ನವದೆಹಲಿ: ಎಪ್ರಿಲ್ 1ರಿಂದ ಎಲ್ಲಾ ಮದ್ಯದ ಬಾಟಲಿಗಳ ಮೇಲೂ ಆರೋಗ್ಯದ ಬಗೆಗಿನ ಎಚ್ಚರಿಕೆ, ಕುಡಿದು ವಾಹನ ಚಲಾಯಿಸಬಾರದು ಎಂಬ ಸಂದೇಶಗಳನ್ನು ಮುದ್ರಣಗೊಳಿಸುವುದು ಕಡ್ಡಾಯವಾಗಿದೆ.
ದೇಶದ ಸರ್ವೋಚ್ಛ ಆಹಾರ ನಿಯಂತ್ರಕ, ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಈ ನಿಟ್ಟಿನಲ್ಲಿ 2018ರ ಮಾರ್ಚ್ 19ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ‘ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ’, ‘ಸುರಕ್ಷಿತವಾಗಿರಿ: ಕುಡಿದು ಚಲಾಯಿಸಬೇಡಿ’ ಎಂಬ ಎಚ್ಚರಿಕೆ ಸಂದೇಶಗಳುಳ್ಳ ಲೇಬಲ್ಗಳನ್ನು ಎಲ್ಲಾ ಮದ್ಯದ ಬಾಟಲಿಗಳ ಮೇಲೆ ಮುದ್ರಣಗೊಳಿಸಬೇಕು ಎಂದು ಸೂಚಿಸಿದೆ.
200 ಎಂಎಲ್ ವರೆಗಿನ ಮದ್ಯದ ಬಾಟಲಿಗಳ ಮೇಲೆ ಕ್ಯಾಪಿಟಲ್ ಅಕ್ಷರಗಳಲ್ಲಿ ಸಂದೇಶ ಮುದ್ರಿಸಬೇಕು, 1.5 ಎಂಎಂ ಎತ್ತರಕ್ಕಿಂತ ಕಡಿಮೆ ಇರಬಾರದು. 200 ಎಂಎಲ್ ಗಿಂತ ಹೆಚ್ಚಿರುವ ಬಾಟಲಿಗಳ ಮೇಲೆ 3 ಎಂಎಂಕ್ಕಿಂತ ಎತ್ತರದ ಅಕ್ಷರಗಳಿರಬೇಕು.ಈ ಬದಲಾವಣೆಗಳನ್ನು ಮಾಡಲು ಉತ್ಪಾದಕರಿಗೆ ಆಹಾರ ನಿಯಂತ್ರಕವು ಮೂರು ವರ್ಷಗಳ ಸಮಯಾವಧಿಯನ್ನು ನೀಡಿತ್ತು. 2019ರ ಎಪ್ರಿಲ್ 1 ರಿಂದ ಈ ಆದೇಶ ಅನುಷ್ಠಾನಕ್ಕೆ ಬರಲಿದೆ.
“ಆಲ್ಕೋಹಾಲ್ ಪಾನೀಯಗಳನ್ನು ಆಹಾರ ಸುರಕ್ಷತೆ ಕಾಯಿದೆಯಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಹಾಗಿದ್ದರೂ, ಇಲ್ಲಿಯವರೆಗೆ ಈ ಕಾಯಿದೆಯಡಿ ರಚಿಸಲಾದ ಯಾವುದೇ ಲೇಬಲ್ ನಿಯಂತ್ರಣಗಳು ಇರಲಿಲ್ಲ, ಅದರ ಕಾರಣದಿಂದ ತಯಾರಕರು ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ನಿಂದ ರೂಪಿಸಲಾದ ಅಬಕಾರಿ ಕಾನೂನುಗಳನ್ನು ಮತ್ತು ಮಾನದಂಡಗಳನ್ನು ಅನುಸರಿಸುತ್ತಿದ್ದರು. ಈಗ ನಾವು ನಿಯಮಗಳನ್ನು ರಚಿಸಿದ್ದೇವೆ, ಇವುಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ” ಎಂದು ಎಫ್ಎಸ್ಎಸ್ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಅಗರ್ವಾಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.