ನವದೆಹಲಿ: ಭಾರತದ ಬಡವರಿಗೆ ‘ಐತಿಹಾಸಿಕ’ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ನೀಡುವುದಾಗಿ ಘೋಷಿರುವ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಇದೊಂದು ಪೊಳ್ಳು ಭರವಸೆಯಾಗಿದೆ ಎಂದಿದ್ದಾರೆ. ಸಾಮಾನ್ಯ ಗಣಿತ ಮಾಡಿದರೂ, ರೂ. 72 ಸಾವಿರವು ನರೇಂದ್ರ ಮೋದಿ ಸರ್ಕಾರದಡಿ ನೀಡಲಾಗುತ್ತಿರುವ ನೇರ ಲಾಭ ವರ್ಗಾವಣೆಗಿಂತಲೂ ಕಡಿಮೆಯಾಗಿದೆ. ನಮ್ಮ ಸರ್ಕಾರ ವಾರ್ಷಿಕ ಸರಾಸರಿ ರೂ. 1.68 ಲಕ್ಷ ರೂಪಾಯಿಗಳ ನೇರ ಲಾಭ ವರ್ಗಾವಣೆ ಮಾಡುತ್ತಿದೆ ಎಂದಿದ್ದಾರೆ.
ತಮ್ಮ ಸರ್ಕಾರದ ಯೋಜನೆಗಳ ಬಗ್ಗೆ ವಿಶ್ಲೇಷಣೆ ಮಾಡಿರುವ ಅವರು, ಕಳೆದ ಐದು ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರ ಬ್ಯಾಂಕುಗಳ ಮುಖಾಂತರ ನೇರ ಲಾಭ ವರ್ಗಾವಣೆಯನ್ನು ಪರಿಚಯಿಸಿದೆ. ಆಹಾರ, ರಸಗೊಬ್ಬರ, ಸೀಮೆಎಣ್ಣೆ ಸೇರಿದಂತೆ ಇತ್ಯಾದಿಗಳ ಮೇಲಿನ ಸಬ್ಸಿಡಿಯನ್ನು 55 ಸಚಿವಾಲಯಗಳು ನೇರ ಲಾಭ ವರ್ಗಾವಣೆಯ ಮೂಲಕ ಫಲಾನುಭವಿಗಳಿಗೆ ವರ್ಗಾವಣೆ ಮಾಡುತ್ತಿದೆ ಎಂದಿದ್ದಾರೆ.
‘ಇಂದು ಕೈಗಾರಿಕ ಕಾರ್ಮಿಕರು ಮಾಸಿಕ ರೂ. 12 ಸಾವಿರಕ್ಕಿಂತ ಹೆಚ್ಚು ವೇತನವನ್ನು ಪಡೆಯುತ್ತಿದ್ದಾರೆ. ಸರ್ಕಾರದಲ್ಲಿ ಕನಿಷ್ಠ ವೇತನಾ 18 ಸಾವಿರ ರೂಪಾಯಿಯಾಗಿದೆ. ಭೂರಹಿತ ಮತ್ತು ಬಡ ಜನರು ಮನರೇಗಾದಡಿ ವೇತನಾ ಪಡೆಯುತ್ತಿದ್ದಾರೆ. ಕಾರ್ಮಿಕರ ಕನಿಷ್ಠ ವೇತನಾ ಶೇ.42ರಷ್ಟು ಹೆಚ್ಚಳವಾಗಿದೆ ಎಂದರು.
‘7 ದಶಕಗಳ ಕಾಲ ದೇಶವನ್ನು ಕಾಂಗ್ರೆಸ್ ಮೋಸಗೊಳಿಸಿದಷ್ಟು ಬೇರೆ ಯಾವ ಪಕ್ಷಗಳೂ ಮೋಸಗೊಳಿಸಿಲ್ಲ. ಆ ಪಕ್ಷ ಜನರಿಗೆ ಘೋಷಣೆಗಳನ್ನು ನೀಡಿತು, ಆದರೆ ಅನುಷ್ಠಾನಕ್ಕೆ ತರಲು ಕನಿಷ್ಠ ಸಂಪನ್ಮೂಲ ಒದಗಿಸಿತು. ಕಾಂಗ್ರೆಸ್ ಈಗ ಏನು ಘೋಷಣೆ ಮಾಡಿದೆಯೋ ಅದನ್ನು ಈಗಾಗಲೇ ಮೋದಿ ಜನರಿಗೆ ನೀಡಿದ್ದಾರೆ’ ಎಂದರು.
”ದೇಶದಲ್ಲಿ ನೆಹರೂ ಮಾದರಿ ಪ್ರಗತಿಯನ್ನು ಕುಂಠಿತಗೊಳಿಸಿತು. 1971ರಲ್ಲಿ ಇಂದಿರಾ ಗಾಂಧಿ ಅವರು ‘ಗರೀಬಿ ಹಠಾವೋ’ ಎಂಬ ದೊಡ್ಡ ಘೋಷಣೆ ನೀಡಿದರು, ಆದರೆ ಬಡತನ ಹೆಚ್ಚಳ ಮಾಡಿದರು. ಭಾರತದಲ್ಲಿ ಬಡತನದ ಪರಂಪರೆ ಕಾಂಗ್ರೆಸ್ನ ಅಸಮರ್ಥ ಸರ್ಕಾರ ಮತ್ತು ಅಸಮರ್ಥ ಆರ್ಥಿಕ ಮಾದರಿಯನ್ನು ಪ್ರತಿಫಲಿಸುತ್ತದೆ’ ಎಂದಿದ್ದಾರೆ.
ಸಮಾಜದ ಉತ್ತಮ ಸುದ್ದಿಗಳನ್ನು ನಾವು ನಿಮ್ಮ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಪ್ರೋತ್ಸಾಹಿಸಿ, ಸ್ವೀಕರಿಸಿ. ನೀವು ಸ್ವೀಕರಿಸಿದಾಗ ನಾವು ಬೆಳೆಯಬಹುದು. ಒಳ್ಳೆಯ ಸುದ್ದಿಗಳಿಗೆ ಸಮಾಜ ತೆರೆದುಕೊಂಡಿದೆ ತಲುಪಿಸುವವರು ನಾವಾಗಬಾರದೇಕೆ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.