ನವದೆಹಲಿ: ಭಾರತೀಯ ಸೇನೆಯು ಈ ವರ್ಷದ ಅಂತ್ಯದ ವೇಳೆಗೆ ‘ಮೇಡ್ ಇನ್ ಇಂಡಿಯಾ’ ಎಂ777 ಹೊವಿಟ್ಜರ್ ಗನ್ಗಳನ್ನು ಹೊಂದಲಿದೆ. 2019ರ ನಾಲ್ಕನೇ ತ್ರೈಮಾಸಿಕದಲ್ಲಿ ಮಹೇಂದ್ರ ಡಿಫೆನ್ಸ್ ಫೆಸಿಲಿಟಿ ಈ ಗನ್ಗಳನ್ನು ಹೊರತರಲಿದೆ ಎಂದು ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಡಿಯಲ್ಲಿ 145 ಅಲ್ಟ್ರಾ-ಲೈಟ್ವೇಟ್ ಹೊವಿಟ್ಜರ್ ಗನ್ಗಳನ್ನು ಖರೀದಿ ಮಾಡುವ ಸಲುವಾಗಿ ಭಾರತೀಯ ಸೇನೆಯು ಯುಕೆ ಮೂಲದ ಬಿಎಇ ಸಿಸ್ಟಮ್ಸ್ಗೆ ಆರ್ಡರ್ ನೀಡಿತ್ತು. ಬಿಎಇ ಸಿಸ್ಟಮ್ಸ್ ಸಂಸ್ಥೆಯು ಮಹೇಂದ್ರ ಡಿಫೆನ್ಸ್ನೊಂದಿಗೆ ಟೈ ಅಪ್ ಮಾಡಿಕೊಂಡು 750 ಮಿಲಿಯನ್ ಡಾಲರ್ ಡೀಲ್ ಅನ್ನು ಪೂರ್ಣಗೊಳಿಸಲಿದೆ. 145 ಗನ್ ಗಳ ಪೈಕಿ 25 ಗನ್ಗಳು ಯುಕೆಯಿಂದ ಬರಲಿದೆ, ಉಳಿದ 120 ಗನ್ ಗಳನ್ನು ಮಹೇಂದ್ರ ಡಿಫೆನ್ಸ್ ಫೆಸಿಲಿಟಿಯಲ್ಲಿ ಜೋಡಣೆ ಮಾಡಲಾಗುತ್ತದೆ.
ಎಂ777 ಹೊವಿಟ್ಜರ್ ಗನ್ಗಳ ಸಂಪೂರ್ಣ ಸಂಯೋಜನೆ, ಪರೀಕ್ಷೆಗಳು ಭಾರತದಲ್ಲೇ ನಡೆಯಲಿದೆ ಎಂದು ಬಿಎಇ ಸಿಸ್ಟಮ್ ಇಂಡಿಯಾದ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ಖನ್ನಾ ತಿಳಿಸಿದ್ದಾರೆ.
‘ಎಂ777 ಗಳ ಪ್ರೋಗ್ರಾಂ ಡೆಲಿವರಿಯಲ್ಲಿ 1.5 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. 145 ಫಾರಿನ್ ಮಿಲಿಟರಿ ಸೇಲ್ಗಳ ಪೈಕಿ 5 ಗನ್ಗಳನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಲಾಗಿದೆ. ಮಹೇಂದ್ರದ ಜೊತೆಗಿನ ಟೈ ಅಪ್ , ಮೇಕ್ ಇನ್ ಇಂಡಿಯಾ ಬಗೆಗಿನ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಇದರ ಸಂಪೂರ್ಣ ಸಂಯೋಜನೆ, ಪರೀಕ್ಷೆ ಇತ್ಯಾದಿಗಳು ಮಹೇಂದ್ರ ಡಿಫೆನ್ಸ್ ಫೆಸಿಲಿಟಿಯಲ್ಲೇ ನಡೆಯುತ್ತದೆ’ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.