ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿನ ವೈಭವಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೊಂದು ಗರಿ ಮೂಡಿಸಿದೆ. ಆಗಮನ ಮತ್ತು ನಿರ್ಗಮನಗಳಿಗಾಗಿ ಏರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ನ ಏರ್ಪೋರ್ಟ್ ಸರ್ವಿಸ್ ಕ್ವಾಲಿಟಿ (ACI ASQ) ಪ್ರಶಸ್ತಿಗಳನ್ನು ಪಡೆದುಕೊಂಡಿರುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ. ಅಲ್ಲದೇ, ಏಷ್ಯಾ-ಪೆಸಿಫಿಕ್ ವಲಯದಲ್ಲಿನ 25-40 MPPA (ಪ್ರತಿ ವರ್ಷದ ಮಿಲಿಯನ್ ಪ್ರಯಾಣಿಕರು) ವಿಭಾಗದಲ್ಲಿ ಗಾತ್ರ ಅಥವಾ ಪ್ರದೇಶದ ಅತ್ಯುತ್ತಮ ವಿಮಾನನಿಲ್ದಾಣ ಎಂಬ ಪ್ರಶಸ್ತಿಯನ್ನೂ ಗೆದ್ದುಕೊಂಡಿದೆ.
ACI ASQ ಪ್ರಶಸ್ತಿಗಳು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅತ್ಯುತ್ತಮವಾದ ಪ್ರಯಾಣಿಕ ಅನುಭವವನ್ನು ಒದಗಿಸುವ ನಮ್ಮ ಬದ್ಧತೆಯನ್ನು ದೃಢಪಡಿಸಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಹರಿ ಮಾರಾರ್ ಅವರು ಹೇಳಿದ್ದಾರೆ. ಬಿಐಎಎಲ್, ಬೆಂಗಳೂರು ವಿಮಾನ ನಿಲ್ದಾಣದ ಪ್ರಮುಖ ಕಾರ್ಯಾಚರಣಾ ಸಂಸ್ಥೆಯಾಗಿದೆ ಎಂದು ಫೈನಾನ್ಸಿಯಲ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಭಾರತದ ಮೂರನೇ ಅತಿ ಹೆಚ್ಚು ಜನನಿಬಿಡ ವಿಮಾನ ನಿಲ್ದಾಣವಾಗಿರುವ ಕೆಂಪೇಗೌಡ ಏರ್ರ್ಪೋರ್ಟ್, 2017-18 ರಲ್ಲಿ ಸುಮಾರು 27 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸಿದೆ ಮತ್ತು ಮುಂದಿನ 10 ವರ್ಷಗಳಲ್ಲಿ ಈ ಸಂಖ್ಯೆ ಶೇ. 300 ರಷ್ಟು ಬೆಳವಣಿಗೆಯನ್ನು ಕಾಣಲಿದೆ ಎಂದು ವರದಿಯೊಂದು ತಿಳಿಸಿದೆ.
ಈ ದೃಷ್ಟಿಕೋನದಲ್ಲಿ, ವಿಮಾನನಿಲ್ದಾಣಕ್ಕೆ ಯೋಜನೆಯಂತೆ 13,000 ಕೋಟಿ ರೂಪಾಯಿಗಳ ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಸಿಗಲಿದೆ. ಹೊಸ ಟರ್ಮಿನಲ್, ಹೆಚ್ಚುವರಿ ರನ್ ವೇ ಮತ್ತು ಮಲ್ಟಿ-ಮೋಡಲ್ ಸಾರಿಗೆ ಕೇಂದ್ರಗಳು ಇಲ್ಲಿ ನಿರ್ಮಾಣವಾಗಲಿವೆ.
ಹೊಸ ವಿಶ್ವದರ್ಜೆಯ ಟರ್ಮಿನಲ್ಗಳನ್ನು ಪರಿಸರಕ್ಕೆ ಅನುಕೂಲಕರವಾದ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ, ಸೌರ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಈ ವಿದ್ಯುತ್ ಉಳಿತಾಯಕ್ಕೆ ಉತ್ತೇಜನವನ್ನು ನೀಡಲಾಗುತ್ತದೆ.
ಅಲ್ಲದೆ, ಹೆಚ್ಚು ಲಭ್ಯ ರಸ್ತೆಗಳು ಮತ್ತು ಆಂತರಿಕ ರಸ್ತೆ ಮೂಲಸೌಕರ್ಯವನ್ನು ನಿರ್ಮಿಸಲು ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ವಿಸ್ತರಣಾ ಯೋಜನೆಯು 2021 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.