ಮೋದಿ ಸರ್ಕಾರ ಕಡಿಮೆ ಹಣದುಬ್ಬರಕ್ಕೆ ನೀಡಿರುವ ಹೆಚ್ಚಿನ ಒತ್ತು ಮತ್ತು ತನ್ನೆಲ್ಲಾ ನೀತಿ/ಕಾರ್ಯಕ್ರಮಗಳಿಗೆ ನೀಡುತ್ತಿರುವ ದೊಡ್ಡ ಪ್ರಮಾಣದ ಉತ್ತೇಜನದಿಂದಾಗಿ ಜೀವನ ನಿರ್ವಹಣಾ ವೆಚ್ಚ ಕಡಿಮೆಯಾಗಿದೆ ಮತ್ತು ಮಧ್ಯಮ ವರ್ಗದ, ಕಡಿಮೆ ಆದಾಯ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸಲು ಇದು ಕಾರಣವಾಗಿದೆ. ಹಲವಾರು ವಸ್ತುಗಳಲ್ಲಿ ಉಳಿತಾಯ ಮಾಡುವ ಮೂಲಕ, ಕಡಿಮೆ ಮತ್ತು ಮಧ್ಯಮ ಆದಾಯ ಕುಟುಂಬಗಳ ಜೀವನ ವೆಚ್ಚ ಕಳೆದ 5 ವರ್ಷಗಳಲ್ಲಿ ಶೇ. 5 ರಿಂದ 6% ರಷ್ಟು ಹೆಚ್ಚಾಗಿದೆ (ಕೆಳಗೆ ಪಟ್ಟಿ ನೋಡಿ). ಇದರ ವಿರುದ್ಧವಾಗಿ, ಈ ವರ್ಗಗಳ ಆದಾಯವು ಅದೇ ಅವಧಿಯಲ್ಲಿ 40-60% ರಷ್ಟು ಹೆಚ್ಚಾಗಿದೆ. ಇದರಿಂದಾಗಿ ಜೀವನಮಟ್ಟ ಸುಧಾರಣೆಗೆ ಮತ್ತು ಉಳಿತಾಯಕ್ಕೆ ಅನುದಾನ ಲಭ್ಯವಾಗುವಂತಾಗಿದೆ. ಉದಾಹರಣೆಗೆ, ಭಾರತದಲ್ಲಿ ಸರಾಸರಿ ವಾಯು ದಟ್ಟಣೆಯ (Air Traffic) ಬೆಳವಣಿಗೆಯು ಕಳೆದ 4.5 ವರ್ಷಗಳಲ್ಲಿ ಶೇ.18-20% ರಷ್ಟಿದೆ. 2014ರಲ್ಲಿ ಸಿಂಗಲ್ ಡಿಜಿಟ್ 1ಎಚ್ ಇತ್ತು. ಇದು ಕಡಿಮೆ ಮತ್ತು ಮಧ್ಯಮ-ಆದಾಯದ ವರ್ಗದಲ್ಲಿ ಮತ್ತು ಮೋದಿ ಸರ್ಕಾರದಲ್ಲಿ ಖರ್ಚು ಮಾಡುವ ಶಕ್ತಿ ಹೆಚ್ಚಿದೆ ಎಂಬುದನ್ನು ತೋರಿಸುತ್ತದೆ. ಉಡಾನ್ನಂತಹ ಯೋಜನೆಗಳು ಯಶಸ್ವಿಯಾಗಿವೆ. ಅದೇ ರೀತಿ, ಈ ಸನ್ನಿವೇಶವನ್ನು ಬೆಂಬಲಿಸುವ ಹಲವಾರು ಪುರಾವೆಗಳನ್ನು ಕಾಣಬಹುದು.
ಕಾರ್ಪೋರೇಟ್ ಆದಾಯಗಳೂ ಕಳೆದ 5 ವರ್ಷಗಳಲ್ಲಿ ಶೇ.5ರಷ್ಟು ಏರಿಕೆಯಾಗಿದೆ ಮತ್ತು ವೇತನದಲ್ಲಿನ ಹೆಚ್ಚಳಗಳು ಕೂಡ ಕಡಿಮೆ/ಮಧ್ಯಮ ಆದಾಯ ವರ್ಗದ ಆದಾಯವನ್ನು ಹೆಚ್ಚಿಸಲು ಒಂದು ಕಾರಣವಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ವರ್ಗಗಳ ಆದಾಯ ಪ್ರಗತಿಯು ಜಿಡಿಪಿ ಪ್ರಗತಿ(ಶೇ11-12)ಕ್ಕೆ ಅನುಗುಣವಾಗಿದೆ ಎಂದು ಅಂದಾಜಿಸಲಾಗಿದೆ.
ಮೋದಿ ಸರ್ಕಾರವು 1. ಜೀವನ ನಿರ್ವಹಣಾ ವೆಚ್ಚವನ್ನು ಕಡಿಮೆಗೊಳಿಸುವಲ್ಲಿ ಮತ್ತು 2. ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಅತ್ಯಂತ ಕ್ರಿಯಾಶೀಲ ಪಾತ್ರವನ್ನು ನಿಭಾಯಿಸಿದೆ.
ಮೋದಿ ಆಡಳಿತದಡಿ ಕುಟುಂಬಗಳ ವೆಚ್ಚವು ಹಲವಾರು ವಿಭಾಗಗಳಲ್ಲಿ ಕಡಿಮೆಯಾಗಿದೆ ಅಥವಾ ಹಣದುಬ್ಬರ ಕಡಿಮೆಯಾಗಿದೆ-1. ವಸತಿ (ಕಡಿಮೆ ಬಡ್ಡಿದರಗಳಿಂದಾಗಿ ಕಡಿಮೆ ಇಎಂಐ, ಸಿಎಲ್ಎಸ್ಎಸ್/ಪಿಎಂಎವೈ ಯೋಜನೆ ಮತ್ತು ಕಡಿಮೆ ಜಿಎಸ್ಟಿ. ಮನೆಗಳ ಲಭ್ಯತೆ 25 ವರ್ಷಗಳಿಗಿಂತ ಹೆಚ್ಚಿನ ಮಟ್ಟದಲ್ಲಿದೆ), 2. ವೈದ್ಯಕೀಯ (4000 ಜನ್ ಔಷಧಿ ಕೇಂದ್ರಗಳು ಶೇ.70ರಷ್ಟು ಕಡಿಮೆ ದರದಲ್ಲಿ ಔಷಧಿಗಳನ್ನು ಪೂರೈಸುತ್ತಿವೆ). 3. ಮೊಬೈಲ್ ಮತ್ತು ಇಂಟರ್ನೆಟ್ (ವೆಚ್ಚ ಶೇ.80-90ರಷ್ಟು ಕೆಳಗಿಳಿದಿದೆ). 4. ವಿದ್ಯುತ್ (ಕೇವಲ ಶೇ.2 ರಿಂದ ಶೇ.3ರಷ್ಟು ಹೆಚ್ಚಳ. ಈ ಹಿಂದೆ ಶೇ.8ರಷ್ಟು ಹೆಚ್ಚಳವಾಗಿತ್ತು, ಎಲ್ಇಡಿ ಬಲ್ಬ್ಗಳು ಮತ್ತು ಸೋಲಾರ್ ವಿದ್ಯುತ್ನಿಂದಾಗಿ ಯುನಿಟ್ಗೆ ರೂ.2-3ರಷ್ಟು ಇಳಿಕೆ, 2014ರಲ್ಲಿ ಯುನಿಟ್ಗೆ ರೂ.6-8 ಇತ್ತು). 5. ಇಂಧನ ಮತ್ತು ಪ್ರಯಾಣ ವೆಚ್ಚ (2009-13 ಕ್ಕಿಂತ ಕಳೆದ ಐದು ವರ್ಷದಲ್ಲಿ ಇಂಧನ ಬೆಲೆ ಕಡಿಮೆಯಾಗಿದೆ, ಸಿಎನ್ಜಿ ವಿಸ್ತರಣೆ, ಓಲಾ/ಉಬೇರ್). 6. ಆದಾಯ ತೆರಿಗೆ (ಈಗ 3 ಕೋಟಿ ಮಂದಿ ತೆರಿಗೆ ಪಾವತಿಸುತ್ತಿದ್ದಾರೆ), 7. 2014-18ರಲ್ಲಿ ಒಟ್ಟು ಹಣದುಬ್ಬರ ಶೇ.4.5ರಷ್ಟಿತ್ತು, 2009-13 ರಲ್ಲಿ ಶೇ.10ರಷ್ಟಿತ್ತು. ಬಹುವಾಗಿ ಏರಿದ್ದ ಆಹಾರ ಹಣದುಬ್ಬರ ಮೋದಿ ಸರ್ಕಾರದ ಅವಧಿಯಲ್ಲಿ ಕಡಿಮೆಯಾಗಿದೆ.
ಮೋದಿ ಸರ್ಕಾರದ ಹೆಚ್ಚಿನ ಎಲ್ಲಾ ಯೋಜನೆಗಳು ಜೀವನಕ್ಕೆ ಬೇಕಾದ ಶೌಚಾಲಯ, ವಸತಿ, ವೈದ್ಯಕೀಯ ವೆಚ್ಚ/ಚುಚ್ಚು ಮದ್ದು, ಮಕ್ಕಳ ಆರೈಕೆ, ಗ್ಯಾಸ್ ಸಿಲಿಂಡರ್, ವಿದ್ಯುತ್, ಇಂಟರ್ನೆಟ್ ಸಂಪರ್ಕ ಇತ್ಯಾದಿ ಮೂಲ ಸೌಕರ್ಯಗಳನ್ನು ಒದಗಿಸುವತ್ತ ಹೆಚ್ಚು ಗಮನವನ್ನು ಹರಿಸಿದೆ. ಜೀವನ ಮಟ್ಟವನ್ನು ಸುಧಾರಿಸಲು, ಸಮಾಜದ ಮೂಲೆಯಲ್ಲಿನ ವ್ಯಕ್ತಿಗೂ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವತ್ತ ಬದ್ಧತೆಯನ್ನು ತೋರಿಸಿದೆ. ನಾವು ಸ್ಪಷ್ಟವಾಗಿ ಗಮನಿಸಿದರೆ, ಎಲ್ಲಾ ಯೋಜನೆಗಳು ಸಮಗ್ರ ಚಿಂತನೆಯನ್ನು ಹೊಂದಿವೆ. ಹಿಂದಿನ ಸರ್ಕಾರಗಳಂತೆ ನಿರ್ದಿಷ್ಟ ಪಂಗಡ/ ಜಾತಿಯನ್ನು ಗುರಿಯಾಗಿಟ್ಟುಕೊಂಡ ಯೋಜನೆಗಳಲ್ಲ. ಉದಾಹರಣೆಗೆ, ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಭಾರತದ ಇತಿಹಾಸದಲ್ಲೇ ಅತ್ಯಂತ ಭರವಸೆಯ ಯೋಜನೆಯಾಗಿದೆ. ಅದರ ಪ್ರಾಥಮಿಕ ಫಲಿತಾಂಶ (ಈಗಾಗಲೇ 13.5 ಲಕ್ಷ ಜನರನ್ನು ತಲುಪಿದೆ) ನೋಡಿದರೆ, ಇದು ಅತ್ಯಂತ ಯಶಸ್ವಿ ಯೋಜನೆಯಾಗುತ್ತದೆ ಎಂಬುದನ್ನು ಊಹಿಸಲು ಯಾವುದೇ ರಾಕೆಟ್ ಸೈನ್ಸ್ನ ಅಗತ್ಯವಿಲ್ಲ. ದೇಶದ 50 ಕೋಟಿ ಜನರಿಗೆ ಆರೋಗ್ಯ ವಿಮೆ ಕಲ್ಪಿಸುವ ಯೋಜನೆ ಇದಾಗಿದೆ.
ಜೀವನ ನಿರ್ವಹಣಾ ವೆಚ್ಚದಲ್ಲಿ ಕೆಲವೊಂದು ಸಮಗ್ರ ಸಾಧನೆಗಳು ಕೆಳಗಿನಂತಿವೆ
1. ಪ್ರಧಾನಿ ಮಂತ್ರಿ ಆವಾಸ್ ಯೋಜನೆಯಡಿ, 1.50 ಕೋಟಿ ಪಕ್ಕಾ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಮತ್ತು ಅವುಗಳನ್ನು ಬಡವರಿಗೆ ಹಂಚಲಾಗುತ್ತಿದೆ (ಯುಪಿಎ ಅವಧಿಯಲ್ಲಿ 25 ಲಕ್ಷ ಮನೆ ನಿರ್ಮಾಣವಾಗಿತ್ತು).ಇದು ಶೇ.5ರಷ್ಟು ಹೆಚ್ಚಿನ ಸಾಧನೆಯಾಗಿದೆ. ಈ ಸಂಖ್ಯೆಗಳನ್ನು ನೋಡಿದಾಗ, 2022ರ ವೇಳೆಗೆ ಎಲ್ಲರಿಗೂ ವಸತಿ ಕಲ್ಪಿಸುವ ಗುರಿಯನ್ನು ತಲುಪುವುದು ಸಾಧ್ಯವಾಗಲಿದೆ.
2. ಉಜ್ವಲ ಯೋಜನೆಯಡಿ, 7 ಕೋಟಿ ಮನೆಗಳಿಗೆ ಗ್ಯಾಸ್ ಸಂಪರ್ಕವನ್ನು ನೀಡಲಾಗಿದೆ. ಇದರಿಂದ ಹೊಗೆ ಮುಕ್ತ ಅಡುಗೆ ಮನೆಗಳ ಸಂಖ್ಯೆ ಹೆಚ್ಚಾಗಿದೆ. ಇದರ ಕವರೇಜ್ ಈಗ ಶೇ. 90 ರಷ್ಟು, 2014 ರಲ್ಲಿ ಇದು ಶೇ. 40 ಆಗಿತ್ತು.
3. ಸ್ವಚ್ಛ ಭಾರತ ಯೋಜನೆಯಡಿ, 9 ಕೋಟಿ ಶೌಚಾಲಯಗಳ ನಿರ್ಮಾಣವಾಗಿದೆ. ಒಂದರ್ಥದಲ್ಲಿ ಈಗ ಭಾರತ ಬಯಲು ಶೌಚ ಮುಕ್ತ.
4. ಗ್ರಾಮ ವಿದ್ಯುದೀಕರಣ ಮತ್ತು ಸೌಭಾಗ್ಯ ಯೋಜನೆಯಡಿ ಎಲ್ಲಾ ಗ್ರಾಮಗಳು ವಿದ್ಯುದೀಕರಣಗೊಂಡಿವೆ. 2.5 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.
5. ಮೊಬೈಲ್ ಮತ್ತು ಇಂಟರ್ನೆಟ್ ಕನೆಕ್ಟಿವಿಟಿಯಡಿ, 2014ರಲ್ಲಿ 358 ಕಿಮೀ ಆಪ್ಟಿಕ್ ಫೈಬರ್ ನೆಟ್ವರ್ಕ್ ಇದ್ದದು ಈಗ 21000 ಕಿಮೀಗೆ ಏರಿಕೆಯಾಗಿದೆ. 1.5 ಲಕ್ಷ ಗ್ರಾಮಗಳಿಗೆ ಇದು ತಲುಪಿದೆ. ಇಂಟರ್ನೆಟ್ ಬಳಕೆದಾರರ ಸಂಖ್ಯೆ ದ್ವಿಗುಣಗೊಂಡಿದ್ದು, 55 ಕೋಟಿ ಜನರನ್ನು ತಲುಪಿದೆ. ಕಳೆದ ಐದು ವರ್ಷದಲ್ಲಿ ಸ್ಮಾರ್ಟ್ಫೋನ್ 30 ಕೋಟಿ ಜನರನ್ನು ತಲುಪಿದೆ. ಹಿಂದಿನ ಬಳಕೆದಾರರ ಹೈ ಸ್ಪೀಡ್ ಇಂಟರ್ನೆಟ್ಗೆ ಬದಲಾಗಿದ್ದಾರೆ. ಜ್ಞಾನ, ಮನೋರಂಜನೆ, ಮಾಹಿತಿಗಳು ಈಗ ಮಧ್ಯಮ, ಕಡಿಮೆ ಆದಾಯದ ವರ್ಗಗಳ ಕೈಯಲ್ಲಿದೆ.
6. ಪೋಷಣ್ ಅಭಿಯಾನ್-ಅಪೌಷ್ಠಿಕತೆ ಕಳೆದ ಎರಡು ವರ್ಷದಲ್ಲಿ ಶೇ.4ಕ್ಕೆ ಇಳಿಕೆಯಾಗಿದೆ. 2018ರಲ್ಲಿ ಪ್ರಧಾನಿ ಮೋದಿ ಈ ಯೋಜನೆಯನ್ನು ಆರಂಭಿಸಿದ್ದರು. ಇದರಿಂದ ಮಕ್ಕಳ ಅಪೌಷ್ಠಿಕತೆ ತಗ್ಗಿದೆ.
ಈ ಕೆಳಗಿನ ಟೇಬಲ್ನಲ್ಲಿ ಕಡಿಮೆ ಆದಾಯ ಮತ್ತು ಮಧ್ಯಮ ಆದಾಯ ವರ್ಗಗಳ ಆದಾಯ ಮತ್ತು ವೆಚ್ಚಗಳ ಮಾಹಿತಿಯನ್ನು ಒದಗಿಸಲಾಗಿದೆ. ಜಿಡಿಪಿಗೆ ಅನುಗುಣವಾಗಿ ಆದಾಯದ ಮಟ್ಟವನ್ನು ಅಂದಾಜಿಸಲಾಗಿದೆ ಮತ್ತು ವೆಚ್ಚ ಸಣ್ಣ ಸಮೀಕ್ಷೆಗಳನ್ನು ಆಧರಿಸಿದೆ.
Year | 2013-14 | 2018-19 | Remarks | ||
Income Classification | Lower | Middle | Lower | Middle | |
Average Household Income (I)
Rs/Month |
13000 | 34000 | 20800 | 47600 | Corporate Profits/Higher Income category’ income grew at less than 5% in past 5 years vs. Nominal GDP growth of ~11-12%, hinting lower and middle income grew higher. These are estimates of income based on GDP numbers (taken broadly equal to this) and small survey
|
Growth % of Income over 2013-14 | – | – | 60% | 40% | |
Expenses: (Rs/Month) | |||||
Food Expenses/FMCG and Misc. | 6146 | 9218 | 7419 | 11128 | Key food items like wheat/rice have seen reduction in prices, food inflation also has been very low |
Housing | 1560 | 6800 | 1451 | 6896 | 10% of lower income category has got PMAY house. EMIs have come down due to lower interest rates. |
Medical | 1000 | 2380 | 330 | 1785 | Generic medicines available in Jan Aushadhi Kendra opened by Modi government is 70% cheaper than retail and online outlets |
Phone Bills | 585 | 1755 | 240 | 750 | ARPU for major telecom companies reduced by ~50% since 2013. Data and Voice Usage gone up multiple times |
Transport | 650 | 4080 | 806 | 3661 | Prices of Petrol/Diesel stable since 2014, whereas OLA/UBER have reduced taxi charges from 18-20/km to 8-10/km |
School | 800 | 2550 | 992 | 3162 | Modi government has focused on reduced instances of large fees hikes by private schools (For Example UP Govt.) |
Income Tax | 0 | 1300 | 0 | 0 | Budget 2018-19 has increased rebate limit to Rs5Lacs, meaning no income tax till 8-8.5Lacs including other exemptions |
Electricity Bill | 650 | 1700 | 748 | 1955 | Electricity tariffs inflation during past 5 years is marginal 2-3% vs. 8% during 2009-13 |
Total Expenses (II) | 11391 | 29783 | 11985 | 29337 | |
Growth % of Expenses over 2013-14 | – | – | 6% | 0-1% | Increase in Expense has been much lower than income growth leading to more money available for a better standard of living or savings |
Available for emergency / improved standard of living/ Savings | 1609 | 4217 | 8815 | 18263 | Better Housing, Better Roads, Air Travel possible with Udan, Smart Phones, Own Vehicles, Hobbies classes for children etc |
Source : rightlog
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.