ನವದೆಹಲಿ: ಇನ್ನು ಮುಂದೆ ಜನರು ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಂಗಾಳಕೊಲ್ಲಿಯ ಕರಾವಳಿಯಿಂದ, ಬರೀಗಣ್ಣಲ್ಲಿ 44 ಮೀಟರ್ ಎತ್ತರ ಮತ್ತು 320 ತೂಕದ ಪಿಎಸ್ಎಲ್ವಿ ರಾಕೆಟ್ನ ಉಡಾವಣೆಯನ್ನು ನೋಡಬಹುದಾಗಿದೆ. ಇದೇ ಮೊದಲ ಬಾರಿಗೆ ಇಸ್ರೋ ಇಲ್ಲಿ, ಕನಿಷ್ಠ ದೂರದಲ್ಲಿ ಬರೀಗಣ್ಣಿನಲ್ಲಿ ಜನರಿಗೆ ಉಡಾವಣೆಗಳನ್ನು ನೋಡುವ ಅವಕಾಶ ಒದಗಿಸುವ ‘ಲಾಂಚ್ ಕಾಂಪ್ಲೆಕ್ಸ್’ ಅನ್ನು ನಿರ್ಮಾಣ ಮಾಡಿದೆ.
ಇದುವರೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳುವ ರಾಕೆಟ್ಗಳನ್ನು ನೋಡುವ ಅವಕಾಶ ಕೇವಲ ಅಧಿಕಾರಿಗಳಿಗೆ ಮತ್ತು ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಇತ್ತು.
ರಾಕೆಟ್ ಲಿಫ್ಟ್ ಆಗುವಾಗ ದೊಡ್ಡದಾಗಿ ಘರ್ಜಿಸುತ್ತದೆ ಮತ್ತು ಬಹಳ ಪ್ರಮಾಣದಲ್ಲಿ ಹೊಗೆಯನ್ನು ಉಗುಳುತ್ತದೆ. ಕೆಲವೇ ನಿಮಿಷವಾದರೂ ನೋಡುಗರಿಗೆ ಇದೊಂದು ರೀತಿಯ ಹಬ್ಬವಾಗಿರುತ್ತದೆ. ಹೀಗಾಗಿ ಇಸ್ರೋ ಜನಸಾಮಾನ್ಯರಿಗೂ ಇದನ್ನು ಸಂಭ್ರಮಿಸುವ ಸೌಭಾಗ್ಯವನ್ನು ಕಲ್ಪಿಸಿಕೊಟ್ಟಿದೆ.
ಶ್ರೀಹರಿಕೋಟಾದ ಬಾಹ್ಯಾಕಾಶ ಉಡಾವಣಾ ಕೇಂದ್ರದ ಆವರಣದೊಳಗೆ ಸ್ಥಾಪನೆ ಮಾಡಲಾಗಿರುವ ಈ ಲಾಂಚ್ ಕಾಂಪ್ಲೆಕ್ಸ್ನಲ್ಲಿ, ಅತ್ಯಗತ್ಯವಾದ ಕನಿಷ್ಠ ದೂರದಲ್ಲಿ ನಿಂತು ಜನಸಾಮಾನ್ಯರು ಬರೀಗಣ್ಣಿನಲ್ಲಿ ರಾಕೆಟ್ ಉಡಾವಣೆಗಳನ್ನು ವೀಕ್ಷಣೆ ಮಾಡಬಹುದು. ಏಕಕಾಲಕ್ಕೆ 5 ಸಾವಿರ ಮಂದಿ ಇಲ್ಲಿ ನಿಂತು ವೀಕ್ಷಣೆ ಮಾಡಬಹುದಾಗಿದೆ. ಇದಕ್ಕೆ ನೋಂದಣಿಯನ್ನು ಮಾಡಿಕೊಳ್ಳುವುದು ಅಗತ್ಯ. ನೋಂದಣಿ ಮಾಡಿಕೊಳ್ಳುವವರು ತಮ್ಮ ಗುರುತಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.