ನವದೆಹಲಿ: ಭಾರತೀಯ ಸೇನೆಯ ಐದು ಅಧಿಕಾರಿಗಳು, ಇಬ್ಬರು ಜೆಸಿಓಗಳು ಮತ್ತು 11 ಓಆರ್ಗಳನ್ನು ಒಳಗೊಂಡ ತಂಡ ಮಂಗಳವಾರ ಡೈರೆಕ್ಟರ್ ಜನರಲ್ ಮಿಲಿಟರಿ ಟ್ರೈನಿಂಗ್ನಿಂದ ಮೌಂಟ್ ಮಕಲುಗೆ ಪರ್ವತಾರೋಹಣವನ್ನು ಆರಂಭಿಸಿದೆ. ಇದು ಭಾರತೀಯ ಸೇನೆಯ ಮೊದಲ ಮೌಂಟ್ ಮಕಲು ಪರ್ವತಾರೋಹಣವಾಗಿದೆ. 8000 ಮೀಟರ್ ಎತ್ತರದಲ್ಲಿರುವ ಈ ಶಿಖರವನ್ನು ಏರುವುದು ಅತೀ ದೊಡ್ಡ ಸವಾಲಿನ ಕಾರ್ಯವಾಗಿದೆ.
ಮೌಂಟ್ ಮಕುಲು ಅನ್ನು ಜಗತ್ತಿನ ಅತ್ಯಂತ ಅಪಾಯಕಾರಿ ಶಿಖರಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ, ಅತೀ ಕಠಿಣ ಹವಮಾನ ಪರಿಸ್ಥಿತಿಗಳು, ಕೊರೆಯುವ ಚಳಿಯಿಂದಾಗಿ ಈ ಶಿಖರವನ್ನು ಏರುವುದು ದೊಡ್ಡ ಸವಾಲಿನ ಕಾರ್ಯವಾಗಿದೆ. ತಾಂತ್ರಿಕ ಚಾಣಾಕ್ಷತನ, ಮಾನಸಿಕ ಮತ್ತು ದೈಹಿಕ ಧೈರ್ಯ ಮತ್ತು ಪರ್ವತಾರೋಹಿಗಳ ಶ್ರದ್ಧೆಯನ್ನು ಮೌಂಟ್ ಮಕಲ್ ಪರ್ವಾತರೋಹಣ ಪರೀಕ್ಷೆ ಮಾಡುತ್ತದೆ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ.
ಆರು ತಿಂಗಳುಗಳ ಕಾಲ ಸೇನೆಯ ತಂಡವನ್ನು ತರಬೇತಿಗೊಳಿಸಲಾಗಿದೆ. ಅವರಿಗೆ ಮೌಂಟ್ ಕಮೆಟ್ ಏರುವ ಮತ್ತು ಚಳಿಗಾಲದಲ್ಲಿ ಮೌಂಟ್ ಭನೋಟಿ ಏರುವ ಸವಾಲುಗಳನ್ನು ನೀಡಲಾಗಿತ್ತು. ಅದನ್ನು ಪೂರ್ಣಗೊಳಿಸಿರುವ ತಂಡ ಮೌಂಟ್ ಮಕಲು ಆರೋಹಣವನ್ನು ಆರಂಭಿಸಿದೆ.
ದೆಹಲಿಯಿಂದ ತಂಡ ಪರ್ವತಾರೋಹಣ ಮಿಶನನ್ನು ಆರಂಭಿಸಲಿದೆ ಮತ್ತು ಮೌಂಟ್ ಮಕಲು ದಾರಿಯುದ್ದಕ್ಕೂ 6 ಶಿಬಿರಗಳನ್ನು ರಚಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.