ನವದೆಹಲಿ: ಭಾರತೀಯ ವಾಯುಸೇನೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ಗಾಗಿ 62 ಏರ್ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಸಿ295 ಮೀಡಿಯಂ ಟ್ರಾನ್ಸ್ಪೋರ್ಟ್ ಏರ್ಕ್ರಾಫ್ಟ್ ಅನ್ನು ಖರೀದಿಸುವ ಸಲುವಾಗಿ ರಕ್ಷಣಾ ಸಚಿವಾಲಯ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ನಡುವಣ ದರ ನಿಗದಿಗೆ ಸಂಬಂಧಿಸಿದ ಮಾತುಕತೆಗಳು ಮುಕ್ತಾಯಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಮೀಡಿಯಂ ಟ್ರಾನ್ಸ್ಪೋರ್ಟ್ ಏರ್ಕ್ರಾಫ್ಟ್ ಉತ್ಪಾದನೆಗಾಗಿ ಏರ್ ಬಸ್ನೊಂದಿಗೆ TASL ಕೈಜೋಡಿಸಿದೆ. ರಕ್ಷಣಾ ಇಲಾಖೆಯ ಕಾಂಟ್ರಾಕ್ಟ್ ನೆಗೋಷಿಯೇಶನ್ ಕಮಿಟಿ (ಸಿಎನ್ಸಿ) ಈ ದರ ನಿಗದಿ ಸಮಾಲೋಚನೆಯಲ್ಲಿ ಒಳಗೊಂಡಿತ್ತು.
ಯುರೋ 2.8 ಶತಕೋಟಿ ($ 3.15 ಶತಕೋಟಿ) ವ್ಯವಹಾರ ಇದಾಗಿದ್ದು, ವಾಯುಸೇನೆಗೆ 56 C295 ಗಳನ್ನು ಪೂರೈಸಲಿದೆ. ಇದು ವಾಯುಸೇನೆ ಹಳೆಯ ಅವ್ರೋ 748M ಟ್ರಾನ್ಸ್ಪೋರ್ಟ್ ಮತ್ತು 6 ಐಸಿಜಿಗಳನ್ನು ರಿಪ್ಲೇಸ್ ಮಾಡಲಿದೆ. ಕೇಂದ್ರದಲ್ಲಿ ಹೊಸ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಈ ಒಪ್ಪಂದಕ್ಕೆ ಸಹಿ ಬೀಳುವ ನಿರೀಕ್ಷೆಯಿದೆ.
ಒಪ್ಪಂದದ ಪ್ರಕಾರ, 16 C295 ಗಳನ್ನು ಆಮದು ಮಾಡಲಾಗುತ್ತದೆ, ಉಳಿದ 46 ಏರ್ಕ್ರಾಫ್ಟ್ಗಳನ್ನು ಬೆಂಗಳೂರಿನ JV ಬಳಿ ಸ್ಥಾಪಿಸಲಾಗುವ ಸೌಲಭ್ಯದಲ್ಲಿ ಜೋಡಿಸಲಾಗುತ್ತದೆ. 2013 ರ ಎಟಿಎ ಟೆಂಡರ್ ಪ್ರಕಾರ, ಇವುಗಳಲ್ಲಿ 24ನ್ನು ಸ್ಥಳೀಯ ಅಸೆಂಬ್ಲಿಗಾಗಿ ಕಿಟ್-ಫಾರ್ಮ್ನಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ ಮತ್ತು ಇವುಗಳು ಶೇ. 30ರಷ್ಟು ಸ್ಥಳೀಯವಾದ ಅಂಶಗಳನ್ನು ಒಳಗೊಂಡಿರುತ್ತವೆ. ಉಳಿದ 22 ಪ್ಲಾಟ್ ಫಾರ್ಮ್ಗಳು ದೇಶೀಯ ತಯಾರಕರ ಮೂಲದಿಂದ ಪಡೆದ ಶೇ. 60ರಷ್ಟು ಅಂಶಗಳನ್ನು ಹೊಂದಲಿದೆ.
ಈ ಸ್ಥಳೀಯವಾಗಿ ಒಟ್ಟುಗೂಡಿದ C295 ಅನ್ನು ಒಪ್ಪಂದಕ್ಕೆ ಸಹಿ ಬಿದ್ದ 60 ತಿಂಗಳೊಳಗೆ ವಿತರಣೆ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.