ನವದೆಹಲಿ: ಭಾರತದಲ್ಲಿ ಆನ್ಲೈನ್ ಫುಡ್ ಡೆಲಿವರಿ ಮಾರುಕಟ್ಟೆ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಹೊಸ ಅಧ್ಯಯನ ವರದಿಯೊಂದರ ಪ್ರಕಾರ, 2023ರ ವೇಳೆಗೆ ಭಾರತದ ಆನ್ ಲೈನ್ ಫುಡ್ ಡೆಲಿವರಿ ಮಾರುಕಟ್ಟೆಯು ವಾರ್ಷಿಕ ಶೇ.16ರಷ್ಟು ಪ್ರಗತಿ ದರದೊಂದಿಗೆ ರೂ.1,700 ಕೋಟಿಗೆ ಏರಿಕೆಯಾಗಲಿದೆ.
ಬ್ಯುಸಿನೆಸ್ ಕನ್ಸಲ್ಟೆನ್ಸಿ ಸಂಸ್ಥೆಯಾದ ಮಾರ್ಕೆಟ್ ರಿಸರ್ಚ್ ಫ್ಯೂಚರ್ ಪ್ರಕಟಿಸಿರುವ, ‘Digital Platforms Reign in the Food Ordering Market’ ವರದಿಯಲ್ಲಿ, 2023ರ ವೇಳೆಗೆ ಭಾರತದ ಆನ್ ಲೈನ್ ಫುಡ್ ಡೆಲಿವರಿ ಮಾರುಕಟ್ಟೆಯು ಶೇ.16ರಷ್ಟು ಬೆಳವಣಿಗೆಯೊಂದಿಗೆ $17.02 ಬಿಲಿಯನ್ಗೆ ಏರಿಕೆಯಾಗಲಿದೆ’ ಎಂದು ತಿಳಿಸಿದೆ.
ವರದಿಯ ಪ್ರಕಾರ, ಬೆಂಗಳೂರು ಅತೀ ಹೆಚ್ಚು ಪ್ರಮಾಣದ ಆನ್ಲೈನ್ ಫುಡ್ ಡೆಲಿವರಿಗೆ ಆರ್ಡರ್ ಮಾಡುತ್ತದೆ. ಇತರ ನಗರಗಳಿಗೆ ಹೋಲಿಸಿದರೆ ಮಾರುಕಟ್ಟೆ ಪಾಲಿನಲ್ಲಿ ಶೇ.20ರಷ್ಟನ್ನು ಬೆಂಗಳೂರು ಹೊಂದಿದೆ. ಮುಂಬಯಿ ಶೇ.18ರಷ್ಟು, ಪುಣೆ, ಶೇ.17ರಷ್ಟು, ದೆಹಲಿ ಶೇ.15ರಷ್ಟು, ಹೈದರಾಬಾದ್ ಶೇ.12ರಷ್ಟು ಮಾರುಕಟ್ಟೆಯನ್ನು ಹೊಂದಿದೆ.
ಲಂಚ್ (ಮಧ್ಯಾಹ್ನದ ಊಟ) ಅನ್ನೇ ಹೆಚ್ಚಿನ ಪ್ರಮಾಣದಲ್ಲಿ ಜನರು ಆನ್ಲೈನ್ ಮೂಲಕ ತರಿಸುತ್ತಿದ್ದಾರೆ ಮತ್ತು ಪಾವತಿಸಲು ಕಾರ್ಡ್ ಬಳಕೆ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.
ಆಫರ್ ಮತ್ತು ಡಿಸ್ಕೌಂಟ್ಗಳಿಂದಾಗಿ ತಾವು ಆನ್ಲೈನ್ ಆರ್ಡರ್ ಮಾಡುವುದಾಗಿ ಶೇ.95ರಷ್ಟು ಜನರು ಅಭಿಪ್ರಾಯಪಟ್ಟರೆ, ಶೇ.84ರಷ್ಟು ಜನರು ಕಿರಿಕಿರಿ ಮುಕ್ತವಾಗಿರಲು ಮತ್ತು ಸಮಯದ ಉಳಿತಾಯ ಮಾಡಲು ಫುಡ್ ಆರ್ಡರ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.