ಕರಾಚಿ: ಪಾಕಿಸ್ಥಾನದಲ್ಲಿ ಬಿಸಿಲ ತೀವ್ರತೆ ಹೆಚ್ಚಾಗಿದ್ದು, ಇದುವರೆಗೆ 700 ಮಂದಿ ಮೃತರಾಗಿದ್ದಾರೆ. ಸೂರ್ಯನ ಪ್ರತಾಪಕ್ಕೆ ಬಳಲಿ ಬೆಂಡಾಗಿರುವ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ.
ಕರಾಚಿಯೊಂದರಲ್ಲಿ ಬಿಸಿಲ ಬೇಗೆಗೆ 692 ಮಂದಿ ಸಾವಿಗೀಡಾಗಿದ್ದಾರೆ. ದಕ್ಷಿಣ ಸಿಂಧ್ ಭಾಗದಲ್ಲಿ ಇತರ ಏಳು ಮಂದಿ ಮೃತರಾಗಿದ್ದಾರೆ. ಈ ಕಾರಣದಿಂದಾಗಿ ವಿದ್ಯಾಸಂಸ್ಥೆಗಳಿಗೆ ಸರ್ಕಾರ ರಜೆಯನ್ನು ಘೋಷಿಸಿದೆ.
ರಂಜಾನ್ ಉಪವಾಸ ಕೂಡ ಆರಂಭವಾಗಿರುವುದರಿಂದ ಜನರು ಅಸ್ವಸ್ಥರಾಗುವ ಪ್ರಮಾಣ ಹೆಚ್ಚಾಗುತ್ತಿದೆ. ಹೆಚ್ಚಿನ ಜನರು ಹೀಟ್ ಸ್ಟ್ರೋಕ್, ದಣಿವು ಮತ್ತು ಕಡಿಮೆ ರಕ್ತದೊತ್ತಡದಿಂದ ಸಾಯುತ್ತಿದ್ದಾರೆ ಎಂದು ವೈದ್ಯರುಗಳು ತಿಳಿಸಿದ್ದಾರೆ.
ಹಲವಾರು ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಪರಿಸ್ಥಿತಿ ಉದ್ಭವಾಗಿದ್ದು, ಅಸ್ವಸ್ಥಗೊಂಡು ಆಸ್ಪತ್ರೆ ಪಾಲಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.