ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಕೇಂದ್ರ ಇಸ್ರೋ, ಎಪ್ರಿಲ್ 1ರಂದು ಡಿಆರ್ಡಿಓದ ಎಮಿಸ್ಯಾಟ್ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಉಪಗ್ರಹವನ್ನು ಉಡಾವಣೆಗೊಳಿಸಲು ಸನ್ನದ್ಧವಾಗಿದೆ. ಈ ಉಪಗ್ರಹ ಶತ್ರುಗಳ ರೇಡಾರ್ಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಇಮೇಜ್ ಹಾಗೂ ಕಮ್ಯೂನಿಕೇಶನ್ ಇಂಟೆಲಿಜೆನ್ಸ್ ಅನ್ನು ಸಂಗ್ರಹಿಸುವಲ್ಲಿ ಸಹಾಯ ಮಾಡಲಿದೆ.
436 ಕೆಜಿ ತೂಕದ ಉಪಗ್ರಹ ಇದಾಗಿದ್ದು, ಡಿಫೆನ್ಸ್ ರಿಸರ್ಚ್ ಆಂಡ್ ಆರ್ಗನೈಝನ್ (ಡಿಆರ್ಡಿಓ) ಇದನ್ನು ಅಭಿವೃದ್ಧಿಪಡಿಸಿದೆ. ಇದನ್ನು 763-ಕಿಮೀ ಕಕ್ಷೆಯಲ್ಲಿ ಸೇರಿಸಲಾಗುತ್ತದೆ. ಶತ್ರು ರಾಷ್ಟ್ರದ ಚಲನವಲನದ ಮೇಲೆ ಕಣ್ಣಿಡಲು ಈ ಉಪಗ್ರಹ ಭಾರತಕ್ಕೆ ನೆರವಾಗಲಿದೆ.
‘ಎಮಿಸ್ಯಾಟ್ ನಂತಹ ಮಿಲಿಟರಿ ಉಪಗ್ರಹಗಳಿಗೆ ಮೂರು ಗುಣಲಕ್ಷಣಗಳಿರುತ್ತವೆ: ಅವುಗಳು ಶತ್ರುಗಳು ಗಡಿಯಲ್ಲಿ ನಿಯೋಜಿಸಿರುವ ರಾಡಾರ್ ಮತ್ತು ಸೆನ್ಸಾರ್ಗಳ ಚಲನವಲನಗಳ ಮೇಲೆ ನಿಗಾ ಇಡುತ್ತದೆ, ಶತ್ರು ಪ್ರದೇಶಗಳ ನಿಖರ ಸ್ಥಳಾಕೃತಿಯನ್ನು ಸಂಗ್ರಹಿಸುತ್ತವೆ. ಆ ಪ್ರದೇಶದಲ್ಲಿ ಎಷ್ಟು ಕಮ್ಯೂನಿಕೇಶನ್ ಡಿವೈಸ್ಗಳು ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತವೆ’ ಎಂದು ಡಿಆರ್ಡಿಓದ ಮಾಜಿ ವಿಜ್ಞಾನಿ ರವಿ ಗುಪ್ತಾ ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಉಪಗ್ರಹಗಳು ಶತ್ರುಗಳ ಏರಿಯಾದಲ್ಲಿ ಎಷ್ಟು ಸೆಲ್ಫೋನ್ಗಳು ಸಕ್ರಿಯವಾಗಿವೆ ಎಂಬುದನ್ನು ತಿಳಿಯಲು ಭದ್ರತಾ ಪಡೆಗಳಿಗೆ ಸಹಾಯ ಮಾಡಲಿದೆ ಎಂದಿದ್ದಾರೆ.
ಬಾಲಾಕೋಟ್ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ಸಂದರ್ಭ ಅಲ್ಲಿ ಸುಮಾರು 300 ಮೊಬೈಲ್ ಫೋನ್ ಸಕ್ರಿಯವಾಗಿತ್ತು ಎಂಬುದನ್ನು ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಝೇಶಮ್ ಇದೇ ತಂತ್ರಜ್ಞಾನವನ್ನು ಬಳಸಿ ಹೇಳಿತ್ತು.
ಇಸ್ರೋದ PSLV-C45 MN ಮೂಲಕ ಇತರ 28 ವಿದೇಶಿ ಉಪಗ್ರಹಗಳೊಂದಿಗೆ ಎಮಿಸ್ಯಾಟ್ ಅನ್ನು ಇಸ್ರೋ ಎಪ್ರಿಲ್ 1ರಂದು ಉಡಾವಣೆಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.