ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು #VoteKar ಹ್ಯಾಶ್ಟ್ಯಾಗ್ ಅನ್ನು ಬಳಸಿಕೊಂಡು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಮತದಾನ ಮಾಡಲು ಪ್ರೇರೇಪಿಸುವಂತೆ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ವಿಶೇಷವೆಂದರೆ, ಪ್ರಧಾನಿಗಳು ಈ ಹ್ಯಾಶ್ಟ್ಯಾಗ್ ಅನ್ನು ಬಳಸಿಕೊಂಡು ಕೇವಲ ಅರ್ಧ ಗಂಟೆಯಲ್ಲಿ 16 ಟ್ವಿಟ್ ಮಾಡಿದ್ದಾರೆ.
‘ನನ್ನ ಸಹ ಭಾರತೀಯರೇ, #VoteKar (ವೋಟು ಹಾಕಿ) ಎಂದು ಹೇಳುವ ಸಮಯ ಬಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ, ನೀವು, ನಿಮ್ಮ ಕುಟುಂಬದವರು ಮತ್ತು ಸ್ನೇಹಿತರು ಅಪಾರ ಪ್ರಮಾಣದಲ್ಲಿ ಬಂದು ಮತಚಲಾಯಿಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಆ ರೀತಿ ಮಾಡುವುದರಿಂದ ದೇಶದ ಭವಿಷ್ಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ’ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
My fellow Indians,
The time has come to say- #VoteKar.
In the upcoming Lok Sabha elections, ensure that you as well as your family and friends turnout in record numbers.
Your doing so will have a positive impact on the nation’s future.
— Chowkidar Narendra Modi (@narendramodi) March 24, 2019
ಬಳಿಕ ಅವರು, ಸೆಲಿಬ್ರಿಟಿಗಳಾದ ಹೃತಿಕ್ ರೋಶನ್, ಅನುಪಮ್ ಖೇರ್, ಕಬೀರ್ ಬೇಡಿ, ಆರ್.ಮಾಧವನ್, ಅನಿಲ್ ಕಪೂರ್, ಅಜಯ್ ದೇವಗನ್, ಮಾಧುರಿ ದೀಕ್ಷಿತ್, ಮಧುರ್ ಭಂಡಾರ್ಕರ್, ವಿವೇಕ್ ಅಗ್ನಿಹೋತ್ರಿ, ರಾಜ್ ಕುಮಾರ್ ರಾವ್, ಪರಿಣಿತಿ ಛೋಪ್ರಾ ಮತ್ತು ಕಾರ್ತಿಕ್ ಆರ್ಯನ್, ಸುಶಾಂತ್ ಸಿಂಗ್ ರಜಪೂತ್, ಕೀರ್ತಿ ಸನೂನ್, ದೀಪಾ ಕರ್ಮಾಕರ್, ಸಾಕ್ಷಿ ಮಲಿಕ್, ಹಿಮಾ ದಾಸ್, ಪ್ರತಿಕಾ ಮಾಧ್ಯಮಗಳು, ರಾಜಕೀಯ, ಕ್ರೀಡಾ ಕ್ಷೇತ್ರದ ಗಣ್ಯರು, ಮುಂತಾದವರಿಗೆ ಟ್ವಿಟ್ ಅನ್ನು ಟ್ಯಾಗ್ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡುವಂತೆ ಅಭಿಮಾನಿಗಳನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದ್ದಾರೆ.
ಪ್ರಧಾನಿಯವರು ಎರಡನೇ ಬಾರಿಗೆ ಇಂತಹ ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ.
ಮಾರ್ಚ್ 13ರಂದೂ, ವಿವಿಧ ರಾಜಕಾರಣಿಗಳಿಗೆ ಮತ್ತು ಇತರ ಸೆಲೆಬ್ರಿಟಿಗಳಿಗೆ ಮತದಾನ ಮಾಡುವಂತೆ ಜನರನ್ನು ಪ್ರೇರೇಪಿಸಿ ಎಂದು ಮನವಿಯನ್ನು ಮಾಡಿಕೊಂಡು ಅವರು ಟ್ವಿಟ್ ಮಾಡಿದ್ದರು. ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಶರದ್ ಪವಾರ್, ಮಾಯಾವತಿ ಮುಂತಾದವರಿಗೂ ಮನವಿ ಮಾಡಿಕೊಂಡಿದ್ದರು.
ದೇಶದಲ್ಲಿ 7 ಹಂತಗಳಲ್ಲಿ ಮತದಾನವು ಎಪ್ರಿಲ್ 11ರಿಂದ ಪ್ರಾರಂಭವಾಗಲಿದೆ, ಮೇ 19 ರಂದು ಅಂತ್ಯಗೊಳ್ಳಲಿದೆ. ಮೇ 23 ಕ್ಕೆ ಫಲಿತಾಂಶ ಹೊರಬೀಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.