ನವದೆಹಲಿ: ನೌಕಾಸೇನೆಯ ನೂತನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕರಂಬಿರ್ ಸಿಂಗ್ ಅವರು ಆಯ್ಕೆಯಾಗಿದ್ದಾರೆ. ಈಗ ಮುಖ್ಯಸ್ಥರಾಗಿರುವ ಅಡ್ಮಿರಲ್ ಸುನೀಲ್ ಲಾಂಬಾ ಅವರ ಅಧಿಕಾರವಧಿ ಮೇ.31ಕ್ಕೆ ಅಂತ್ಯವಾಗಲಿದೆ.
ಅಡ್ಮಿರಲ್ ಕರಂಬಿರ್ ಅವರು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಅತೀ ವಿಶಿಷ್ಟ್ ಸೇವಾ ಮೆಡಲ್ ಅನ್ನು ಪಡೆದುಕೊಂಡಿದ್ದಾರೆ. 1980ರಲ್ಲಿ ಇವರು ನೌಕಾಪಡೆಯನ್ನು ಸೇರ್ಪಡೆಗೊಂಡರು. 1982ರಲ್ಲಿ ಹೆಲಿಕಾಫ್ಟರ್ ಪೈಲೆಟ್ ಆದರು. ಚೇತಕ್ ಮತ್ತು ಕಮೊವ್ ಹೆಲಿಕಾಫ್ಟರ್ ಗಳನ್ನು ಹಾರಿಸಿದ ಹೆಚ್ಚಿನ ಅನುಭವ ಇವರಿಗಿದೆ.ವಿಲ್ಲಿಂಗ್ಟನಿನ ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜ್ ಮತ್ತು ಮುಂಬಯಿಯ ಕಾಲೇಜ್ ಆಫ್ ನಾವಲ್ ವಾರ್ ಫೇರ್ ನಿಂದ ಇವರು ಪದವಿಯನ್ನು ಪಡೆದುಕೊಂಡಿದ್ದಾರೆ. ಈ ಎರಡೂ ಸಂಸ್ಥೆಗಳಲ್ಲಿ ಮಾರ್ಗದರ್ಶಕ ಸಿಬ್ಬಂದಿಯಾಗಿ ದುಡಿದ ಅನುಭವ ಇವರಿಗಿದೆ.
37 ವರ್ಷಗಳ ವೃತ್ತಿ ಜೀವನದಲ್ಲಿ , ಅಡ್ಮಿರಲ್ ಅವರು ಚಾಂದ್ಬೀಬಿಯಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ಶಿಪ್ ಕಮಾಂಡರ್ ಆಗಿದೆ, ಮಿಸೈಲ್ ಕಾರ್ವೆಟ್ಟೆ ಐಎನ್ಎಸ್ ವಿಜಯ್ ದುರ್ಗಾ ಕಮಾಂಡರ್ ಆಗಿ, ಐಎನ್ಎಸ್ ದೆಹಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ.
ವೈಸ್ ಅಡ್ಮಿರಲ್ ರ್ಯಾಕಿಂಗ್ ನಲ್ಲಿ ಇದ್ದ ವೇಳೆ ಇವರು, ಸೀಬರ್ಡ್ ಪ್ರಾಜೆಕ್ಟ್ ನ ಡೈರೆಕ್ಟರ್ ಜನರಲ್ ಆಗಿದ್ದರು. ಕಾರವಾರ ನೌಕಾ ನೆಲೆಯ ಮೂಲಸೌಕರ್ಯ ಅಭಿವೃದ್ಧಿಯ ಉಸ್ತುವಾರಿಯಾಗಿದ್ದರು. ಡಿಪ್ಯೂಟಿ ಚೀಫ್ ಆಫ್ ನಾವೆಲ್ ಸ್ಟಾಫ್ ಮತ್ತು ವೈಸ್ ಚೀಫ್ ಆಫ್ ದಿ ನಾವೆಲ್ ಸ್ಟಾಫ್ ಆಗಿ ಉನ್ನತ ಜವಾಬ್ದಾರಿಗಳನ್ನು ಇವರು ನಿಭಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.