ನವದೆಹಲಿ: ದೇಶದಲ್ಲಿ ವೈಯರ್ಲೆಸ್ ಗ್ರಾಹಕರ ಸಂಖ್ಯೆ ಶೇ.0.51ರಷ್ಟು ಬೆಳವಣಿಗೆಯಾಗಿದ್ದು, 2019ರ ಜನವರಿಯಲ್ಲಿ ಈ ಗ್ರಾಹಕರ ಸಂಖ್ಯೆ 1,181.97 ಮಿಲಿಯನ್ಗೆ ಏರಿಕೆಯಾಗಿದೆ ಎಂದು ಟೆಲಿಕಾಂ ನಿಯಂತ್ರಕ TRAI ಹೇಳಿದೆ.
2018ರ ಡಿಸೆಂಬರ್ ವೇಳೆಗೆ ದೇಶದಲ್ಲಿ ಒಟ್ಟು 1,76.00 ಮಿಲಿಯನ್ ವೈಯರ್ಲೆಸ್ ಗ್ರಾಹಕರಿದ್ದರು, ಇವರ ಸಂಖ್ಯೆ 2019ರ ಜನವರಿ ವೇಳೆಗೆ 1,181.97 ಮಿಲಿಯನ್ ಆಗಿದೆ. ಈ ಮೂಲಕ ಶೇ.0.51ರಷ್ಟು ಮಾಸಿಕ ಪ್ರಗತಿಯಾಗಿದೆ.
2019ರ ಜನವರಿಯವರೆಗೆ, ಖಾಸಗಿ ಸೇವಾ ಪೂರೈಕೆದಾರರು ಶೇ.89.95ರಷ್ಟು ವೈಯರ್ಲೆಸ್ ಮಾರುಕಟ್ಟೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಬಿಎಸ್ ಎನ್ಎಲ್ ಮತ್ತು ಎಂಟಿಎನ್ಎಲ್ ಮತ್ತು ಎರಡು ಪಿಎಸ್ಯು ಸೇವಾ ಪೂರೈಕೆದಾರರು ಶೇ.10.5ರಷ್ಟು ಮಾರುಕಟ್ಟೆಯನ್ನು ಹೊಂದಿದ್ದಾರೆ ಎಂದು ಟ್ರಾಯ್ ಹೇಳಿದೆ. ವೈಯರ್ಲೆಸ್ ಗ್ರಾಹಕರ ಸಂಖ್ಯೆ ನಗರ ಭಾಗದಲ್ಲಿ 2019ರ ಜನವರಿಯಲ್ಲಿ 654.20 ಮಿಲಿಯನ್ಗೆ ಏರಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ವೈಯರ್ಲೆಸ್ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ, ಡಿಸೆಂಬರ್ 2018ರಲ್ಲಿ 527.77 ಮಿಲಿಯನ್ ಇದ್ದ ಗ್ರಾಹಕರ ಸಂಖ್ಯೆ, ಜನವರಿ 2019ಕ್ಕೆ 528.48 ಮಿಲಿಯನ್ಗೆ ಇಳಿದಿದೆ.
ನಗರ ವೈಯರ್ಲೆಸ್ ಗ್ರಾಹಕದ ಮಾಸಿಕ ಹೆಚ್ಚಳ ಶೇ. 1.03 ಆದರೆ ಗ್ರಾಮೀಣ ವೈಯರ್ ಲೆಸ್ ಗ್ರಾಹಕರ ಪ್ರಗತಿ ಶೇ. 0.13ರಷ್ಟಾಗಿದೆ.
ಜನವರಿ 2019 ರ ಅಂತ್ಯದಲ್ಲಿ ನಗರ ವೈಯರ್ಲೆಸ್ ಟೆಲಿ-ಸಾಂದ್ರತೆಯು ಡಿಸೆಂಬರ್ 2018 ರ ಕೊನೆಯಲ್ಲಿ 155.48 ರಿಂದ 156.85 ಕ್ಕೆ ಏರಿತು, ಆದರೆ ಇದೇ ಅವಧಿಯಲ್ಲಿ 59.15 ರಿಂದ 59.04 ರವರೆಗೆ ಗ್ರಾಮೀಣ ವೈಯರ್ಲೆಸ್ ಟೆಲಿ-ಸಾಂದ್ರತೆಯು ಕುಸಿಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.