ನವದೆಹಲಿ: ‘ಎ ಸ್ಯಾಟ್’ ಆ್ಯಂಟಿ ಸೆಟ್ಲೈಟ್ ಮಿಸೈಲ್ ಅನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಭಾರತ ‘ಸ್ಪೇಸ್ ಸೂಪರ್ ಪವರ್’ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ. ಪ್ರತಿ ವಿಶೇಷತೆಯನ್ನು ವಿಶೇಷವಾಗಿ ಆಚರಿಸುವ ಅಮೂಲ್ , ಈ ಐತಿಹಾಸಿಕ ಕ್ಷಣವನ್ನೂ ಅತ್ಯಂತ ವಿಶೇಷವಾಗಿ ಆಚರಿಸಿದೆ.
ಅಮೂಲ್ ಬಾಲೆ ಬಾಹ್ಯಾಕಾಶದಲ್ಲಿರುವಂತೆ ಚಿತ್ರವನ್ನು ಬಿಡಿಸಲಾಗಿದ್ದು, ‘A SATisfying Dish!’ ಎಂಬ ಕ್ಯಾಪ್ಷನ್ ನೀಡಲಾಗಿದೆ. ಕೆಳಗೆ ‘ಮಖನ್ ಶಕ್ತಿ’ ಎಂದು ಬರೆಯಲಾಗಿದೆ. ಅತ್ಯಂತ ಸೃಜನಾತ್ಮಕವಾಗಿ ಅಮೂಲ್ನ ಹೊಸ ಪೋಸ್ಟರ್ ಮೂಡಿ ಬಂದಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ‘ಮಿಶನ್ ಶಕ್ತಿ’ ಯಶಸ್ವಿಯಾಗಿದೆ ಎಂದು ಘೋಷಣೆ ಮಾಡಿದ್ದರು. ಕೆಳಸ್ಥರದಲ್ಲಿದ್ದ ಸಕ್ರಿಯ ಬೇಹುಗಾರಿಕಾ ಸೆಟ್ಲೈಟ್ವೊಂದನ್ನು ಎ-ಸ್ಯಾಟ್ ಹೊಡೆದುರುಳಿಸಿತ್ತು. ಭಾರತದ ಪಾಲಿಗೆ ಇದು ಅತ್ಯಂತ ಸ್ಮರಣೀಯ ದಿನವಾಗಿದೆ.
ಇದುವರೆಗೆ ಅಮೆರಿಕಾ, ರಷ್ಯಾ, ಚೀನಾ ಮಾತ್ರ ಈ ತಂತ್ರಜ್ಞಾನವನ್ನು ಹೊಂದಿತ್ತು, ಇದೀಗ ಆ ಸಾಲಿಗೆ ಭಾರತ ಸೇರ್ಪಡೆಗೊಂಡಿದೆ.
ಈ ಐತಿಹಾಸಿಕ ಸಾಧನೆಯನ್ನು ಸೃಜನಾತ್ಮಕವಾಗಿ ಸಂಭ್ರಮಿಸಿದ ಅಮೂಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳು ವ್ಯಕ್ತವಾಗಿದೆ. ಅಮೂಲ್ ಉತ್ಪನ್ನಗಳಂತೆಯೇ ಅಮೂಲ್ ಸೃಜನಾತ್ಮಕತೆ ಸ್ವಾದಿಷ್ಟವಾಗಿರುತ್ತದೆ ಎಂದು ಹಲವಾರು ಮಂದಿ ಅಭಿಪ್ರಾಯಿಸಿದ್ದಾರೆ.
#Amul Topical: India, 4th nation to test Anti-Satellite missile! pic.twitter.com/BNlCzDf4HK
— Amul.coop (@Amul_Coop) March 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.