ನಗರಗಳ ಕಥೆ, ನಗರೀಕರಣದ ಉದಯ ಮತ್ತು ಅವಸಾನ ಭಾರತೀಯ ಇತಿಹಾಸಗಳ ಬಹುಮುಖ್ಯ ಭಾಗವಾಗಿದೆ. ಆದರೆ ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಈ ಕಥೆಗಳನ್ನು ತುಂಬಾ ಆಸಕ್ತಿಕರವಾಗಿ ಎಲ್ಲೂ ಹೇಳಲಾಗಿಲ್ಲ. ಗ್ರಾಮ ಸ್ವರಾಜ್ಯದ ಆದರ್ಶ ನಮ್ಮ ಜನರು ಮತ್ತು ಜನಪ್ರತಿನಿಧಿಗಳು ನಗರಗಳನ್ನು ಆಲಂಗಿಸಿ, ಅದರ ಸಮಸ್ಯೆಗಳನ್ನು ನಿವಾರಿಸುವಂತೆ ಪ್ರೇರೇಪಿಸದೆ ಇದ್ದದ್ದು ದೊಡ್ಡ ದುರಾದೃಷ್ಟ. ಆರ್ಥಿಕ ಉದಾರೀಕರಣದ ಬಳಿಕ ದೇಶದಲ್ಲಿ ನಗರಗಳ ಕಥೆ ಮತ್ತೆ ಉದಯವಾಗುತ್ತಿದೆ. ಮುಂಬರುವ ದಶಕಗಳಲ್ಲಿ ಹಲವು ನಗರಗಳು ತಲೆಯೆತ್ತಲಿವೆ, ಹಲವಾರು ಕೆಳಕ್ಕೆ ಹೋಗಲಿವೆ. ನಗರ ಸೃಷ್ಟಿಗಳ ಇತಿಹಾಸವನ್ನು ಗಮನಿಸಿದರೆ, ಮಾನವ ನಾಗರಿಕತೆ ಎಂಬುದು ನಗರಗಳ ಉದಯ ಮತ್ತು ನಗರಗಳ ಅವಸಾನವನ್ನೇ ಒಳಗೊಂಡಿದೆ, ಮಾನವನ ಪ್ರಗತಿ ಸಕಾರಾತ್ಮಕವಾಗಿ ಬೆಳವಣಿಗೆ ಕಂಡಾಗ ನಗರಗಳ ಪ್ರಾಬಲ್ಯ ಹೆಚ್ಚುತ್ತದೆ. ಸಿಂಧೂ ನಾಗರಿಕತೆಯೇ ಆಗಲಿ ಅಥವಾ ಗುಪ್ತಾ ಸಾಮ್ರಾಜ್ಯವೇ ಆಗಲಿ ಇವುಗಳನ್ನು ಭಾರತದ ಸುವರ್ಣ ಯುಗಗಳೆಂದು ಕರೆಯಲಾಗುತ್ತದೆ. ನಗರೀಕರಣ ಈ ಶ್ರೇಷ್ಠ ನಾಗರಿಕತೆಗಳ ಕೇಂದ್ರ ಬಿಂದುವಾಗಿತ್ತು.
ಗಯಾ, ಬಿಹಾರ ರಾಜ್ಯದ ಅತೀದೊಡ್ಡ ನಗರವಾಗಿದೆ ಮತ್ತು ಇದು ಮಗಧ ಭಾಗದ ರಾಜಧಾನಿಯೂ ಆಗಿದೆ. ಮೋದಿ ಸರ್ಕಾರದ ರಾಷ್ಟ್ರೀಯ ಪಾರಂಪರಿಕ ನಗರ ಅಭಿವೃದ್ಧಿ ಮತ್ತು ಮೌಲ್ಯವರ್ಧನಾ ಯೋಜನಾ National Heritage City Development and Augmentation Yojana (HRIDAY) ದಡಿ ಈ ನಗರ ಪರಿವರ್ತನೆಗೊಂಡಿದೆ. ಹಿಂದೂ, ಜೈನ, ಬೌದ್ಧ ಧರ್ಮಗಳಿಗೆ ಈ ನಗರ ಅತೀ ಮುಖ್ಯವಾಗಿದೆ. ಮಹಾಭಾರತ ಮತ್ತು ರಾಮಾಯಣದಲ್ಲೂ ಈ ನಗರದ ಬಗ್ಗೆ ಉಲ್ಲೇಖವಿದೆ. ಬುದ್ಧನಿಗೆ ಜ್ಞಾನೋದಯವಾಗಿದ್ದು ಇಲ್ಲೇ, ತಂದೆ ದಶರಥನಿಗೆ ಶ್ರೀರಾಮ ಇಲ್ಲೇ ಪಿಂಡ ಪ್ರದಾನ ಮಾಡಿದ್ದ ಎನ್ನಲಾಗುತ್ತದೆ.. ಬೌದ್ಧ ಧರ್ಮದ ನಾಲ್ಕು ಪವಿತ್ರ ಸ್ಥಳಗಳಲ್ಲಿ ಇದು ಕೂಡ ಒಂದು, ಮಹಾಬೋಧಿ ದೇಗುಲ ಇಲ್ಲಿದೆ. HRIDAY ಯೋಜನೆಯಡಿ 2015ರಲ್ಲಿ ಈ ನಗರದ ಅಭಿವೃದ್ಧಿಗಾಗಿ 40.04 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.
ಈ ಯೋಜನೆಯಡಿ ಮೋದಿ ಸರ್ಕಾರವು, ಅಜ್ಮೇರ್, ಅಮರಾವತಿ, ಅಮೃತಸರ, ಬಾದಾಮಿ, ದ್ವಾರಕ, ಗಯಾ, ಕಾಂಚಿಪುರಂ, ಮಥುರಾ, ಪುರಿ, ವಾರಣಾಸಿ, ವೆಲಂಕಣಿ, ವಾರಂಗಲ್ಗಳನ್ನು ಗುರುತಿಸಿ, ಇವುಗಳ ಅಭಿವೃದ್ಧಿಗೆ 500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವುಳ್ಳ ನಗರಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ರಾಜ್ಯಗಳಿಗೂ ಸೂಚನೆ ನೀಡಲಾಗಿದೆ. ಐತಿಹಾಸಿಕ ನಗರಗಳ ಅಭಿವೃದ್ಧಿ ಯೋಜನೆಯಡಿ, ಕೇಂದ್ರ ಸರ್ಕಾರವು ತನ್ನ ಕಾರ್ಪೋರೇಟ್ ಹೌಸ್ಗಳಿಗೆ ಆಯ್ದ ನಗರಗಳ ಅಭಿವೃದ್ಧಿ ಮತ್ತು ಸುಂದರೀಕರಣದ ಹೊಣೆಯನ್ನು ನೀಡಿದೆ. ಈ ಕಾರ್ಪೋರೇಟ್ ಹೌಸ್ಗಳು ಅಭಿವೃದ್ಧಿಗೆ ಬೇಕಾದ ಹಣವನ್ನು ನೀಡುತ್ತವೆ, ಆದರೆ ಯೋಜನೆಯನ್ನು ಆಯಾ ಆಡಳಿತಗಳೇ ಹಾಕುತ್ತವೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಗಯಾದ ವಿಷ್ಣುಪಾದ ಮತ್ತು ಸೂರಜ್ಕುಂಡ್ ಅಭಿವೃದ್ಧಿಯನ್ನು ವಹಿಸಿಕೊಂಡಿದೆ. ಈ ಬಗೆಗಿನ ಯೋಜನೆಯನ್ನು ಅಂತಿಮಗೊಳಿಸಿ, ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಳುಹಿಸಿಕೊಟ್ಟಿದ್ದೇವೆ ಎಂದು ಗಯಾ ಮುನ್ಸಿಪಲ್ ಕಮಿಷನರ್ ವಿಜಯ್ ಕುಮಾರ್ ಹೇಳಿದ್ದಾರೆ.
ಭಾರತಕ್ಕೆ, 21ನೇ ಶತಮಾನ ನಗರೀಕರಣದ ಶತಮಾನವಾಗಿದೆ, ಹೊಸ ಅವಕಾಶಗಳನ್ನು ಹುಡುಕಿಕೊಂಡು ಅಪಾರ ಪ್ರಮಾಣದ ಜನರು ಗ್ರಾಮಗಳಿಂದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ, ಶೀಕ್ಷಣ, ಉದ್ಯೋಗ, ಮಾಹಿತಿ ಮತ್ತು ಸಾಮಾಜಿಕ ಸಬಲೀಕರಣದ ವಿಷಯದಲ್ಲಿ ನಗರಗಳು ಉತ್ತಮ ಜೀವನ ಶೈಲಿಯನ್ನು ಒದಗಿಸಿಕೊಡುತ್ತವೆ. ಭಾರತ, ಚೀನಾ, ಬ್ರೆಝಿಲ್ನಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಕ್ಷಿಪ್ರ ವೇಗದಲ್ಲಿ ನಗರೀಕರಣಗೊಳ್ಳುತ್ತಿವೆ. ಗ್ರಾಮೀಣ ಜನರಿಗೆ ಕೃಷಿ, ಸಣ್ಣ ಉದ್ಯಮಗಳು ಮಾತ್ರವೇ ಜೀವನಾಧಾರವಾಗಿದೆ. ಉತ್ಪಾದನೆ ಕಡಿಮೆ ಇರುವ ಕಾರಣದಿಂದಾಗಿ ಕೃಷಿ ಹೆಚ್ಚಿನ ಪ್ರಮಾಣದ ಜನರಿಗೆ ಉದ್ಯೋಗವನ್ನು ನೀಡಲಾರದು.
ಮೋದಿ ಸರ್ಕಾರ ಅನುಷ್ಠಾನಗೊಳಿಸಿರುವ ನಗರಾಭಿವೃದ್ಧಿ ಯೋಜನೆಗಳಲ್ಲಿ ಸ್ಮಾರ್ಟ್ ಸಿಟಿ ಪ್ರಮುಖವಾದುದು. ಇದರಡಿ 100 ನಗರಗಳನ್ನು ಆಯ್ಕೆ ಮಾಡಿ, ಅವುಗಳನ್ನು ತಂತ್ರಜ್ಞಾನಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಪಡಿಸುವ ಪಣವನ್ನು ತೊಡಲಾಗಿದೆ. ನಗರಾಭಿವೃದ್ಧಿಗೆ ಸಂಬಂಧಿಸಿದ ಮತ್ತೊಂದು ಯೋಜನೆಯೆಂದರೆ, ಎಲ್ಲರಿಗೂ ವಸತಿ. ಬಡವರಿಗೆ 2022ರೊಳಗೆ ಕೈಗೆಟುಕುವ ದರದಲ್ಲಿ ವಸತಿಯನ್ನು ನೀಡಬೇಕು ಎಂಬ ಉದ್ದೇಶದೊಂದಿಗೆ ತಂದ ಯೋಜನೆ ಇದಾಗಿದೆ.
ಅಟಲ್ ನಗರ ಪರಿವರ್ತನಾ ಪುನರುಜ್ಜೀವನ ಅಭಿಯಾನ Atal Mission for Rejuvenation and Urban Transformation (ಅಮೃತ್) ನ್ನು ಕೂಡ 2015ರಲ್ಲಿ ಮೋದಿ ಸರ್ಕಾರ ಆರಂಭಿಸಿದೆ. ಇದರಡಿ ಒಳಚರಂಡಿ ವ್ಯವಸ್ಥೆ, ನೀರಿನ ಪೂರೈಕೆಯನ್ನು ನಗರಗಳಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ, ಆಧುನಿಕ ಮೂಲಸೌಕರ್ಯವನ್ನು ಹೊಂದಿರಬೇಕು ಎಂಬುದು ನಗರವಾಸಿಗಳ ಆಶಯವಾಗಿರುತ್ತದೆ. ನಗರಗಳ ಅಭಿವೃದ್ಧಿ ಭಾರತದ ನಾಗರೀಕತೆ ಮತ್ತೊಮ್ಮೆ ಉಜ್ವಲವಾಗುತ್ತಿದೆ ಎಂಬುದರ ಸಂಕೇತವಾಗಿದೆ. ನಾಗರಿಕತೆ ಹಲವಾರು ಏಳು ಮತ್ತು ಬೀಳುಗಳನ್ನು ಕಾಣುತ್ತದೆ. ಭವಿಷ್ಯದಲ್ಲೂ ಅದೇ ರೀತಿ ಆಗಲಿದೆ. ಆದರೆ, ಈ ಪ್ರಗತಿ ಮತ್ತು ನಾಗರೀಕತೆ ಸುದೀರ್ಘವಾಗಿರಲಿ ಎಂದು ನಾವು ಆಶಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.