ನವದೆಹಲಿ: ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಇಂದು ಕೊನೆಯ ದಿನವಾಗಿದೆ. ಎಪ್ರಿಲ್ 11ರಂದು ಮೊದಲ ಹಂತದ ಚುನಾವಣೆ ದೇಶದಲ್ಲಿ ನಡೆಯಲಿದೆ. 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳು ಮೊದಲ ಹಂತದ ಚುನಾವಣೆಯನ್ನು ಎದುರಿಸಲಿವೆ.
ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳು, ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳು, ಉತ್ತರಪ್ರದೇಶದ 8, ಮಹಾರಾಷ್ಟ್ರದ 7, ಉತ್ತರಾಖಂಡ ಮತ್ತು ಅಸ್ಸಾಂನ ತಲಾ ಐದು, ಬಿಹಾರ ಮತ್ತು ಒರಿಸ್ಸಾದ ತಲಾ 4, ಜಮ್ಮು ಮತ್ತು ಕಾಶ್ಮೀರ, ಅರುಣಾಚಲ ಪ್ರದೇಶ, ಮೇಘಾಲಯ, ಪಶ್ಚಿಮಬಂಗಾಳದ ತಲಾ ಎರಡು, ಛತ್ತೀಸ್ಘಢ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಸಿಕ್ಕಿಂ, ಅಂಡಮಾನ್, ನಿಕೋಕಾಬಾರ್, ಲಕ್ಷದ್ವೀಪ ಗಳ ತಲಾ ಒಂದು ಕ್ಷೇತ್ರಗಳು ಮೊದಲ ಹಂತದ ಚುನಾವಣೆಯನ್ನು ಎದುರಿಸಲಿವೆ. ಆಂಧ್ರದ 175 ಸ್ಥಾನಗಳುಳ್ಳ ವಿಧಾನಸಭೆ, ಒರಿಸ್ಸಾದ 28 ವಿಧಾನಸಭಾ ಕ್ಷೇತ್ರ, 32 ಸ್ಥಾನಗಳುಳ್ಳ ಸಿಕ್ಕಿಂ ವಿಧಾನಸಭಾ, 60 ಸ್ಥಾನಗಳುಳ್ಳ ಅರುಣಾಚಲ ಪ್ರದೇಶಕ್ಕೂ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಮಪತ್ರ ಪರಿಶೀಲನೆ ನಾಳೆ ನಡೆಯಲಿದೆ, ನಾಮಪತ್ರ ಹಿಂಪಡೆಯಲು ಮಾರ್ಚ್ 28 ಕೊನೆಯ ದಿನವಾಗಿದೆ. ಒಟ್ಟು 7 ಹಂತದಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಎಲ್ಲಾ ಹಂತಗಳ ಚುನಾವಣೆ ಪೂರ್ಣಗೊಂಡ ಬಳಿಕವೇ ಮೇ 23ರಂದು ಫಲಿತಾಂಶ ಹೊರಬರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.