ನವದೆಹಲಿ: ಭಾರತೀಯ ನೌಕೆಯು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಇಂಡಿಜೀನಿಯಸ್ ಏರ್ಕ್ರಾಫ್ಟ್ ಕ್ಯಾರಿಯರ್ (ಐಎಸಿ)ಗೆ ಕಂಬಾತ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಸಿಎಂಎಸ್) ಅನ್ನು ಅಭಿವೃದ್ಧಿಪಡಿಸಿದೆ. ದೇಶೀಯ ಉತ್ಪಾದನೆ, ಅಭಿವೃದ್ಧಿ ಮತ್ತು ಖಾಸಗಿ ಕೈಗಾರಿಕ ಸಹಭಾಗಿತ್ವವನ್ನು ಉತ್ತೇಜಿಸುವ ಭಾರತೀಯ ನೌಕೆಯ ಪ್ರಯತ್ನಕ್ಕೆ ಸಂದ ಅತೀದೊಡ್ಡ ವಿಜಯ ಇದಾಗಿದೆ.
ಈ ವ್ಯವಸ್ಥೆಯನ್ನು ಎಂ/ಎಸ್ ಟಾಟಾ ಪವರ್ ಸ್ಟ್ರ್ಯಾಟಜಿಕ್ ಎಂಜಿನಿಯರಿಂಗ್ ಡಿವಿಶನ್ ಇದನ್ನು, ವೆಪನ್ ಆಂಡ್ ಎಲೆಕ್ಟ್ರಾನಿಕ್ಸ್ ಸ್ಟಿಸ್ಟಮ್ ಎಂಜಿನಿಯರಿಂಗ್ ಎಸ್ಟಾಬ್ಲಿಷ್ ಮೆಂಟ್ ಮತ್ತು ಎಂ/ಎಸ್ ಮಾರ್ಸ್, ರಷ್ಯಾ ಜೊತೆಗೂಡಿ ಅಭಿವೃದ್ಧಿಪಡಿಸಿದೆ. ಎಂ/ಎಸ್ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ನ ಸಿಇಓ ಸುಕರಣ್ ಸಿಂಗ್ ಇದನ್ನು ನೌಕೆಯ ವೈಸ್ ಅಡ್ಮಿರಲ್ ಜಿಎಸ್ ಪಬ್ಬಿ ಅವರಿಗೆ ಬೆಂಗಳೂರಿನಲ್ಲಿ ಹಸ್ತಾಂತರ ಮಾಡಿದ್ದಾರೆ.
ಖಾಸಗಿ ಸಂಸ್ಥೆ ನೌಕಾಸೇನೆಗಾಗಿ ಅಭಿವೃದ್ಧಿಪಡಿಸಿದ ಮೊದಲ ಕಂಬಾತ್ ಮ್ಯಾನೆಜ್ಮೆಂಟ್ ಸಿಸ್ಟಮ್ ಇದಾಗಿರುವುದರಿಂದ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಭಾರತದ ದೇಶಿಯ ಏರ್ ಕ್ರಾಫ್ಟ್ ಕ್ಯಾರಿಯರ್ ಗಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಹಲವಾರು ಸುತ್ತಿನ ಪರೀಕ್ಷೆಗಳನ್ನು ನಡೆಸಿ ಯಶಸ್ವಿಯಾದ ಬಳಿಕ ಇದನ್ನು ನೌಕೆಗೆ ಸೇರ್ಪಡೆಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.