ನವದೆಹಲಿ: ರಾಷ್ಟ್ರೀಯ ಭದ್ರತಾ ವಿಷಯಗಳು, ವಿಪತ್ತು ನಿರ್ವಹಣಾ ವಿಷಯಗಳ ಬಗೆಗಿನ ಘೋಷಣೆಗಳು ಚುನಾವಣಾ ನೀತಿ ಸಂಹಿತೆಯಡಿಯಲ್ಲಿ ಬರುವುದಿಲ್ಲ ಎಂದು ಬುಧವಾರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಡಿದ ‘ಮಿಶನ್ ಶಕ್ತಿ’ ಬಗೆಗಿನ ಘೋಷಣೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುವುದಿಲ್ಲವೇ ಎಂಬ ಬಗೆಗಿನ ಅನುಮಾನಗಳಿಗೆ ಉತ್ತರವಾಗಿ ಚುನಾವಣಾ ಆಯೋಗ ಈ ಸ್ಪಷ್ಟನೆಯನ್ನು ನೀಡಿದೆ.
‘ಭದ್ರತೆಯ ಮೇಲಿನ ಸಂಪುಟ ಸಮಿತಿಯು ಸಭೆಯನ್ನು ಇಂದು ಬೆಳಿಗ್ಗೆ ನಡೆಸಿತ್ತು. ಅದು ತೆಗೆದುಕೊಂಡ ನಿರ್ಧಾರಗಳು ಮತ್ತು ವಿಪತ್ತು ನಿರ್ವಹಣೆಗಳು ಯಾವುದೇ ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಬರುವುದಿಲ್ಲ ಮತ್ತು ಅದರ ಬಗೆಗಿನ ಘೋಷಣೆಗೆ ಯಾವುದೇ ಪೂರ್ವ ಅನುಮತಿಗಳ ಅಗತ್ಯವಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚುನಾವಣೆಯ ದಿನಾಂಕ ನಿಗದಿಯಾದ ಬಳಿಕ ಸರ್ಕಾರಗಳು ಯಾವುದೇ ಹೊಸ ಘೋಷಣೆಗಳನ್ನು ಹೊರಡಿಸುವಂತಿಲ್ಲ ಎಂಬ ನಿಯಮವಿದೆ. ಆದರೆ ರಕ್ಷಣೆಯ ಸಂಬಂಧಿತ ವಿಚಾರದಲ್ಲಿ ಇದು ಅನ್ವಯವಾಗುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಇಂದು ಮಿಶನ್ ಶಕ್ತಿಯನ್ನು ಘೋಷಣೆ ಮಾಡಿ, ಭಾರತದ ಆ್ಯಂಟಿ ಸೆಟ್ಲೈಟ್ ಮಿಸೈಲ್ ಹೊಂದಿದ ದೇಶದ ನಾಲ್ಕನೆಯ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂಬುದನ್ನು ಘೋಷಣೆ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.