ಜಗತ್ತಿನಲ್ಲಿ ಭಾರತವು ಶ್ರೀಮಂತ ಜೀವವೈವಿಧ್ಯತೆಗಳನ್ನು ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಿದೆ. ಯುನೆಸ್ಕೋ ಪ್ರಕಾರ, ಹೂವು ಮತ್ತು ಸಸ್ಯ ಪ್ರಬೇಧ, ಜೀವ ಸಂಕುಲಗಳಲ್ಲಿ ಭಾರತದ ವೈವಿಧ್ಯತೆಯು ಅದನ್ನು ಪ್ರಮುಖ ಜೀವವೈವಿಧ್ಯದ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ. ಜಾಗತಿಕವಾಗಿ ಭಾರತ ಸುಮಾರು ಶೇ.8.8% ರಷ್ಟು ಪ್ರಬೇಧಗಳಿಗೆ ಆತಿಥೇಯವಾಗಿರಲು ಪ್ರಮುಖ ಕಾರಣವೆಂದರೆ ಅದರ ಕಾಡುಗಳು. ಭಾರತದಲ್ಲಿನ ಅರಣ್ಯಗಳು ದೇಶದ ಒಟ್ಟು ಭೌಗೋಳಿಕ ಪ್ರದೇಶದ ಸುಮಾರು 20% ವನ್ನು ಹೊಂದಿದೆ ಮತ್ತು ಮಹಾರಾಷ್ಟ್ರವು 50,000 ಚ.ಕಿ.ಮೀ.ಗಳಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ದೇಶದ ಅತಿದೊಡ್ಡ ಅರಣ್ಯ ಪ್ರದೇಶದ ಅಗ್ರ ರಾಜ್ಯಗಳಲ್ಲಿ ಇದು ಒಂದಾಗಿದೆ.
ಫಾರೆಸ್ಟ್ ಸರ್ವೇ ಆಫ್ ಇಂಡಿಯಾ ನಡೆಸಿದ ಭಾರತ ರಾಜ್ಯ ಅರಣ್ಯ ವರದಿ 2018ರ ಪ್ರಕಾರ, ಮಹಾರಾಷ್ಟ್ರದ ಅರಣ್ಯ ಪ್ರದೇಶವು ಕಳೆದ 4 ವರ್ಷಗಳಲ್ಲಿ 16% ಹೆಚ್ಚಾಗಿದೆ. ಅದರ ಹಸಿರು ಹೊದಿಕೆಯು 43,843 ಚದರ ಕಿ.ಮೀ ನಿಂದ 50,692 ಚದರ ಕಿ.ಮೀ. ವರೆಗೆ ಹೆಚ್ಚಿದೆ, ಈ ಮೂಲಕ 6,839 ಚದರ ಕಿ.ಮೀ ಹೆಚ್ಚಳವನ್ನು ಕಾಣಲಾಗಿದೆ. ಮ್ಯಾಂಗ್ರೋವ್ ಗಳ ವಿಷಯಕ್ಕೆ ಬಂದರೆ, ಇದು 96% ನಷ್ಟು ದಾಖಲೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇದರ ಜೊತೆಗೆ, ಮಹಾರಾಷ್ಟ್ರವು ಅಂತರ್ಮುಖಿ ಮರದ ಸಂಖ್ಯೆಗಳ ಅಪೂರ್ವ ಏರಿಕೆಗೆ ಸಾಕ್ಷಿಯಾಗಿದೆ.
ಮಹಾರಾಷ್ಟ್ರದ ದಟ್ಟ ಕಾಡು ಕವಚವು 24.4% ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಹಿಂದಿನ 17 ವರ್ಷಗಳಲ್ಲಿ, ಕಾಡುಗಳಿಂದ ಹೊರಗಿರುವ ಮರಗಳ ಹೊದಿಕೆ 18.8% ರಷ್ಟು ಅಂದರೆ 1,562 ಚದರ ಕಿ.ಮೀ- ಇದು ಭಾರತದಲ್ಲೇ ಅತ್ಯಧಿಕ ಪ್ರಮಾಣದ್ದಾಗಿದೆ. 1994 ರಿಂದಲೂ ಅರಣ್ಯ ಪ್ರದೇಶದಿಂದ ಹೀರಿಕೊಳ್ಳಲ್ಪಟ್ಟ ಇಂಗಾಲದ ಡೈಆಕ್ಸೈಡ್ ಪ್ರಮಾಣವು 16.65% ನಷ್ಟು ಅಂದರೆ 1,011 ಚದರ ಕಿ.ಮೀ. ಹೆಚ್ಚಾಗಿದೆ ಮತ್ತು ಅರಣ್ಯಗಳೊಳಗಿನ ಜಲಸಂಪನ್ಮೂಲಗಳು 1.15% (2005 ರಿಂದ 2015) ವರೆಗೆ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.
ರಾಷ್ಟ್ರೀಯ ಅರಣ್ಯ ನೀತಿ 1988 ಮತ್ತು ಮಹಾರಾಷ್ಟ್ರದ ರಾಜ್ಯ ಅರಣ್ಯ ನೀತಿ 2008, ಎಲ್ಲಾ ಜೀವಿಗಳಿಗೆ ಆರೋಗ್ಯಕರ ವಾತಾವರಣವನ್ನು ಉಳಿಸಿಕೊಡುವ ಸಲುವಾಗಿ ಒಟ್ಟು ಭೂಮಿಯ 33% ರಷ್ಟು ಪ್ರದೇಶದಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಉದ್ದೇಶಿಸಿದೆ. ಬರಡು ಪ್ರದೇಶಗಳಲ್ಲಿ ಅರಣ್ಯವನ್ನು ಬೆಳೆಸಲು ಮಹಾರಾಷ್ಟ್ರ ಸರಕಾರವು ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತಂದಿದೆ. ನಾಗರಿಕ ಸಮಾಜ ಮತ್ತು ಅರಣ್ಯ ಇಲಾಖೆಗಳು ಇದರಲ್ಲಿ ಉತ್ಸಾಹದಿಂದ ಭಾಗವಹಿಸುವುದು ಕಂಡುಬಂದಿದೆ. ಮಹಾರಾಷ್ಟ್ರದ ಈ ಕಾರ್ಯ ಖಂಡಿತವಾಗಿಯೂ ಇತರ ರಾಜ್ಯಗಳು ಅನುಕರಿಸಲು ಮಾದರಿಯಾಗಿದೆ.
ಮಹಾರಾಷ್ಟ್ರ ಸರಕಾರವು ಹೊಸ ಸಾಮಾಜಿಕ ಅರಣ್ಯ ಉಪಕ್ರಮವನ್ನು ರೂಪಿಸಿದೆ, ಇದನ್ನು ಆ ರಾಜ್ಯದಲ್ಲಿ 80% ರಷ್ಟು ಅರಣ್ಯ ಪ್ರದೇಶಗಳಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಸಲುವಾಗಿ ಅನುಷ್ಠಾನಗೊಳಿಸಲಾಗಿದೆ. ಸಮುದಾಯ ಉದ್ಯಾನಗಳು, ಗ್ರಾಮ ಉದ್ಯಾನಗಳು, ನಗರ ಅರಣ್ಯ, ಕೃಷಿ ಅರಣ್ಯ ಮತ್ತು ಬಿದಿರಿನ ತೋಟಗಳಂತಹ ಹಲವು ಪರಿಕಲ್ಪನೆಗಳನ್ನು ಇದು ಒಳಗೊಂಡಿದೆ. “ಟ್ರೀ ಕ್ರೆಡಿಟ್” ಎಂಬ ಹೊಸ ಪರಿಕಲ್ಪನೆಯು ಜನರನ್ನು ಪ್ರೋತ್ಸಾಹಿಸಲು ಪ್ರೇರೇಪಿಸುತ್ತದೆ. ತಾವು ಬೆಳೆದ ಮರಗಳಿಂದ ಹೇಗೆ ಆದಾಯವನ್ನು ಪಡೆಯಬಹುದು ಎಂಬುದನ್ನು ವಿವರಿಸಲು ಇದು ಯಶಸ್ವಿಯಾಗಿದೆ.
2016 ರಲ್ಲಿ, 2 ಕೋಟಿ ಗಿಡಗಳನ್ನು ಒಂದೇ ದಿನದಲ್ಲಿ ನೆಡುವ ಕಾರ್ಯಕ್ರಮವನ್ನು ಮಹಾರಾಷ್ಟ್ರದಲ್ಲಿ ಹಾಕಿಕೊಳ್ಳಲಾಗಿತ್ತು, ಆದರೆ ಈ ಗುರಿಯನ್ನು ದಾಟಿ 2.82 ಕೋಟಿ ಸಸಿಗಳನ್ನು ನೆಡಲಾಯಿತು. ಈ ಕಾರ್ಯಕ್ರಮ ನಿಜವಾದ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿತು. ಈ ಬೃಹತ್ ಯಶಸ್ಸು ಅರಣ್ಯ ಇಲಾಖೆಯನ್ನು ಪ್ರೇರೇಪಿಸಿತು, 50 ಕೋಟಿ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಇಟ್ಟುಕೊಂಡ ಕಾರ್ಯಕ್ರಮವನ್ನು ಅದು ಆರಂಭಿಸಿತು. 2019ಕ್ಕೆ ಇದನ್ನು ಪೂರ್ಣಗೊಳಿಸುವ ಗುರಿಯನ್ನು ಇಡಲಾಯಿತು. ಸರ್ಕಾರವು ಬಿದಿರು ಮತ್ತು ಮ್ಯಾಂಗ್ರೋವ್ ಗಳನ್ನೂ ಇಲ್ಲಿ ಅಳವಡಿಸಿದೆ. ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗಳು ಕೂಡ ಇದನ್ನು ಸಾಕ್ಷ್ಯೀಕರಿಸಲು ಮುಂದಾಯಿತು. ಈ ಕಾರ್ಯಕ್ರಮದಡಿ ಇದುವರೆಗೆ 33 ಕೋಟಿ ಸಸಿಗಳನ್ನು ಮಹಾರಾಷ್ಟ್ರದಾದ್ಯಂತ ನೆಡಲಾಗಿದೆ.
ಒಟ್ಟಿನಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ಮಹಾರಾಷ್ಟ್ರ ಕೈಗೊಂಡಿರುವ ಕ್ರಮಗಳು ನಿಜಕ್ಕೂ ಪ್ರೇರಣಾದಾಯಕವಾಗಿದೆ. ಅರಣ್ಯಗಳ ವಿಷಯದಲ್ಲಿ ನಿಜಕ್ಕೂ ಆ ರಾಜ್ಯ ಅತ್ಯಂತ ಪ್ರಗತಿಯನ್ನು ಕಾಣುತ್ತಿದೆ. ಇತರ ರಾಜ್ಯಗಳೂ ಇದನ್ನು ಅನುಸರಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.