ಚೆನ್ನೈ: ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿ ಇಡ್ಲಿಯನ್ನು ಬಳಸಿಕೊಂಡು, ಚೆನ್ನೈನ ಫುಡ್ ಅಸೋಸಿಯೇಶನ್ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಮತ್ತು ಈ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಲೇ ಬೇಕು ಎಂದು ಪ್ರೇರೇಪಿಸುತ್ತಿದೆ.
‘ಚುನಾವಣೆ ಹತ್ತಿರದಲ್ಲಿ ಇದೆ ಮತ್ತು ವಿಶ್ವ ಇಡ್ಲಿ ದಿನವನ್ನು ಮಾ. 30 ರಂದು ಆಚರಣೆ ಮಾಡಲಾಗುತ್ತಿದೆ. ಹೀಗಾಗಿ ವಿಭಿನ್ನ ರೀತಿಯ ಇಡ್ಲಿಗಳನ್ನು ಮಾಡಿ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ, ಜನರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ’ ಎಂದು ಇಡ್ಲಿ ತಯಾರಕ ಇನಿಯವನ್ ಹೇಳಿದ್ದಾರೆ.
125 ಕೆಜಿ ಅಕ್ಕಿಯನ್ನು ಬಳಸಿಕೊಂಡು ನೂರಾರು ಬಗೆಯ ಇಡ್ಲಿಗಳನ್ನು ಇವರು ತಯಾರು ಮಾಡಿದ್ದಾರೆ. ಈ ಇಡ್ಲಿಗಳು ಅಪಾರ ಪ್ರಮಾಣದ ಜನರನ್ನು ಆಕರ್ಷಿಸುತ್ತದೆ ಮತ್ತು ಅವರಿಗೆ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ ಎಂದು ಇನಿಯವನ್ ಹೇಳುತ್ತಾರೆ.
ಹಣಕ್ಕೆ ಮತವನ್ನು ಮಾರಾಟ ಮಾಡಬೇಡಿ ಎನ್ನುವ ಸಂದೇಶವನ್ನೂ ಇವರು ಇಡ್ಲಿಯ ಮೂಲಕ ರವಾನಿಸಿದ್ದಾರೆ.
ಇಡ್ಲಿಗಳ ಮೇಲೆ ಮತ ಚಲಾಯಿಸಿದ ಬೆರಳಿನ ಚಿತ್ರ, ವೋಟ್ ಮಾಡಿ ಎಂಬ ಸಂದೇಶ, ಮತದಾನದ ಮಹತ್ವ ಸಾರುವ ಸಂದೇಶಗಳನ್ನು ಬರೆಯಲಾಗಿದೆ. ವಿವಿಧ ಗಾತ್ರ, ಬಣ್ಣಗಳ ಮೂಲಕ ನೂರಾರು ಇಡ್ಲಿಗಳನ್ನು ತಯಾರು ಮಾಡಲಾಗಿದೆ. ಮಾ.30ರಂದು ವಿಶ್ವ ಇಡ್ಲಿ ದಿನ, ಇದರ ಅಂಗವಾಗಿ ಮತದಾನ ಥೀಮ್ ಇಟ್ಟುಕೊಂಡು ಬಗೆಬಗೆಯ ಇಡ್ಲಿಗಳನ್ನು ಫುಡ್ ಅಸೋಸಿಯೇಶನ್ ತಯಾರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.