ನವದೆಹಲಿ: ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯ ಜೊತೆಜೊತೆಗೆ ವಿಧಾನಸಭಾ ಚುನಾವಣೆಯೂ ಜರುಗುತ್ತಿದೆ. ಚುನಾವಣೆಯ ದಿನಾಂಕ ಎಪ್ರಿಲ್ 11, ಆದರೆ ಬಿಜೆಪಿ ಈಗಾಗಲೇ ಎರಡು ವಿಧಾನಸಭಾ ಸ್ಥಾನಗಳನ್ನು ಗೆದ್ದುಕೊಂಡಿದೆ. ಆಲೊ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆಂಟೋ ಜಿನೀ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ್ತೊಂದು ಯಚೂಲಿ ವಿಧಾನಸಭಾ ಕ್ಷೇತ್ರದಿಂದ Er ಟಬ ತೆಡಿರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಕೆ ಮಾಡದ ಹಿನ್ನಲೆಯಲ್ಲಿ ಸುಲಭ ಜಯ ಪ್ರಾಪ್ತಿಯಾಗಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜ್ಜು ಅವರು, ‘ಬಿಜೆಪಿಗೆ ಮೊದಲ ಜಯ ಪ್ರಾಪ್ತಿಯಾಗಿದೆ. ಬಿಜೆಪಿ ಶಾಸಕ ಅಭ್ಯರ್ಥಿ ಕಿಂಟೊ ಜಿನೀ ಅವರು ಅಲೋ ಪೂರ್ವ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಲೋ ಈಸ್ಟ್ ಮತ್ತು ಅರುಣಾಚಲದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು’ ಎಂದಿದ್ದಾರೆ. ಬಳಿಕ ಇನ್ನೊಂದು ಟ್ವೀಟ್ ಮಾಡಿ, ‘ಮತ್ತೊಂದು ಜಯ ಬಿಜೆಪಿಗೆ,ಯಚೂಲಿ ವಿಧಾನಸಭಾ ಕ್ಷೇತ್ರದಿಂದ ಶ್ರೀ ಟಬ ತೆಡಿರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು’ ಎಂದಿದ್ದಾರೆ.
BJP scored first victory! BJP MLA candidate Shri Kento Jini from 31-Aalo East Constituency in Arunachal Pradesh is elected unopposed. Congratulations to all @BJP4India karyakartas of Aalo East and entire Arunachal Pradesh for the first success! pic.twitter.com/TA2nkWEVDc
— Chowkidar Kiren Rijiju (@KirenRijiju) March 26, 2019
One more victory for BJP!
Shri Taba Tedir becomes the second BJP MLA candidate to get elected unopposed from 16-Yachuli Assembly Constituency in Arunachal Pradesh. Congratulations to @BJP4India karyakartas of Yachuli Mondal and Arunachal Pradesh. https://t.co/GJrBdn4nFl— Chowkidar Kiren Rijiju (@KirenRijiju) March 26, 2019
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಂ ಮಾಧವ್ ಅವರು, ಬಿಜೆಪಿಯ ವಿಜಯ ಯಾತ್ರೆ ಅರುಣಾಚಲ ಪ್ರದೇಶದಿಂದ ಪ್ರಾರಂಭವಾಗಿದೆ. ಆಲೋ ಪೂರ್ವ ಕ್ಷೇತ್ರದಿಂದ ಕಿಂಟೊ ಜಿನೀ ಸ್ಪರ್ಧಿಗಳೇ ಇಲ್ಲದೆ ವಿಜಯಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮತ್ತೊಂದು ವಿಜಯ ಅರುಣಾಚಲ ಪ್ರದೇಶದಿಂದ, ಯಚೂಲಿ ವಿಧಾನಸಭಾ ಕ್ಷೇತ್ರದಿಂದ Er ಟಬ ತೆಡಿರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
Victory March of BJP starts from Arunachal Pradesh:
Sir Kento Jini has won (uncontested) from Alo East constituency.— Chowkidar Ram Madhav (@rammadhavbjp) March 26, 2019
Another victory also from Arunachal Pradesh:
Er Taba Tedir won unopposed from 16 Yachuli Assembly segment.
(These two victories are for Arunachal Pradesh Assembly, which goes to polls together with parliament on 11 April)— Chowkidar Ram Madhav (@rammadhavbjp) March 26, 2019
ಅರುಣಾಚಲ ಪ್ರದೇಶದಲ್ಲಿ 60 ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಎರಡು ಲೋಕಸಭಾ ಕ್ಷೇತ್ರಗಳಿಗೆ ಎಪ್ರಿಲ್ 11 ರಂದು ಮತದಾನ ನಡೆಯಲಿದೆ, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಸೋಮವಾರ ನಾಮಪತ್ರ ಪಡೆಯಲು ಕೊನೆಯ ದಿನಾಂಕವಾಗಿತ್ತು. ಆದರೆ ಆಲೊ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಇವರನ್ನು ವಿಜಯಿ ಎಂದು ಘೋಷಿಸಲಾಯಿತು. ಯಚೂಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.