ನವದೆಹಲಿ: ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ, ಯುನೈಟೆಡ್ ಬ್ರೆವೆರೀಸ್ ಲಿಮಿಟೆಡ್(ಯುಬಿಎಲ್)ಗೆ ಸೇರಿದ ಷೇರುಗಳ ಮಾರಾಟವನ್ನು ಮಾಡಿ ಜಾರಿನಿರ್ದೇಶನಾಲಯವು 1,008 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ.
ಈ ಷೇರುಗಳು, ವಾಸ್ತವವಾಗಿ ಸಾಲಗಳಿಗೆ ಒತ್ತೆಯಾಗಿದ್ದವು, ಬಳಿಕ ಇವುಗಳು ಕೆಟ್ಟ ಸಾಲವಾಗಿ ಪರಿವರ್ತನೆಗೊಂಡವು. ಮಲ್ಯ ಪಾವತಿ ಮಾಡದೇ ಇರುವ ಸಾಲಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯ ಭಾಗಿವಾಗಿ ಈ ಷೇರುಗಳನ್ನು ಮಾರಾಟ ಮಾಡಲಾಗಿದೆ.
ಹಣಕಾಸು ವಂಚನೆ ಕಾಯ್ದೆಯಡಿ ಸುಪ್ರೀಂಕೋರ್ಟ್ ರಚನೆ ಮಾಡಿರುವ ವಿಶೇಷ ನ್ಯಾಯಾಲಯ ಮಂಗಳವಾರ ಷೇರುಗಳ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು.
ಜಾರಿ ನಿರ್ದೇಶನಾಲಯವು, ಒಟ್ಟು 74,04,932 ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿತ್ತು. ಇದು ಯುಬಿಎಲ್ನ ಒಟ್ಟು ಷೇರುಗಳ ಪೈಕಿ ಶೇ.2.80ರಷ್ಟಾಗಿದೆ. ಇದರ ಸರಾಸರಿ ಮೊತ್ತ ರೂ.1,61.25 ಆಗಿತ್ತು.
ತನ್ನ ಕಿಂಗ್ ಫಿಶರ್ ಏರ್ ಲೈನ್ಸ್ ನಷ್ಟ ಅನುಭವಿಸಿದ ಬಳಿಕ, ಮಲ್ಯ ಅವರು 9 ಸಾವಿರ ಕೋಟಿ ರೂಪಾಯಿ ಸಾಲವನ್ನು ಮರುಪಾವತಿ ಮಾಡದೆ ವಿದೇಶಕ್ಕೆ ಓಡಿ ಹೋಗಿದ್ದರು. ಇದೀಗ ಅವರ ವಿರುದ್ಧ ವಿವಿಧ ಪ್ರಕರಣಗಳನ್ನು ಹಾಕಲಾಗಿದೆ ಮತ್ತು ಸಾಲ ಮರುಪಾವತಿ ಪ್ರಕ್ರಿಯೆಯನ್ನು ನಡೆಸುತ್ತಿದೆ. ಪ್ರಸ್ತುತ ಯುಕೆಯಲ್ಲಿ ಮಲ್ಯ ಇದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.