ಕಳೆದ ಕೆಲವು ವರ್ಷಗಳಿಂದ ಭಾರತವು ಹೂಡಿಕೆದಾರರಿಗೆ ಸಂಭಾವ್ಯ ಅವಕಾಶಗಳನ್ನು ಹೊರಹೊಮ್ಮಿಸಿವೆ, ಆರ್ಥಿಕತೆಯು ಮಹತ್ತರವಾಗಿ ಬೆಳೆಯುವ ಸಾಮರ್ಥ್ಯವನ್ನೂ ತೋರಿಸಿದೆ. ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯು ಸರ್ಕಾರದ ಪ್ರಬಲ ಬೆಂಬಲವನ್ನು ಗಿಟ್ಟಿಸಿಕೊಂಡಿದೆ, ವಿದೇಶಿ ಸಾಂಸ್ಥಿಕ ಹೂಡಿಕೆ (Foreign Institutional Investments) ಗಳು ಪ್ರಬಲವಾಗುತ್ತಿವೆ ಮತ್ತು ಮುಂದೆಯೂ ಪ್ರಬಲವಾಗಿಯೇ ಮುಂದುವರೆಯುವ ನಿರೀಕ್ಷೆಯಿದೆ.
ಈ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿನ ದೊಡ್ಡ ಪ್ರಮಾಣದ ಹೂಡಿಕೆ ಒಳಹರಿವಿನ ಫಲವಾಗಿ ಎಫ್ಐಐ (ವಿದೇಶಿ ಸಾಂಸ್ಥಿಕ ಹೂಡಿಕೆ) ಸಕಾರಾತ್ಮಕ ಏರಿಕೆಯನ್ನು ಕಂಡಿದೆ. ಯಾವಾಗ ಚುನಾವಣೆಯನ್ನು ಘೋಷಣೆ ಮಾಡಲಾಗುತ್ತದೋ ಆಗ ರಾಜಕೀಯ ಅನಿಶ್ಚಿತತೆಗಳು ಅತ್ಯಧಿಕವಾಗುತ್ತವೆ ಮತ್ತು ಹೂಡಿಕೆದಾರರು ಈ ಅವಧಿಯಲ್ಲಿ ದೂರ ಉಳಿಯಲು ಬಯಸುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಮೇ 23 ರಂದು ಮತ್ತೆ ಪ್ರಧಾನಿಗಳಾಗಿ ಎರಡನೇ ಅವಧಿಗೆ ಆಯ್ಕೆಯಾಗುತ್ತಾರೆ ಎಂಬುದನ್ನು ಈಗಾಗಲೇ ಮಾರುಕಟ್ಟೆಗಳು ಊಹೆ ಮಾಡಿವೆ.
ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ಒಟ್ಟು ಎಫ್ಐಐ ಖರೀದಿ 17220 ಕೋಟಿ ರೂಪಾಯಿಗಳಾಗಿವೆ. ಇದಲ್ಲದೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1822 ಕೋಟಿ ರೂಪಾಯಿಗಳಿಗೆ ನಿವ್ವಳ ಖರೀದಿದಾರರನ್ನು ರೂಪಿಸುತ್ತಾರೆ, ಈ ತಿಂಗಳಲ್ಲಿ 10% ಹೂಡಿಕೆಯನ್ನು ಇವರು ರೂಪಿಸಿದ್ದಾರೆ.
“ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಭಾರತದ ಹಣಕಾಸು ಮಾರುಕಟ್ಟೆಗಳ ಅತಿ ದೊಡ್ಡ ಚಾಲಕರಲ್ಲಿ ಒಬ್ಬರಾಗಿದ್ದಾರೆ ಮತ್ತು ಹಣಕಾಸು ವರ್ಷ 2018 ರ ನಡುವೆ ಭಾರತದಲ್ಲಿ 12.51 ಟ್ರಿಲಿಯನ್ (ಯುಎಸ್ $ 171.81 ಶತಕೋಟಿ) ಹೂಡಿಕೆ ಮಾಡಿದ್ದಾರೆ. ಹೆಚ್ಚು ಅಭಿವೃದ್ಧಿ ಹೊಂದಿದ ಪ್ರಾಥಮಿಕ ಮತ್ತು ಮಾಧ್ಯಮಿಕ ಮಾರುಕಟ್ಟೆಗಳ ಮೂಲ ಇದಾಗಿದ್ದು, ದೇಶಕ್ಕೆ ಎಫ್ಐಐಗಳನ್ನು ಆಕರ್ಷಿಸಿವೆ”ಎಂದು ಪ್ರಕಟನೆಯಲ್ಲಿ ಮಾಹಿತಿ ನೀಡಲಾಗಿದೆ.
ಎನ್ಎಸ್ಡಿಎಲ್ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಈ ಕ್ಯಾಲೆಂಡರ್ ವರ್ಷದ ಚಾಲ್ತಿಯಲ್ಲಿರುವ ತ್ರೈಮಾಸಿಕಕ್ಕೆ ಒಟ್ಟು ಎಫ್ಐಐ ಹೂಡಿಕೆಯು ಈ ವರ್ಷದ ಜನವರಿಯಿಂದ ಮಾರ್ಚ್ವರೆಗೆ 36723 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಇಕ್ವಿಟಿಯು 984 ಕೋಟಿ ರೂ. ಮತ್ತು ಹೈಬ್ರಿಡ್ ಇನ್ವೆಸ್ಟ್ಮೆಂಟ್ ರೂ. 866 ಕೋಟಿ ಆಗಿದೆ. ಆದರೆ 2018 ರ ಕೊನೆಯ ಕ್ಯಾಲೆಂಡರ್ ವರ್ಷದಲ್ಲಿ, ಒಟ್ಟು ಹೂಡಿಕೆಯ ಮೊತ್ತ ರೂ 80919 ಕೋಟಿ, ಇಕ್ವಿಟಿ ರೂ. 33014 ಕೋಟಿ ಮತ್ತು ಸಾಲ 47,795 ಕೋಟಿ ರೂ.ಇತ್ತು.
ಕೆನಡಾ ಪೆನ್ಷನ್ ಪ್ಲ್ಯಾನ್ ಇನ್ವೆಸ್ಟ್ಮೆಂಟ್ ಬೋರ್ಡ್ (ಸಿಪಿಪಿಐಬಿ)ಯು ಭಾರತೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಜನಸಂಖ್ಯಾ ಬೆಳವಣಿಗೆಯನ್ನು ಆಧರಿಸಿ ನೋಡಿದರೆ ದೇಶವು ಉತ್ತಮ ಹೂಡಿಕೆಯ ತಾಣವಾಗಿದೆ, ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯನ್ನು ಹೊಂದುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಭಿಪ್ರಾಯಿಸಿದೆ.
“ಭಾರತಕ್ಕೆ ಸಂಬಂಧಿಸಿದಂತೆ ಎಫ್ಐಐ ಪಾಲ್ಗೊಳ್ಳುವಿಕೆಯು ಬಹಳ ಸ್ಥಿರವಾಗಿದೆ ಮತ್ತು ಈ ಪ್ರವೃತ್ತಿ ಮುಂದುವರಿಯುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ನವೆಂಬರ್ 2013 ರಿಂದಲೂ ನಾವು ಏಷ್ಯಾ ಮತ್ತು ಉದಯಿಸುತ್ತಿರುವ ಮಾರುಕಟ್ಟೆಗಳ ವಿಷಯದಲ್ಲಿ ಭಾರತಕ್ಕೆ ಹೆಚ್ಚಿನ ತೂಕವನ್ನು ಕೊಟ್ಟಿದ್ದೇವೆ ಮತ್ತು ಈ ನಿಲುವು ಮುಂದುವರಿಯುತ್ತದೆ” ಎಂದು ಜಾಗತಿಕ ಸಂಶೋಧನೆ, ಜೆಪಿ ಮೋರ್ಗಾನ್ ಇಂಡಿಯಾದ MD ಭರತ್ ಐಯ್ಯರ್ ಹೇಳಿದ್ದಾರೆ. 2014 ರ ನಂತರ ಭಾರತೀಯ ಸರ್ಕಾರ ತೆಗೆದುಕೊಂಡಿರುವ ಆರ್ಥಿಕ ಕ್ರಮಗಳನ್ನು ಅವರು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಆರ್ಥಿಕತೆಯು ಬೆಳೆಯುತ್ತಿರುವುದರಿಂದ ಮತ್ತು ಗಡಿಗಳನ್ನು ಮೀರಿ ಹೂಡಿಕೆಗಳು ಹೆಚ್ಚಾಗುತ್ತಲೇ ಹೋಗುತ್ತಿರುವುದರಿಂದ ದೇಶವು ಆರ್ಥಿಕವಾಗಿ ಪ್ರಬಲಗೊಳ್ಳುತ್ತದೆ. ಪ್ರಸ್ತುತ ಚುನಾವಣೆ ಸಮೀಪಿಸುತ್ತಿರುವುದರಿಂದ, ಆರ್ಥಿಕ ವೇಗವರ್ಧಕಗಳಲ್ಲಿನ ಬೆಲೆ ಏರಿಳಿತಗಳು ದೇಶದ ಮೇಲೆ ಪ್ರಭಾವ ಬೀರುತ್ತವೆ ಮತ್ತು ಹೆಚ್ಚಿನ ಅವಲೋಕನಕ್ಕೊಳಗಾಗುತ್ತವೆ, ಇದರಿಂದಾಗಿ ಈ ಸಮಯದಲ್ಲಿ ಪರಿಣಾಮಕಾರಿಯಾದ ವಿಶ್ಲೇಷಣೆಗಳು ಚುನಾವಣೆಯ ಮುಂಚೆ ನಡೆಯಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.