ನವದೆಹಲಿ: L&T ಡಿಫೆನ್ಸ್ ಸಂಸ್ಥೆಯು 100ನೇ ಸೆಟ್ನ ಬ್ರಹ್ಮೋಸ್ ಟ್ರಾನ್ಸ್ಪೋರ್ಟ್-ಸ್ಟೋರೇಜ್ ಲಾಂಚ್ ಕನಿಸ್ಟರ್(ಟಿಎಲ್ಸಿ) ಅನ್ನು ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ (ಬಿಎಪಿಎಲ್)ಗೆ ಒದಗಿಸಿದೆ. ಇತ್ತೀಚಿಗೆ ಗುಜರಾತಿನ ವಡೋದರದ ರಂಗೋಲಿಯಲ್ಲಿ ನಿರ್ಮಾಣವಾದ L&T ಡಿಫೆನ್ಸ್ನ ಉತ್ಪಾದನಾ ಫೆಸಿಲಿಟಿಯಲ್ಲಿ ಟಿಆಲ್ಸಿ ಯನ್ನು ನಿರ್ಮಾಣ ಮಾಡಲಾಗಿದೆ.
ಕನಿಷ್ಟರ್ ಅನ್ನು ಸ್ಟೋರೇಜ್, ಟ್ರಾನ್ಸ್ಪೋರ್ಟ್ ಮತ್ತು ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್ನ ಉಡಾವಣೆಗಾಗಿ ವಿನ್ಯಾಸಪಡಿಸಲಾಗಿದ್ದು, ಸ್ವದೇಶಿ ವಸ್ತುಗಳನ್ನು ಮತ್ತು ಪ್ರಕ್ರಿಯೆಗಳನ್ನು ಬಳಸಿ ಇದರ ನಿರ್ಮಾಣ ಮಾಡಲಾಗಿದೆ.
ವರದಿಗಳ ಪ್ರಕಾರ, ಉಡಾವಣೆಗೆ ಸಿದ್ಧಗೊಂಡ ಸ್ಥಿತಿಯಲ್ಲಿರುವ ಕ್ಷಿಪಣಿಗಳ ಸುದೀರ್ಘಾವಧಿ ಸಂಗ್ರಹಣಾ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡರೆ, ಟಿಆಲ್ಸಿಯು ಸ್ವಯಂಚಾಲಿತವಾದ ಅಂಕುಡೊಂಕಾದ ವಿಶೇಷ ಉತ್ಪಾದನಾ ಪ್ರಕ್ರಿಯೆಗಳನ್ನು ಹೊಂದುವ ಅಗತ್ಯವಿದೆ, ಗಾಜಿನಿಂದ ಮತ್ತು ಕಾರ್ಬನ್ ಪೂರ್ವ-ಲೇಪಿತ ಫೈಬರ್ ವಸ್ತುಗಳಿಂದ ಮಾಡಲ್ಪಟ್ಟ ವಿಶಿಷ್ಟವಾದ ಪದರಗಳ ಮೂಲಕ ಇದನ್ನು ನಿರ್ಮಾಣ ಮಾಡಲಾಗಿದೆ.
ಬ್ರಹ್ಮೋಸ್ ವೆಪನ್ ಸಿಸ್ಟಮ್ನ ಸರಣಿ ಉತ್ಪಾದನಾ ಅಗತ್ಯಗಳನ್ನು ಸರಿಹೊಂದಿಸುವ ಸಲುವಾಗಿ ಬ್ರಹ್ಮೋಸ್ ಟಿಎಲ್ ಸಿ ಉತ್ಪಾದನಾ ಫೆಸಿಲಿಟಿಯನ್ನು ವಡೋದರದ ರಂಗೋಲಿಯಲ್ಲಿ ಸ್ಥಾಪಿಸಲಾಗಿದೆ.
ಈಗಾಗಲೇ ರಂಗೋಲಿ ಉತ್ಪಾದನಾ ಫೆಸಿಲಿಟಿಯಲ್ಲಿ ಬ್ರಹ್ಮೋಸ್ ಕಾಂಪೋಸಿಟ್ ಕನಿಸ್ಟರ್ ಮತ್ತು ಏರ್ ಫ್ರೇಮ್ಸ್ ಗಳ ಸರಣಿ ಉತ್ಪಾದನೆ ಆರಂಭಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.