ನವದೆಹಲಿ: ಮುಂದಿನ ಜನಗಣತಿ ಭಾರತದಲ್ಲಿ 2021ರ ವೇಳೆಗೆ ನಡೆಯಲಿದೆ ಎಂದು ಗೃಹ ಸಚಿವಾಲಯ ಗುರುವಾರ ಘೋಷಣೆ ಮಾಡಿದೆ. 2021ರ ಮಾರ್ಚ್ 1 ಜನಗಣತಿಗೆ ಉಲ್ಲೇಖ ದಿನಾಂಕ ಎಂದು ಅದು ತಿಳಿಸಿದೆ.
ಜನಗಣತಿ ಕಾಯ್ದೆ, 1948 (1948ರ 37) ಸೆಕ್ಷನ್ 3ರ ಅನ್ವಯ ನೀಡಲಾಗಿರುವ ಅಧಿಕಾರದ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಕೇಂದ್ರ ಗೃಹಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
‘ಭಾರತದ ಜನಸಂಖ್ಯಾ ಗಣತಿಯು 2021ರ ವರ್ಷದಲ್ಲಿ ನಡೆಯಲಿದೆ ಎಂದು ಸರ್ಕಾರ ಘೋಷಣೆ ಮಾಡುತ್ತದೆ. ಜಮ್ಮು ಕಾಶ್ಮೀರ ಮತ್ತು ಹಿಮ ಪೀಡಿತ ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶಗಳನ್ನು ಹೊರತುಪಡಿಸಿ ಜನಗಣತಿಯ ಉಲ್ಲೇಖ ದಿನಾಂಕ 2021ರ ಮಾರ್ಚ್ ಆಗಿದೆ’ ಎಂದು ಇದರಲ್ಲಿ ತಿಳಿಸಲಾಗಿದೆ.
ಜಮ್ಮು ಕಾಶ್ಮೀರ, ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಉಲ್ಲೇಖ ದಿನಾಂಕ 2020ರ ಅಕ್ಟೋಬರ್ ಆಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಕೊನೆಯ ಬಾರಿಗೆ ಜನಗಣತಿಯನ್ನು 2011ರಲ್ಲಿ ನಡೆಯಲಾಗಿತ್ತು, ಆ ವೇಳೆ ಭಾರತದ ಒಟ್ಟು ಜನಸಂಖ್ಯೆ 121 ಕೋಟಿಯಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.