಸ್ಪರ್ಧಾತ್ಮಕ ಅಂತರ ಧನಸಹಾಯ ಆಧಾರಿತ ಸ್ಪರ್ಧಾತ್ಮಕ ಹರಾಜಿನ ಪ್ರಕ್ರಿಯೆಯಲ್ಲಿ ಭಾಗಿಯಾಗಿ, ಆ ಮೂಲಕ ಜಂಟಿಯಾಗಿ ವಾಣಿಜ್ಯ ಸೌರ ವಿದ್ಯುತ್ ಯೋಜನೆಗಳನ್ನು ಮುಂದುವರಿಸಲು ಎರಡು ಕಂಪನಿಗಳ ನಡುವೆ ಹತ್ತಿರದ ಆಯಕಟ್ಟಿನ ಪಾಲುದಾರಿಕೆಯನ್ನು ನಿರ್ಮಿಸುವ ಮಹತ್ತರವಾದ ಉದ್ದೇಶವನ್ನು ಈ ಒಪ್ಪಂದ ಒಳಗೊಂಡಿದೆ.
GAIL ಯೋಜನೆಯ ಡೆವಲಪರ್ ಆಗಿರುತ್ತದೆ ಮತ್ತು ಬಿಎಚ್ಇಎಲ್ ಎಂಜಿನಿಯರಿಂಗ್, ಸಂಗ್ರಹಣೆ, ನಿರ್ಮಾಣ ಮತ್ತು ಯೋಜನಾ ನಿರ್ವಹಣೆ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತದೆ. ಯಶಸ್ವಿ ಬಿಡ್ಡುದಾರನಾಗಿ ಹೊರಹೊಮ್ಮಿದ ಬಳಿಕ ಬಿಎಚ್ಇಎಲ್ ಕಾರ್ಯಾಚರಣೆ ಮತ್ತು ನಿರ್ವಹಣೆ ಸೇವೆಗಳನ್ನು ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.