ನವದೆಹಲಿ: ಔಪಚಾರಿಕ ವಲಯದ ತಲಾ ಉದ್ಯೋಗ ಸೃಷ್ಟಿಯು 17 ತಿಂಗಳಲ್ಲೇ ಉನ್ನತ ಮಟ್ಟಕ್ಕೇರಿದೆ. 2019 ರ ಜನವರಿಯಲ್ಲಿ 8.96 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಎಂಪ್ಲಾಯೀಸ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್ನ ಇತ್ತೀಚಿಗೆ ಬಿಡುಗಡೆಯಾದ ವರದಿ ತಿಳಿಸಿದೆ.
ಕಳೆದ ವರ್ಷ ಇದೇ ತಿಂಗಳಲ್ಲೇ 3.87 ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು. ಅದಕ್ಕೆ ಹೋಲಿಸಿದರೆ ಈ ಜನವರಿಯಲ್ಲಿ ಶೇ. 131 ರಷ್ಟು ಏರಿಕೆಯೊಂದಿಗೆ 2,75,609 ಉದ್ಯೋಗಾವಕಾಶಗಳು ಸೃಷ್ಟಿಯಾಗಿದೆ.
ಉದ್ಯೋಗಿಗಳ ದಾಖಲೆಯ ಅಪ್ಡೇಶನ್ ಒಂದು ನಿರಂತರ ಪ್ರಕ್ರಿಯೆಯಾಗಿದ್ದು, 2017ರ ಸೆಪ್ಟೆಂಬರ್ನಿಂದ 2019 ರ ಜನವರಿ ವರೆಗೆ ಸುಮಾರು 76.48 ಲಕ್ಷ ಹೊಸ ಇಪಿಎಫ್ಓ ಚಂದಾದಾರರು ಸೇರ್ಪಡೆಯಾಗಿದ್ದಾರೆ. ಈ ಮೂಲಕ 17 ತಿಂಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಿರುವುದನ್ನು ತೋರಿಸುತ್ತದೆ.
2019 ರ ಜನವರಿಯಲ್ಲಿ 8,96,516 EPFO ಚಂದಾದಾರರಾಗಿದ್ದು, ಇದು ಸೆಪ್ಟೆಂಬರ್ 2017 ರ ನಂತರ ಸೇರ್ಪಡೆಗೊಂಡ ಅತಿ ಹೆಚ್ಚು ಚಂದಾದಾರರು. 22 ರಿಂದ 25 ವರ್ಷದ 2.44 ಲಕ್ಷ ಯುವಕರು ಉದ್ಯೋಗ ಪಡೆದಿದ್ದಾರೆ. 18 ರಿಂದ 21 ವರ್ಷದ 2.24 ಲಕ್ಷ ಯುವಕರು ಉದ್ಯೋಗಕ್ಕೆ ಸೇರಿದ್ದಾರೆ ಎಂದು EPFO ಅಂಕಿ-ಅಂಶ ತಿಳಿಸಿದೆ.
ಔಪಚಾರಿಕ ಮತ್ತು ಸೆಮಿ ಔಪಚಾರಿಕ ವಲಯದ ಸಾಮಾಜಿಕ ಭದ್ರತಾ ಅನುದಾನಗಳನ್ನು ನಿರ್ವಹಿಸುವ ಕಾರ್ಯವನ್ನು EPFO ಮಾಡುತ್ತದೆ. 2017 ರ ಸೆಪ್ಟೆಂಬರ್ನಿಂದ ಇಲ್ಲಿಯವರೆಗಿನ ವೇತನದಾರರ ಪಟ್ಟಿ ಪ್ರಕಾರ ಈ ಅಂಕಿ-ಅಂಶಗಳಿವೆ ಎಂದು EPFO ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.