ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಮನೋಹರ್ ಅಜ್ಗಾಂಕರ್ ಮತ್ತು ದೀಪಕ್ ಪವಸ್ಕರ್ ಅವರು ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಅಲ್ಲದೇ, ಗೋವಾ ವಿಧಾನಸಭೆ ಸ್ಪೀಕರ್ ಮೈಕಲ್ ಲೊಬೊ ಅವರಿಗೆ ತಡರಾತ್ರಿ 1:45 ರ ಸುಮಾರಿಗೆ ಪತ್ರವೊಂದನ್ನು ನೀಡಿ, ಬಿಜೆಪಿಯೊಂದಿಗೆ ಎಂಜಿಪಿಯನ್ನು ವಿಲೀನಗೊಳಿಸುವಂತೆ ಮನವಿ ಮಾಡಿದ್ದರು. ಸ್ಪೀಕರ್ ಅವರು ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಈ ಪತ್ರಕ್ಕೆ ಮಹಾರಾಷ್ಟ್ರವಾದಿ ಪಕ್ಷದ ಮತ್ತೋರ್ವ ಸದಸ್ಯ ಹಾಗೂ ಉಪಮುಖ್ಯಮಂತ್ರಿ ಸುದಿನ್ ದವಾಲಿಕರ್ ಅವರು ಮಾತ್ರ ಸಹಿಯನ್ನು ಮಾಡಿಲ್ಲ.
ಈ ಬೆಳವಣಿಗೆಯಿಂದಾಗಿ ಪ್ರಸ್ತುತ ಗೋವಾದಲ್ಲಿ ಬಿಜೆಪಿಗೆ 3 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 20 ಮಂದಿ ಶಾಸಕರ ಬೆಂಬಲ ಸಿಕ್ಕಂತಾಗಿದೆ.
ಗೋವಾ ಸಿಎಂ ಆಗಿದ್ದ ಮನೋಹರ್ ಪರಿಕ್ಕರ್ ಅವರ ನಿಧನದ ಬಳಿಕ, ಗೋವಾದ ನೂತನ ಸಿಎಂ ಆಗಿ ಪ್ರಮೋದ್ ಸಾವಂತ್ ಅವರು ನೇಮಕವಾದರು. ಅವರಿಗೆ ಗೋವಾ ಫಾರ್ವರ್ಡ್ ಪಕ್ಷ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಬೆಂಬಲವನ್ನು ನೀಡಿತ್ತು. ಇದೀಗ ಇದರಲ್ಲಿ ಒಂದು ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಳ್ಳಲು ಸಜ್ಜಾಗಿರುವುದು ಗೋವಾ ಬಿಜೆಪಿಗೆ ಆನೆ ಬಲ ಬಂದಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.