ನವದೆಹಲಿ: ಭಾರತದ ಅತೀದೊಡ್ಡ ಖಾಸಗಿ ಬಂದರು ಆಪರೇಟರ್, ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ 2018-19ರಲ್ಲಿ 200 ಮಿಲಿಯನ್ ಟನ್ ಸರಕನ್ನು ನಿರ್ವಹಣೆ ಮಾಡುವ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಪೋರ್ಟ್ ಆಪರೇಟರ್ ಆಗಿ ಹೊರಹೊಮ್ಮಿದೆ.
‘ಭಾರತದ ಅತೀದೊಡ್ಡ ಖಾಸಗಿ ಪೋರ್ಟ್ ಆಪರೇಟರ್ 200 ಮಿಲಿಯನ್ ಮೆಟ್ರಿಕ್ ಟನ್ಗಳಷ್ಟು ಸರಕನ್ನು ನಿರ್ವಹಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಸಾಧನೆಯನ್ನು ಮಾಡಿದ ದೇಶದ ಮೊದಲ ಪೋರ್ಟ್ ಆಪರೇಟರ್ ಆಗಿ ಹೊರಹೊಮ್ಮಿದೆ. ಈ ಸಾಧನೆ ಅಷ್ಟು ಸುಲಭದ್ದಾಗಿರಲಿಲ್ಲ’ ಎಂದು ಸಂಸ್ಥೆ ಪ್ರಕಟನೆಯಲ್ಲಿ ಹೇಳಿಕೊಂಡಿದೆ.
‘2020ರಲ್ಲಿ ಈ ಗುರಿಯನ್ನು ತಲುಪಬೇಕು ಎಂಬ ನಿರೀಕ್ಷೆ ನಮ್ಮದಾಗಿತ್ತು, ಆದರೆ ನಿರೀಕ್ಷೆಗೂ ಮೀರಿ ಅವಧಿಗೆ ಮುನ್ನವೇ ಈ ಸಾಧನೆಯನ್ನು ಮಾಡಿದ್ದೇವೆ. ಕಾರ್ಯಾಚರಣಾ ಸಮರ್ಪಕತೆ ಮತ್ತು ವೃದ್ಧಿಗೊಂಡ ಆಸ್ತಿ ಬಳಕೆ ಇದಕ್ಕೆ ಕಾರಣ’ ಎಂದು ಕರಣ್ ಅದಾನಿ ಹೇಳಿದ್ದಾರೆ.
ಪ್ರಸ್ತುತ ಅದಾನಿ ಆಪರೇಟರ್ಸ್ 10 ಬಂದರು ಮತ್ತು ಟರ್ಮಿನಲ್ಸ್ಗಳನ್ನು ಅಂದರೆ ದೇಶದ ಶೇ.24ರಷ್ಟು ಪೋರ್ಟ್ ಸಾಮರ್ಥ್ಯವನ್ನು ನಿರ್ವಹಣೆ ಮಾಡುತ್ತಿದೆ. ಈ ಸಂಸ್ಥೆ 10 ಸಾವಿರ ಉದ್ಯೋಗಗಳನ್ನು ಸೃಷ್ಟಿಸಿದೆ, 25 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ’ ಎಂದು ಅದಾನಿ ಹೇಳಿದ್ದಾರೆ.
2025 ರ ವೇಳೆ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಅದಾನಿ ಆಪರೇಟರ್ಸ್ ಕಾರ್ಯೋನ್ಮುಖಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.