ದೇಶದ ಅತ್ಯಂತ ಬುದ್ಧಿವಂತ ರಾಜಕಾರಣಿಗಳ ಪೈಕಿ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಕೂಡ ಒಬ್ಬರು. ಪ್ರತಿಪಕ್ಷಗಳು ಮತ್ತು ಅವರ ರಾಜಕೀಯ ವಿರೋಧಿಗಳು ಕೂಡ ಅವರ ಅವಿಶ್ರಾಂತ ಕೆಲಸದ ಸ್ವಭಾವ ಮತ್ತು ಚಾಣಾಕ್ಷ ಅನುಷ್ಠಾನ ನೀತಿಗಳನ್ನು ಶ್ಲಾಘಿಸುತ್ತಿದ್ದರು. ರಕ್ಷಣಾ ಸಚಿವರಾಗಿದ್ದ ವೇಳೆ, 2027 ರಲ್ಲಿ ಖರೀದಿ ಮಾಡಲಿರುವ ಹೊಸ ವಾಯು ರಕ್ಷಣಾ ವ್ಯವಸ್ಥೆಯ ಬಗೆಗಿನ 15 ವರ್ಷಗಳ ಯೋಜನೆಯನ್ನು ಪರಿಶೀಲನೆ ನಡೆಸುವಂತೆ ಅವರು ಆದೇಶಿಸಿದ್ದರು. ಈ ಪರಿಶೀಲನೆಯಿಂದಾಗಿ ತೆರಿಗೆದಾರರ 49,300 ಕೋಟಿ ರೂಪಾಯಿಗಳು ದೇಶಕ್ಕೆ ಉಳಿತಾಯವಾಯಿತು. ವಾಯು ರಕ್ಷಣಾ ವ್ಯವಸ್ಥೆಗೆ, ದೇಶದಲ್ಲಿ ಮೂರು ಪರಿಧಿಗಳ ಯುದ್ಧವಿಮಾನ ವಿರೋಧಿ ಕ್ಷಿಪಣಿ-25 ಕಿಮೀ ವ್ಯಾಪ್ತಿಯವರೆಗೆ ರಕ್ಷಣೆ ಮಾಡಬಲ್ಲ ಕಡಿಮೆ ವ್ಯಾಪ್ತಿಯ ಇನ್ಸ್ಟಾಲೇಶನ್, 40 ಕಿಮೀ ವ್ಯಾಪ್ತಿಯವರೆಗಿನ ಮೀಡಿಯಂ ಟರ್ಮ್ ಇನ್ಸ್ಟಾಲೇಶನ್ ಮತ್ತು ಎಸ್-400ನಂತಹ ಲಾಂಗ್ ರೇಂಜ್ನ ಲಾಂಗ್ ಟರ್ಮ್ ಇನ್ಸ್ಟಾಲೇಶನ್ಗಳ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದರು.
ಎಸ್-400ಗಳನ್ನು ಖರೀದಿಸಲು, ಭಾರತೀಯ ವಾಯುಸೇನೆಯು ಕೆಲವೊಂದು ಶಾರ್ಟ್ ರೇಂಜ್ ಮತ್ತು ಮೀಡಿಯಂ ರೇಂಜ್ಗಳ ಇನ್ಸ್ಟಾಲೇಶನ್ ಹೊಂದುವುದು ಅಗತ್ಯವಾಗಿದೆ ಎಂಬ ಅಭಿಪ್ರಾಯವನ್ನು ಪರಿಕ್ಕರ್ ಮುಂದಿಟ್ಟಿದ್ದರು. ಹೀಗಾಗಿ 15 ವರ್ಷಗಳ ಖರೀದಿ ಯೋಜನೆ ಬಗ್ಗೆ ಪರಿಶೀಲನೆಗೆ ಆದೇಶಿಸಿದರು. ನಮಗೆ ಅತೀ ಕಡಿಮೆ ಸಂಖ್ಯೆಯ ಶಾರ್ಟ್ ರೇಂಜ್ ಸಿಸ್ಟಮ್ನ ಅಗತ್ಯವಿದೆ ಎಂಬುದನ್ನು ಈ ಅಧ್ಯಯನ ತೋರಿಸಿದೆ. ವಾಯುಸೇನೆಯ ಲೇಯರ್ಡ್ ಡಿಫೆನ್ಸ್ ಪ್ಲಾನ್ ಪ್ರಕಾರ, ಲಾಂಗ್ ರೇಂಜ್ ಸಿಸ್ಟಮ್(ಎಸ್ 400), ಎಂಆರ್ ಎಸ್ಎಎಮ್ ಮತ್ತು ಎಸ್ಎರ್ ಎಸ್ಎಎಂ ರಿಡಂಡಂಟ್ನ್ನು ಅಧಿಕವಾಗಿಸುತ್ತದೆ ಎಂದು ಪರಿಕ್ಕರ್ ವಾಯುಸೇನೆಗೆ ಮನದಟ್ಟು ಮಾಡಿಕೊಟ್ಟರು. ಈ ಹಿಂದೆ ಪ್ರತಿ ಶಾರ್ಟ್ ಮತ್ತು ಮೀಡಿಯಂ ರೇಂಜ್ ಡಿಫೆನ್ಸ್ ಸಿಸ್ಟಮ್ನಲ್ಲಿ 100 ಖರೀದಿ ಮಾಡಲು ಯೋಚಿಸಲಾಗಿತ್ತು. ಪರಿಶೀಲನೆಯ ಬಳಿಕ ಅದನ್ನು ಕಡಿಮೆ ಮಾಡಲಾಯಿತು.
ಕೆಲ ವಾರಗಳ ಹಿಂದೆ, ಭಾರತ ರಷ್ಯಾದೊಂದಿಗೆ ಐದು ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು 6.1 ಬಿಲಿಯನ್ ಡಾಲರ್ಗೆ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಎಸ್-400 ಜಗತ್ತಿನ ಅತ್ಯಂತ ಸುಧಾರಿತ ಮತ್ತು ಅತೀ ದುಬಾರಿ ವಾಯು ರಕ್ಷಣಾ ವ್ಯವಸ್ಥೆಯಾಗಿದೆ. 380 ಕಿಮೀ ವ್ಯಾಪ್ತಿಯಿಂದ ಇದು ಯುದ್ಧವಿಮಾನವನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಎಸ್-400 ರಕ್ಷಣಾ ವ್ಯವಸ್ಥೆ ಭಾರತೀಯ ವಾಯುಸೇನೆಗೆ ಅತ್ಯಂತ ಹೆಚ್ಚಿನ ಉತ್ತೇಜನವನ್ನು ನೀಡಿದೆ’ ಎಂದು ವಾಯುಸೇನಾ ಮುಖ್ಯಸ್ಥ ಬಿ.ಎಸ್. ಧನೋವಾ ತಿಳಿಸಿದ್ದಾರೆ. ಭಾರತ ತನ್ನ ಪಶ್ಚಿಮ ಮತ್ತು ಈಶಾನ್ಯ ನೆರೆಹೊರೆಯ ರಾಷ್ಟ್ರಗಳಿಂದ ಯಾವಾಗಲೂ ಯುದ್ಧಭೀತಿಯನ್ನು ಎದುರಿಸುತ್ತಿರುತ್ತದೆ, ಸಿಪಿಇಸಿ ಬಳಿಕ, ಸಾಲದಲ್ಲಿ ಬಿದ್ದಿರುವ ಪಾಕಿಸ್ಥಾನ ಚೀನಾದ ಅಡಿಯಾಳಾಗಿ ಪರಿಣಮಿಸಿದೆ. ಚೀನಾದ ಬಳಿ 1,700 ಯುದ್ಧ ವಿಮಾನಗಳಿವೆ. ಇದರಲ್ಲಿ 800 ನಾಲ್ಕನೇ ತಲೆಮಾರಿನ ಯುದ್ಧವಿಮಾನಗಳು. ಪಾಕಿಸ್ಥಾನದ ಬಳಿ 20 ಯುದ್ಧ ವಿಮಾನಗಳಿವೆ. ಸುಧಾರಿತ ಎಫ್-16ಗಳನ್ನು ಇದು ಒಳಗೊಂಡಿದೆ. ಅಲ್ಲದೇ, ಚೀನಾದಿಂದ ಅಧಿಕ ಪ್ರಮಾಣದಲ್ಲಿ ಜೆ-17 ಯುದ್ಧವಿಮಾನವನ್ನೂ ಅದು ಸೇರ್ಪಡೆಗೊಳಿಸುತ್ತಿದೆ. ಹೀಗಾಗಿ ಭಾರತ ಎರಡು ದಿಕ್ಕುಗಳಲ್ಲಿನ ಯುದ್ಧವನ್ನು ಎದುರಿಸಲು ಯುದ್ಧವಿಮಾನ ವಿರೋಧಿ ರಕ್ಷಣಾ ವ್ಯವಸ್ಥೆಯೊಂದಿಗೆ ಸಜ್ಜಾಗಿರಬೇಕಾದ ಅನಿವಾರ್ಯತೆ ಇದೆ.
ಎಸ್-400 ಖರೀದಿ ವಿವಿಧ ರೀತಿಯಲ್ಲಿ ಭಾರತಕ್ಕೆ ಅವಶ್ಯಕವಾಗಿದೆ. ಮೊದಲನೆಯದಾಗಿ, ಅಮೆರಿಕಾದೊಂದಿಗಿನ ಸ್ನೇಹಶೀಲ ಸಂಬಂಧದ ಹೊರತಾಗಿಯೂ ಭಾರತ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿರುತ್ತದೆ ಮತ್ತು ಯಾವುದೇ ಒತ್ತಡಕ್ಕೆ ಮಣಿಯುತ್ತಿಲ್ಲ ಎಂಬುದನ್ನು ಅಮೆರಿಕಾಗಿ ತೋರಿಸಲು. ಅಮೆರಿಕಾ ಜೊತೆಗಿನ ಸಂಬಂಧದ ವಿಷಯದಲ್ಲಿ ‘ಇಂಡಿಯನ್ ಎಕ್ಸೆಪ್ಸಲಿಸಮ್’ ಅನ್ನು ತೋರಿಸುವುದಕ್ಕೂ ಇದು ಒಂದು ಅವಕಾಶವಾಗಿದೆ. ಕೆಲ ವರ್ಷಗಳ ಹಿಂದೆ ಚೀನಾವು ರಷ್ಯಾದಿಂದ ಅದೇ ಎಸ್ -400 ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿತು. ಆಗ ಅಮೆರಿಕಾ ಅದರ ಮೇಲೆ ನಿರ್ಬಂಧ ವಿಧಿಸಿತ್ತು. ಸ್ಯಾಂಕ್ಷನ್ ಆಕ್ಟ್ (ಸಿಎಎಟಿಎಸ್ಎ) ಮೂಲಕ ಅಮೆರಿಕವು ನಿರ್ಬಂಧಗಳನ್ನು ವಿಧಿಸಿತು. ಆದರೆ, ಭಾರತಕ್ಕೆ ಅಮೆರಿಕ ಅಧ್ಯಕ್ಷರು ರಷ್ಯಾದಿಂದ ರಕ್ಷಣಾ ವ್ಯವಸ್ಥೆಯನ್ನು ಯಾವುದೇ ನಿರ್ಬಂಧವಿಲ್ಲದೆ ಖರೀದಿಸಲು ಅನುವು ಮಾಡಿಕೊಟ್ಟರು. ಸ್ಯಾಂಕ್ಷನ್ ಆ್ಯಕ್ಟ್ ಅತ್ಯಂತ ಸೂಕ್ಷ್ಮವಾಗಿದೆ, ರಷ್ಯಾದಿಂದ ಯುದ್ಧ ಸಲಕರಣೆಗಳನ್ನು ಪಡೆಯದಂತೆ ರಾಷ್ಟ್ರಗಳ ಮೇಲೆ ಹೇರುವ ಒತ್ತಡವಾಗಿದೆ. ಅಮೇರಿಕಾವು ಭಾರತವನ್ನು ’ವಿಶೇಷ ರಕ್ಷಣಾ ಪಾಲುದಾರ’ನೆಂದು ಪರಿಗಣಿಸಲು ಆರಂಭಿಸಿವೆ. ಇದಕ್ಕಾಗಿ ರಕ್ಷಣಾ ಕಾನೂನು ತಿದ್ದುಪಡಿಗೂ ಅವರು ಸಿದ್ಧರಾಗಿದ್ದಾರೆ.
ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಮನೋಹರ್ ಪರಿಕ್ಕರ್ ಅವರು ದೇಶದ ರಕ್ಷಣಾ ಸಚಿವರಾಗಿದ್ದರು. 2017ರಲ್ಲಿ ಅವರು ಅನಿವಾರ್ಯ ಕಾರಣದಿಂದಾಗಿ ರಾಜ್ಯ ರಾಜಕೀಯಕ್ಕೆ ವಾಪಾಸ್ಸಾದರು. ಆದರೆ, ಎರಡೂವರೆ ವರ್ಷದ ಅವಧಿಯಲ್ಲಿ, ಅವರು ರಕ್ಷಣಾ ಖರೀದಿ ಒಪ್ಪಂದದಲ್ಲಿ ಪಾರದರ್ಶಕತೆಯನ್ನು ತಂದರು ಮತ್ತು ಅದನ್ನು ಹೆಚ್ಚು ಸಮರ್ಥವನ್ನಾಗಿಸಿದರು. ರಕ್ಷಣಾ ಖರೀದಿ ಒಪ್ಪಂದದ ಅಡಿಯಲ್ಲಿ 49,300 ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಿದ್ದಕ್ಕೆ ಕೇಂದ್ರ ಸರ್ಕಾರ ಸದಾ ಅವರಿಗೆ ಚಿರಋಣಿಯಾಗಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.