ನವದೆಹಲಿ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ನಾಲ್ವರು ನಕ್ಸಲರನ್ನು ಹತ್ಯೆ ಮಾಡಿವೆ. ಅವರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ.
ಎನ್ಕೌಂಟರ್ ನಡೆದ ಬಳಿಕ, ಸಮವಸ್ತ್ರದಲ್ಲಿದ್ದ ನಕ್ಸಲರ ಮೃತದೇಹಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ.
ಸುಕ್ಮಾ ಜಿಲ್ಲೆಯ ಜಗರಗುಂಡ ಗ್ರಾಮದ ಭೀಮಾಪುರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ವೇಳೆ ನಕ್ಸಲರು ಗುಂಡಿನ ದಾಳಿಗಳನ್ನು ನಡೆಸಿದ ಪರಿಣಾಮ ಭದ್ರತಾ ಪಡೆಗಳು ಎನ್ಕೌಂಟರ್ ಆರಂಭಿಸಿವೆ, ಎನ್ ಕೌಂಟರ್ ಮುಕ್ತಾಯವಾದ ಬಳಿಕ ಆ ಪ್ರದೇಶದಿಂದ INSA ಮತ್ತು ಎರಡು 303 ರೈಫಲ್ಗಳನ್ನು ವಶಕ್ಕೆ ಪಡೆಯಲಾಗಿದೆ.
ನಕ್ಸಲ್ ಪೀಡಿತ ರಾಜ್ಯಗಳ ಮತ್ತು ಜಿಲ್ಲೆಗಳ ಸಂಖ್ಯೆ ಕಳೆದ ಕೆಲವು ವರ್ಷಗಳಿಂದ ಇಳಿಮುಖವಾಗುತ್ತಾ ಬಂದರೂ, ಛತ್ತೀಸ್ ಗಢದ ಸುಕ್ಮಾದಲ್ಲಿ ಈಗಲೂ ನಕ್ಸಲರ ಉಪಟಳ ಹೆಚ್ಚಿನ ಪ್ರಮಾಣದಲ್ಲಿದೆ. 2017ರಲ್ಲಿ ಇವುಗಳ ಕೃತ್ಯಕ್ಕೆ 26 CRPF ಯೋಧರು ಬಲಿಯಾಗಿದ್ದರು, ಸುಮಾರು 300 ನಕ್ಸಲರು ಸೇರಿ ಈ ದಾಳಿಯನ್ನು ನಡೆಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.