ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಎರಡನೇ ಕಂತಿನ ಹಣವನ್ನು ಮುಂದಿನ ತಿಂಗಳು ದೇಶದ 4.74 ಕೋಟಿ ರೈತರಿಗೆ ವರ್ಗಾವಣೆ ಮಾಡಲಿದೆ. ಮೋದಿ ಸರಕಾರ ಕಳೆದ ಬಜೆಟ್ ನಲ್ಲಿ ಸಣ್ಣ ರೈತರಿಗೆ ವಾರ್ಷಿಕ ಆರು ಸಾವಿರ ರೂಪಾಯಿಗಳ ಧನಸಹಾಯವನ್ನು ನೀಡುವುದಾಗಿ ಘೋಷಣೆ ಮಾಡಿತ್ತು, ಇದರ ಅನ್ವಯ ಎರಡು ಎಕರೆಯವರೆಗೆ ಭೂಮಿಯನ್ನು ಹೊಂದಿರುವ ರೈತರಿಗೆ ಧನ ಸಹಾಯ ಸಿಗಲಿದೆ. 2018 ರ ಡಿಸೆಂಬರ್ 1ರಂದು ಈ ಯೋಜನೆಯನ್ನು ಆರಂಭಿಸಲಾಯಿತು, ಈ ಯೋಜನೆಯು ದೇಶದ 12 ಕೋಟಿ ರೈತರಿಗೆ ಪ್ರಯೋಜನಕಾರಿಯಾಗಿದ್ದು, ಆರ್ಥಿಕ ಭದ್ರತೆಯನ್ನು ಒದಗಿಸಲಿದೆ. ಯೋಜನೆಗಾಗಿ ಕೇಂದ್ರ ಸರಕಾರವು ಬಜೆಟ್ ನಲ್ಲಿ ಈ ಹಣಕಾಸು ವರ್ಷಕ್ಕೆ 20 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ ಮತ್ತು ಮುಂದಿನ ಹಣಕಾಸು ವರ್ಷಕ್ಕೆ 75 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ. ಈಗಾಗಲೇ ಮೊದಲ ಕಂತಿನ ಹಣವನ್ನು 2 ಕೋಟಿ ರೈತರಿಗೆ ಪಾವತಿ ಮಾಡಲಾಗಿದೆ. ಮೊದಲ ಕಂತಿನಲ್ಲಿ ಎರಡು ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ.
ಇನ್ನೂ ಎರಡು ಕೋಟಿ ರೈತರು ತಮ್ಮ ಎರಡನೇ ಕಂತನ್ನು ಈ ಹಣಕಾಸು ವರ್ಷದ ಅಂತ್ಯದ ತಿಂಗಳಾದ ಮಾರ್ಚ್ 31ರೊಳಗೆ ಪಡೆಯಲಿದ್ದಾರೆ. ಇದುವರೆಗೆ ಈ ಯೋಜನೆಯಡಿ ಸರ್ಕಾರವು 5,400 ಕೋಟಿಗಳನ್ನು ಹಂಚಿಕೆ ಮಾಡಿದೆ, ಈ ಹಣಕಾಸುವ ವರ್ಷದ ಅಂತ್ಯದೊಳಗೆ ಮತ್ತೆ 2 ಕೋಟಿ ರೈತರಿಗೆ 4,000 ಕೋಟಿಗಳನ್ನು ಹಂಚಿಕೆ ಮಾಡಲಿದೆ. ಮಾರ್ಚ್ 10ರಂದು ಚುನಾವಣಾ ಆಯೋಗವು ಚುನಾವಣಾ ದಿನಾಂಕವನ್ನು ನಿಗದಿಪಡಿಸಿದ ಕಾರಣ ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಇದರಿಂದಾಗಿ ಈ ಹಣಕಾಸು ವರ್ಷದಲ್ಲಿ ಸರಕಾರಕ್ಕೆ ಈ ಯೋಜನೆಯ 10,000 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಯೊಬ್ಬರು ದೇಶದ ಸುಮಾರು 12 ಕೋಟಿ ರೈತರ ದಾಖಲೆಯನ್ನು ಪಡೆಯಲು ನಾವು ಯಶಸ್ವಿಯಾಗಿದ್ದೇವೆ ಎಂಬ ಭರವಸೆ ಇದೆ. ಈಗಾಗಲೇ 4.74 ಕೋಟಿ ರೈತರ ದಾಖಲೆಯು ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ನಮ್ಮ ಕೈ ಸೇರಿದೆ’ ಎಂದಿದ್ದಾರೆ.
ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಅನುಷ್ಠಾನಗೊಳಿಸಲಾಗಿರುವ ನಿರ್ಬಂಧಗಳಿಂದಾಗಿ ಸರಕಾರಕ್ಕೆ 2018-19ರ ಎಪ್ರಿಲ್ – ಜನವರಿಯಲ್ಲಿ 7.71 ಲಕ್ಷ ಕೋಟಿಗೆ ತಲುಪಿರುವ ವಿತ್ತೀಯ ಕೊರತೆಯನ್ನು ಸರಿದೂಗಿಸಲು ನೆರವಾಗಲಿದೆ. ಇದು ಪೂರ್ತಿ ವರ್ಷದ ಪರಿಷ್ಕೃತ ಗುರಿಯಾದ 6.34 ಲಕ್ಷ ಕೋಟಿ ರೂಪಾಯಿಗಳ 121.5% ರಷ್ಟಿದೆ.
ಬಿಜೆಪಿಯೇತರ ಸರ್ಕಾರವುಳ್ಳ ರಾಜ್ಯಗಳು ಇದುವರೆಗೆ ಅರ್ಹ ರೈತರ ದಾಖಲೆಗಳನ್ನು ಪಿಎಂ-ಕಿಸಾನ್ ಪೋರ್ಟಲ್ಗೆ ಅಪ್ಲೋಡ್ ಮಾಡಿಲ್ಲ, ರೈತರಿಗೆ ಹಣ ವರ್ಗಾವಣೆಯಾದರೆ ಬಿಜೆಪಿಗೆ ಚುನಾವಣೆಯಲ್ಲಿ ಲಾಭವಾಗುತ್ತದೆ ಎಂಬ ಭಯಕ್ಕೆ ಈ ರೀತಿ ಮಾಡಿವೆ. ಪಶ್ಚಿಮಬಂಗಾಳ, ಕರ್ನಾಟಕ, ದೆಹಲಿಗಳು ಅಪಾರ ಪ್ರಮಾಣದ ರೈತರನ್ನು ಯೋಜನೆಯಿಂದ ಹೊರಗಿಟ್ಟಿವೆ. ಒಂದು ವೇಳೆ ಪಶ್ಚಿಮಬಂಗಾಳ ರೈತರ ಹೆಸರುಗಳನ್ನು ಅಪ್ ಲೋಡ್ ಮಾಡಿದ್ದರೆ, ಈಗಾಗಲೇ ಅಲ್ಲಿನ 67.11 ಲಕ್ಷ ರೈತರಿಗೆ 2 ಸಾವಿರ ರೂಪಾಯಿ ವರ್ಗಾವಣೆಯಾಗುತ್ತಿತ್ತು ಎಂದು ಕೃಷಿ ಸಚಿವ ರಾಧ ಮೋಹನ್ ಸಿಂಗ್ ಹೇಳಿದ್ದಾರೆ. ಇದೇ ರೀತಿ ದೆಹಲಿಯ 15,580 ರೈತರು ತಮಗೆ ಮೀಸಲಾಗಿದ್ದ 3 ಕೋಟಿ ರೂಪಾಯಿಗಳಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ರಾಜ್ಯ ಸರ್ಕಾರಗಳ ಅಸಡ್ಡೆಯಿಂದಾಗಿ ಬಿಜೆಪಿಯೇತರ ರಾಜ್ಯಗಳ ರೈತರು ಪಿಎಂ-ಕಿಸಾನ್ ಯೋಜನೆಯ ಫಲಗಳನ್ನು ಪಡೆಯಲು ವಂಚಿತರಾಗಿದ್ದಾರೆ.
ಪಿಎಂ-ಕಿಸಾನ್ ಯೋಜನೆಯು ರಾಜಕೀಯದ ಸಂತ್ರಸ್ಥನಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರ ದೇಶದ ರೈತರಿಗೆ ದಿನಕ್ಕೆ ರೂ.17ನ್ನು ನೀಡುವ ಮೂಲಕ ಅವಮಾನ ಮಾಡುತ್ತಿದೆ ಎಂದು ಆರೋಪಿಸಿದ್ದರು. ಆದರೆ ಅವರು ಈ ಯೋಜನೆಯ ಹಣ ರೈತರ ಮೂಲ ಆದಾಯಕ್ಕೆ ಸಲ್ಲಿಕೆಯಾಗುತ್ತಿಲ್ಲ ಎಂಬ ಸರಳ ವಿಷಯವನ್ನೂ ಅರ್ಥಮಾಡಿಕೊಳ್ಳುವಲ್ಲಿ ಅವರು ವಿಫಲವಾಗಿದ್ದಾರೆ. ಇದು ರೈತರ ಆದಾಯಕ್ಕೆ ಹೆಚ್ಚುವರಿಯಾಗಿ ನೀಡಲಾಗುತ್ತಿರುವ ಧನ ಸಹಾಯ. ಧನ ಸಹಾಯ ಅವರ ಎಲ್ಲ ಖರ್ಚು ವೆಚ್ಚಗಳನ್ನು ಸರಿದೂಗಿಸುವುದಿಲ್ಲ, ಕಷ್ಟದ ಸಂದರ್ಭದಲ್ಲಿ ಅವರ ಒತ್ತಡವನ್ನು ಕಡಿಮೆಗೊಳಿಸುತ್ತದೆ.
ರಫ್ತುಗಳನ್ನು ಹೆಚ್ಚು ಮಾಡುವ ಮೂಲಕ ಸರ್ಕಾರ ಉತ್ಪಾದನಾ ಪೂರ್ವ ಸಮಸ್ಯೆಯನ್ನು ನೀಗಿಸಲು ಶ್ರಮಿಸುತ್ತಿದೆ. ಬಳಕೆಗಿಂತ ಹೆಚ್ಚು ಉತ್ಪಾದನೆಗೊಂಡರೆ ಬೆಳೆಗಳ ದರ ಕುಸಿಯುತ್ತದೆ, ಈ ಸಮಸ್ಯೆ ರಫ್ತನ್ನು ಉತ್ತೇಜನಗೊಳಿಸದ ಹೊರತು ನೀಗುವುದಿಲ್ಲ. ಮೋದಿ ಸರ್ಕಾರವು ರಫ್ತನ್ನು ಉತ್ತೇಜಿಸಲು ದೇಶ ನಿರ್ದಿಷ್ಟ ವಿಶೇಷ ಕೃಷ್ಟಿ ಉತ್ಪಾದನಾ ವಲಯವನ್ನು ಪರಿಚಯಿಸುವ ಯೋಜನೆಯನ್ನು ಹಾಕಿಕೊಳ್ಳುತ್ತಿದೆ. ರಫ್ತು ಈಗಾಗಲೇ ಏರಿಕೆಯನ್ನು ಕಾಣುತ್ತಿದೆ, 2018ರ ಹಣಕಾಸು ವರ್ಷದಲ್ಲಿ, $38.74 ಬಿಲಿಯನ್ ಮೊತ್ತದ ಕೃಷಿ ಸರಕುಗಳನ್ನು ಭಾರತ ವಿದೇಶಗಳಿಗೆ ರಫ್ತು ಮಾಡಿದೆ, $ 24.89 ಬಿಲಿಯನ್ ಆಮದು ಮಾಡಿಕೊಂಡಿದೆ. ಇದರಿಂದಾಗಿ ಕೃಷಿ ವಹಿವಾಟಿನಲ್ಲಿ $13.85 ಬಿಲಿಯನ್ ಹೆಚ್ಚಳವಾಗಿದೆ. 2016-17 ಮತ್ತು 2015-16ರ ಸಾಲಿನ ಹೆಚ್ಚಳವು ಕ್ರಮವಾಗಿ $8.05 ಬಿಲಿಯನ್ ಮತ್ತು $10.23 ಬಿಲಿಯನ್ ಆಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.