ಭಾರತೀಯ ರೈಲ್ವೆಯು ಎನ್ಡಿಎ ಸರಕಾರದಡಿ ರಾಷ್ಟ್ರೀಯ ಸಾರಿಗೆಯ ಚಿತ್ರಣವನ್ನೇ ಬದಲಾಯಿಸುವಲ್ಲಿ ಯಶಸ್ವಿಯಾಗಿದೆ. ನರೇಂದ್ರ ಮೋದಿ ಸರಕಾರದ ಈ ಐದು ವರ್ಷಗಳಲ್ಲಿ ಭಾರತೀಯ ರೈಲ್ವೇಯೂ ಸರಣಿ ಪರಿವರ್ತನೆಗಳನ್ನು ಕಂಡಿದೆ. 2014ರಲ್ಲಿ ರೈಲ್ವೆ ಸಚಿವರಾಗಿದ್ದ ಸದಾನಂದ ಗೌಡರಿಂದ ಹಿಡಿದು ಈಗಿನ ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ಅವರವರೆಗೂ ರೈಲ್ವೆಯ ಮಹತ್ತರವಾದ ಪರಿವರ್ತನೆಯನ್ನು ಕಂಡಿದೆ. ಐದು ವರ್ಷಗಳ ರೈಲ್ವೇ ಬಜೆಟ್ ಕೂಡ ರೈಲ್ವೆಯ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತಹ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ. 2014-15ರಲ್ಲಿ ಆಗಿನ ರೈಲ್ವೇ ಸಚಿವ ಸದಾನಂದ ಗೌಡರು ಮಂಡನೆ ಮಾಡಿದಂತಹ ಬಜೆಟ್ನಲ್ಲಿ, ಮೊದಲ ಬಾರಿಗೆ ರೈಲ್ವೇಯಲ್ಲಿ ಖಾಸಹಿ ಮತ್ತು ವಿದೇಶಿ ಬಂಡವಾಳ ಹೂಡಿಕೆ ಮತ್ತು ಸಾರ್ವಜನಿಕ ಖಾಸಗಿ ಪಾಲುದಾರಿಕೆಯ ಪ್ರಸ್ತಾವನೆಯನ್ನು ಮಾಡಲಾಯಿತು. ಅವರು ರೂ.65,445 ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಿದ್ದರು. ಅದು ಆವರೆಗಿನ ಅತಿ ದೊಡ್ಡ ರೈಲ್ವೇ ಬಜೆಟ್ ಮೊತ್ತವಾಗಿತ್ತು. ಮುಂಬೈ ಅಹಮದಾಬಾದ್ ವಲಯಕ್ಕೆ ಬುಲೆಟ್ ಟ್ರೈನ್ ಯೋಜನೆಯನ್ನು ಪರಿಚಯಿಸುವ ಐತಿಹಾಸಿಕ ನಿರ್ಧಾರವನ್ನೂ ಅವರು ಈ ಬಜೆಟ್ನಲ್ಲಿ ಘೋಷಣೆ ಮಾಡಿದರು.
2015-16ರಲ್ಲಿ ರೈಲ್ವೇ ಬಜೆಟ್ ಮಂಡಿಸಿದ್ದ ಆಗಿನ ರೈಲ್ವೇ ಸಚಿವ ಸುರೇಶ್ ಪ್ರಭು ಅವರು, ರೈಲು ದರಗಳನ್ನು ಬದಲಾಯಿಸದೆ ಹಾಗೆಯೇ ಇಟ್ಟರು. ಹಳಿ ತಪ್ಪಿದ ಹಣಕಾಸು ವ್ಯವಸ್ಥೆಯನ್ನು ಮರಳಿ ಹಳಿಗೆ ತರುವ ಸಲುವಾಗಿ ದರ ಕಡಿತದಂತಹ ಜನಪ್ರಿಯ ಘೋಷಣೆಗಳಿಂದ ಅವರು ಹಿಂದೆ ಸರಿದರು. ಅದರ ಬದಲಾಗಿ ಅತ್ಯುನ್ನತವಾದ ತಾಂತ್ರಿಕ ಬದಲಾವಣೆಗಳನ್ನು ತರಲು ಮತ್ತು ಪ್ರಯಾಣಿಕರಿಗೆ ಬೇಕಾದ ಅಗತ್ಯತೆಗಳನ್ನು ಒದಗಿಸಲು ಪ್ರಯತ್ನ ಪಟ್ಟರು. ರೂ.8.5 ಲಕ್ಷ ಕೋಟಿಗಳಷ್ಟು ಹೂಡಿಕೆಯನ್ನು ಐದು ವರ್ಷಗಳ ಅವಧಿಗೆ ಅವರು ಪ್ರಸ್ತಾಪಿಸಿದರು. ಯೋಜಿತ ಬಜೆಟ್ನ ಗಾತ್ರವು ಶೇ.52ರಷ್ಟು ಏರಿಕೆ ಕಂಡಿತು. 2015-16ರಲ್ಲಿ ಬಜೆಟ್ ಗಾತ್ರ ರೂ.1,00,011 ಕೋಟಿಗೆ ತಲುಪಿತು. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೇ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಯಿತು. ದೇಶದ 400ಕ್ಕೂ ಅಧಿಕ ರೈಲು ನಿಲ್ದಾಣಗಳಿಗೆ ವೈಫೈ ಸೇವೆಯನ್ನು ಅಳವಡಿಸಲಾಯಿತು. ಈ ಮೂಲಕ ರೈಲ್ವೇ ಅನ್ನು ಹೆಚ್ಚು ಜನ ಸ್ನೇಹಿಯನ್ನಾಗಿ ಪರಿವರ್ತಿಸಲಾಯಿತು.
2017ರಲ್ಲಿ ರೈಲ್ವೇ ಬಜೆಟ್ ಅನ್ನು ಸಾರ್ವತ್ರಿಕ ಬಜೆಟ್ ನೊಂದಿಗೆ ವಿಲೀನಗೊಳಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. 2017-18 ರ ಪ್ರಸ್ತಾವಿತ ಬಜೆಟ್ ಮೊತ್ತ ಒಂದು ಲಕ್ಷದ ಮೂವತ್ತು ಸಾವಿರ ಕೋಟಿ ರೂಪಾಯಿ ಆಗಿತ್ತು. ಇದು 2016- 18ರ ಸಾಲಿಗಿಂತ ಶೇ.8ರಷ್ಟು ಹೆಚ್ಚು. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ತನ್ನ ಧ್ಯೇಯಕ್ಕೆ ಬದ್ಧತೆಯನ್ನು ತೋರಿಸಲು ಮತ್ತು ಸೇವೆಯನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡಲು ದೇಶದ 500 ನ ನಿಲ್ದಾಣಗಳಲ್ಲಿ ಲಿಫ್ಟ್ ಮತ್ತು ಎಸ್ಕಲೇಟರ್ ಗಳನ್ನು ಅಳವಡಿಸುವ ಮೂಲಕ ನಿಲ್ದಾಣಗಳನ್ನು ವಿಶೇಷ ಚೇತನ ಸ್ನೇಹಿಯನ್ನಾಗಿ ಪರಿವರ್ತಿಸಲಾಯಿತು.
ರೈಲು ಅಪಘಾತ ಮತ್ತು ಪ್ರಯಾಣಿಕರ ಭದ್ರತೆ ಮೋದಿ ಸರಕಾರದ ಹೆಚ್ಚಿನ ಆದ್ಯತೆಯ ವಿಷಯವಾಗಿದೆ. ಮೋದಿ ಸರಕಾರದ ಅಡಿಯಲ್ಲಿ ರೈಲು ಅಪಘಾತಗಳಿಂದಾಗುವ ನಷ್ಟದ ಪ್ರಮಾಣ ಶೇಕಡಾ 62ರಷ್ಟು ಕಡಿಮೆಯಾಗಿದೆ. ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಹಂಚಿಕೊಂಡಿರುವ ವರದಿಯ ಪ್ರಕಾರ, 2013-14 ರಲ್ಲಿ ದೇಶದಲ್ಲಿ 118 ಅಪಘಾತಗಳು ಸಂಭವಿಸಿವೆ, 2017 18 ಇದು 73ಕ್ಕೆ ಕುಸಿದಿದೆ. ಇದು ಈವರೆಗಿನ ಅತ್ಯುತ್ತಮ ರೈಲ್ವೆ ಸುರಕ್ಷತಾ ವರದಿಯಾಗಿದೆ. 2017-18ರಲ್ಲಿ ರಲ್ಲಿನ ಮೂಲ ವ್ಯಯ 2009 14 ಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. 2014-19 ರಲ್ಲಿ ರೂ.5.29 ಲಕ್ಷ ಕೋಟಿಯನ್ನು ಖರ್ಚು ಮಾಡಲಾಗಿತ್ತು. ಆದರೆ ರೂ.2009- 14 ರಲ್ಲಿ 2.30 ಲಕ್ಷ ಕೋಟಿಯನ್ನು ಖರ್ಚು ಮಾಡಲಾಗಿದೆ. ಭಾರತದ ಮೊದಲ ನ್ಯಾಷನಲ್ ಅಂಡ್ ಟ್ರಾನ್ಸ್ಪೋರ್ಟೇಶನ್ ಯೂನಿವರ್ಸಿಟಿ ಅನ್ನು ಗುಜರಾತಿನ ವಡೋದರದಲ್ಲಿ ಸ್ಥಾಪನೆ ಮಾಡಲಾಯಿತು. ಇದು ಎನ್ ಡಿಎ ಸರಕಾರ ಅಡಿಯಲ್ಲಿ ರಾಷ್ಟ್ರೀಯ ಸಾರಿಗೆ ಅತ್ಯುನ್ನತವಾದ ಪ್ರಗತಿಯನ್ನು ಸಾಧಿಸಿದೆ ಎಂಬುದರ ದ್ಯೋತಕವಾಗಿದೆ. ವಿಶ್ವವಿದ್ಯಾನಿಲಯವು ಕೌಶಲ್ಯ ಭರಿತ ಮತ್ತು ಸಮರ್ಥ ರೈಲ್ವೆ ಕಾರ್ಯಪಡೆಯನ್ನು ಸೃಷ್ಟಿಸಲಿದೆ, ಈ ಮೂಲಕ ದೇಶದ ಪ್ರಗತಿಗೆ ಮತ್ತಷ್ಟು ಕೊಡುಗೆಗಳನ್ನು ನೀಡಲಿದೆ.
2018-19ರ ಬಜೆಟ್ನಲ್ಲಿ ರೈಲ್ವೇಗೆ ರೂ.1. 48 ಲಕ್ಷ ಕೋಟಿಗಳನ್ನು ಒದಗಿಸುವ ಮೂಲಕ ಹೆಚ್ಚಿನ ಉತ್ತೇಜನವನ್ನು ನೀಡಲಾಯಿತು. ಈ ಮೊತ್ತದ ಬಹುತೇಕ ಪಾಲನ್ನು ಸಾಮರ್ಥ್ಯ ವೃದ್ಧಿ ಗಾಗಿ ಬಳಸಲಾಗಿದೆ. ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕ್ ಇನ್ ಇಂಡಿಯಾಗೆ ಭಾರತೀಯ ರೈಲ್ವೆಯು ಅತಿ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಸರಿ ಸುಮಾರು ಅಂದಾಜು ಶೇಕಡಾ 97ರಷ್ಟು ರಾಷ್ಟ್ರೀಯ ಸಾರಿಗೆಯ ಅಗತ್ಯತೆಗಳು ದೇಶೀಯ ಸಂಪನ್ಮೂಲಗಳಿಂದಲೇ ಈಡೇರಿಸಲಾಗುತ್ತಿದೆ. ಅತ್ಯುತ್ಕೃಷ್ಟವಾದ ತಂತ್ರಜ್ಞಾನವನ್ನು ಹೊಂದಿದ ಹೊಸದಾಗಿ ನಿರ್ಮಾಣ ಮಾಡಲಾದ ಟ್ರೈನ್ 18 ಅಥವಾ ಒಂದೇ ಭಾರತ ಎಕ್ಸ್ ಪ್ರೆಸ್ ರೈಲನ್ನು ಚೆನ್ನೈನಲ್ಲಿನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಾಣ ಮಾಡಲಾಗಿದೆ. 2919 ಕೋಚ್ ಗಳನ್ನು ನಿರ್ಮಾಣ ಮಾಡಿರುವ ಈ ಸಂಸ್ಥೆಯು, ಚೀನಾವನ್ನು ಹಿಂದಿಕ್ಕಿ ವಿಶ್ವದ ಅತೀ ದೊಡ್ಡ ರೈಲ್ ಕೋಚ್ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಇದರ ಅರ್ಥ ಹೆಚ್ಚು ಉದ್ಯೋಗಗಳ ಸೃಷ್ಟಿ, ಉತ್ತಮ ಜೀವನಮಟ್ಟ, ಉತ್ತಮ ಆದಾಯ. ಆದರೆ ಕಪೋಲಕಲ್ಪಿತವಾಗಿ ಉದ್ಯೋಗ ಸಮೀಕ್ಷೆಗಳನ್ನು ಮಾಡುತ್ತಿರುವವರ ವರದಿಗಳು ಸತ್ಯಕ್ಕೆ ದೂರವಾದವುಗಳು ಎಂಬುದು ಇಲ್ಲಿ ಪಷ್ಟವಾಗುತ್ತದೆ. ದೇಶ ಔಪಚಾರಿಕವಾಗಿ $200 ಬಿಲಿಯನ್ ರೈಲ್ ಮಾರುಕಟ್ಟೆಗೆ ಪ್ರವೇಶ ಪಡೆದುಕೊಂಡಿದೆ. ಶ್ರೀಲಂಕಾದಲ್ಲಿನ ತಮ್ಮ ಪ್ರಥಮ ಪ್ರಯಾಣದಲ್ಲೇ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯು ಎಸ್-13 ಕ್ಲಾಸ್ ಟ್ರೈನ್ ಅನ್ನು ನಿರ್ಮಾಣ ಮಾಡಿದೆ. ನರೇಂದ್ರ ಮೋದಿ ಸರ್ಕಾರದಡಿ ಭಾರತೀಯ ರೈಲ್ವೇಯು ನಡೆಸಿದ ಪರಿವರ್ತನೆಯು ಅತ್ಯಂತ ಶ್ಲಾಘನೀಯವಾಗಿದೆ. ಇದಕ್ಕೆ ಶ್ರಮಿಸಿದ ಈಗಿನ ರೈಲ್ವೇ ಸಚಿವ ಪಿಯೂಶ್ ಗೋಯಲ್ ಸೇರಿದಂತೆ ಎಲ್ಲಾ ರೈಲ್ವೇ ಸಚಿವರುಗಳ ಕಾರ್ಯವೂ ಅಭಿನಂದನಾರ್ಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.