ನವದೆಹಲಿ: ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾಪಕ್ಕೆ ಚೀನಾ ಅಡ್ಡಿಪಡಿಸಿದ್ದು ಭಾರತೀಯರನ್ನು ಕೆರಳಿಸಿದೆ. ಇದೀಗ ಟ್ವಿಟರ್ನಲ್ಲಿ ಭಾರತೀಯರು ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
#BoycottChineseproducts ಮತ್ತು #BoycottChina ಎಂಬ ಹ್ಯಾಶ್ ಟ್ಯಾಗ್ನ್ನು ಬಳಸಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಟ್ವಿಟರಿಗರು ಅಭಿಯಾನ ಆರಂಭಿಸಿದ್ದಾರೆ. ಭಯೋತ್ಪಾದಕತೆಯನ್ನು ಬೆಂಬಲಿಸುತ್ತಿರುವ ಚೀನಾಗೆ ತಕ್ಕ ಪಾಠ ಕಲಿಸಬೇಕು ಎನ್ನುತ್ತಿದ್ದಾರೆ.
ಚೀನಾದ ಯಾವುದೇ ವಸ್ತುಗಳನ್ನು ಬಳಸುವುದು ಬೇಡ ಎಂದು ಕೆಲವರು ಕರೆ ನೀಡಿದರೆ, ಈಗಲೇ ಟಿಕ್ಟಾಕ್ನ್ನು ಅನ್ಇನ್ಸ್ಟಾಲ್ ಮಾಡಿ ಎಂದು ಇನ್ನು ಕೆಲವರು ಹೇಳಿದ್ದಾರೆ. ಚೀನಾ ಉತ್ಪನ್ನಗಳಿಗೆ ಭಾರತದಲ್ಲಿ ಅತೀದೊಡ್ಡ ಮಾರುಕಟ್ಟೆ ಇದೆ, ಈ ಉತ್ಪನ್ನಗಳನ್ನು ನಿಷೇಧ ಮಾಡಿದರೆ ಚೀನಾ ಆರ್ಥಿಕವಾಗಿ ಅಸ್ಥಿರವಾಗುತ್ತದೆ ಎಂಬುದು ಕೆಲವರ ವಾದವಾಗಿದೆ.
ಪೆನ್ನಿಂದ ಹಿಡಿದು ಸ್ಮಾರ್ಟ್ಫೋನ್ಗಳವರೆಗೆ ಯಾವ ಚೀನಾ ವಸ್ತುಗಳನ್ನೂ ಖರೀದಿ ಮಾಡುವುದು ಬೇಡ, ಭಾರತೀಯರಾಗೋಣ, ಭಾರತದ ವಸ್ತುಗಳನ್ನೇ ಖರೀದಿಸೋಣ ಎಂದು ಕರೆ ನೀಡಿದ್ದಾರೆ.
2009 ರಿಂದ ನಾಲ್ಕನೇ ಬಾರಿಗೆ ಮಸೂದ್ ಅಝರ್ನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಪ್ರಸ್ತಾವನೆಗೆ ಚೀನಾ ಅಡ್ಡಗಾಲು ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಈ ಅಭಿಯಾನ ಪ್ರಾರಂಭವಾಗಿದೆ.
China blocks India’s bid to designate JeM Chief Masood Azhar as a global terrorist in the United Nations Security Council 1267 list.#BoycottChina #BoycottChineseProducts pic.twitter.com/zntllEKb6Y
— Batukdhar Dubey (@batukdhardubey) March 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.