ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ, ಭಾರತವನ್ನು ಜಾಗತಿಕ ಉತ್ಪಾದನೆಯ ಮತ್ತು ವಿನ್ಯಾಸದ ಕೇಂದ್ರವನ್ನಾಗಿ ಪರಿವರ್ತಿಸುವ ಸಲುವಾಗಿ 2014ರ ಸೆಪ್ಟಂಬರ್ನಲ್ಲಿ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಆರಂಭಿಸಿದರು. ಭಾರತದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಲು ಉತ್ಪಾದಕರಿಗೆ ಉತ್ತೇಜನವನ್ನು ನೀಡುವ ಸಲುವಾಗಿ, ಕೆಲವು ತಡೆಯೊಡ್ಡಬಲ್ಲಂತಹ ನೀತಿ ಮತ್ತು ನಿಯಮಗಳಿಗೆ ಬದಲಾವಣೆಯನ್ನೂ ತರಲಾಯಿತು. ರಕ್ಷಣೆಯಿಂದ ಹಿಡಿದು ರೈಲ್ವೇಯವರೆಗೂ ಹೂಡಿಕೆಗೆ ಅನುವು ಮಾಡಿಕೊಡಲಾಯಿತು ಮತ್ತು ಇಲ್ಲಿ ಸುಲಲಿತ ಉದ್ಯಮವನ್ನು ನಡೆಸುವ ಸಲುವಾಗಿ ನಿಯಮಾವಳಿಗಳನ್ನು ಸರಳಗೊಳಿಸಲಾಯಿತು. ಉತ್ಪಾದಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಮೇಕ್ ಇನ್ ಇಂಡಿಯಾ ಯೋಜನೆಯು ಭಾರತದ ಆರ್ಥಿಕತೆಯನ್ನು ಸುಧಾರಿಸಿದೆ ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿ ಕೊಡುತ್ತಿದೆ. ಅಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಡಿಫೆನ್ಸ್ ಇತ್ಯಾದಿ ವಲಯಗಳ ಮೇಲಿನ ಹೂಡಿಕೆಯಿಂದಾಗಿ ಭಾರತ ಆಮದುಗಳ ಮೇಲೆ ಹೆಚ್ಚಿನ ವ್ಯಯ ಮಾಡುವುದು ಬಹುಮಟ್ಟಿಗೆ ತಗ್ಗಿದೆ.
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ವಿವಿಧ ವಲಯಗಳು ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿವೆ. ರಕ್ಷಣಾ ವಲಯವು ಭಾರತದಲ್ಲಿನ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ದೊಡ್ಡ ಹೂಡಿಕೆಗಳನ್ನು ನಿರೀಕ್ಷಿಸುತ್ತಿದೆ. ವಿಶ್ವದ 5 ನೇ ಅತಿದೊಡ್ಡ ರಕ್ಷಣಾ ಬಜೆಟ್ ಹೊಂದಿರುವ ಭಾರತ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಶೇ.60ರಷ್ಟು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತದೆ. ಭಾರತಕ್ಕೆ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಅತ್ಯಂತ ಮಹತ್ವದ್ದಾಗಿದೆ, 21 ನೇ ಶತಮಾನದಲ್ಲಿ ಭಾರತವು ದುರಂಹಕಾರಿ ನೆರೆಹೊರೆಯವರಿಂದ ಸುತ್ತುವರೆದಿದೆ. ಹೀಗಾಗಿ ರಕ್ಷಣಾ ಸ್ವಾವಲಂಬನೆ ಅತ್ಯಗತ್ಯ ಎನಿಸಿಕೊಂಡಿದೆ.
ಇಂಡಿಯಾ ಟುಡೇ ಗ್ರೂಪ್ನ ವರದಿಯ ಪ್ರಕಾರ, ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವು, ರಕ್ಷಣಾ ಇಲಾಖೆಗೆ ವಿದೇಶಿ ವಿನಿಮಯದಲ್ಲಿ 1 ಲಕ್ಷ ಕೋಟಿಗಿಂತಲೂ ಹೆಚ್ಚು ಹಣವನ್ನು ಉಳಿತಾಯ ಮಾಡಿಕೊಟ್ಟಿದೆ. ಕಳೆದ ನಾಲ್ಕು ವರ್ಷಗಳಿಂದ, ರಕ್ಷಣಾ ವಿನ್ಯಾಸ ಮತ್ತು ಉತ್ಪಾದನಾ ಯೋಜನೆಗಳು ಭಾರತದಲ್ಲೇ ಕಾರ್ಯನಿರ್ವಹಿಸುತ್ತಿವೆ. ಭಾರತದಂತಹ ದೊಡ್ಡ ರಾಷ್ಟ್ರಗಳಿಗೆ ಸ್ಥಳೀಯ ಸಾಮರ್ಥ್ಯ ಅಭಿವೃದ್ಧಿ ಮತ್ತು ರಕ್ಷಣಾ ವಲಯದ ಸಾಮರ್ಥ್ಯದ ಅಭಿವೃದ್ಧಿ ಬಹುಮುಖ್ಯವಾಗುತ್ತದೆ. ವಿಶ್ವದ ಎರಡನೇ ಅತಿದೊಡ್ಡ ರಕ್ಷಣಾ ಆಮದುದಾರ ರಾಷ್ಟ್ರವಾಗಿದ್ದು ಭಾರತ, ಅತ್ಯಾಧುನಿಕ ರಕ್ಷಣಾ ಖರೀದಿಗಳಿಗಾಗಿ ಇತರ ದೇಶಗಳನ್ನು ಅವಲಂಬಿಸಿದೆ. ಭಾರತೀಯ ರಕ್ಷಣಾ ವಲಯವನ್ನು ದೇಶೀಕರಣಗೊಳಿಸುವ ಪ್ರಕ್ರಿಯೆಯ ನೇತೃತ್ವವನ್ನು ಡಿಆರ್ಡಿಓ ವಹಿಸಿಕೊಂಡಿದೆ. ಇದರ ಬಹುಯೋಜನೆಗಳನ್ನು ವಿದೇಶಿ ಯೋಜನೆಗಳಿಗೆ ಪರ್ಯಾಯವಾಗಿ ಸ್ವೀಕಾರ ಮಾಡಲಾಗಿದೆ. ನೌಕೆಯ ಎಸ್ಆರ್-ಎಸ್ಎಎಮ್ (ಶಾರ್ಟ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್)ಗಾಗಿ ಅಂತಾರಾಷ್ಟ್ರೀಯ ಉತ್ಪಾದಕರತ್ತ ನೋಡಲಾಗಿತ್ತು, ಆದರೆ ಮಾತುಕತೆಯ ಬಳಿಕ ದೇಶೀಯವಾಗಿ ಇದನ್ನು ಉತ್ಪಾದಿಸಲು ಸರ್ಕಾರ ನಿರ್ಧರಿಸಿತು. ಡಿಆರ್ಡಿಓಗೆ ಈ ಯೋಜನೆಯನ್ನು ನೀಡಿತು. 30 ಸಾವಿರ ಕೋಟಿ ರೂಪಾಯಿ ಯೋಜನೆ ಇದಾಗಿದೆ. ಸೇನೆಗಾಗಿ ಎಸ್ಆರ್-ಎಸ್ಎಎಮ್ ಕೂಡ ವಿದೇಶಿ ಕೈಗೆ ಹೋಗುವುದರಲ್ಲಿತ್ತು, ಆದರೆ ಅಂತಿಮವಾಗಿ ಡಿಆರ್ಡಿಓ ತನ್ನ ಆಕಾಶ್ ಮಿಸೈಲ್ನ್ನು ದೇಶೀಯವಾಗಿ ನಿರ್ಮಿಸಿ ಕೊಡುವ ಭರವಸೆ ನೀಡಿತು.
ಸರ್ಕಾರ ದೇಶೀಯವಾಗಿ ಪರ್ಯಾಯವನ್ನು ಹುಡಕಿದ ಇನ್ನಿತರ ಯೋಜನೆಗಳೆಂದರೆ- ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್, ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್, ಹೆಲಿಕಾಫ್ಟರ್ ಲಾಂಚ್ಡ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಮತ್ತು ಆರ್ಮರ್ಡ್ ವೆಹ್ಹಿಕಲ್ ಲಾಂಚ್ಡ್ ಆ್ಯಂಟಿ ಟ್ಯಾಂಕ್ ಮಿಸೈಲ್. ಇವುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಬದಲು, ದೇಶೀಯವಾಗಿಯೇ ಭಾರತ ನಿರ್ಮಾಣ ಮಾಡುತ್ತಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಸರ್ಕಾರ ನಡೆಸಿದ ಪ್ರಯತ್ನಗಳು ನಿರ್ಣಾಯಕ ಫಲ ನೀಡಲಾರಂಭಿಸಿವೆ. ಇದು ಭಾರತದ ಆಮದು ವ್ಯಯವನ್ನು ಉಳಿಸಿದ್ದು ಮಾತ್ರವಲ್ಲ, ವಿದೇಶಿ ಉತ್ಪಾದಕರ ಮೇಲಿನ ಅವಲಂಬನೆಯನ್ನೂ ತಗ್ಗಿಸಿದೆ. ಎಲ್ಲದಕ್ಕೂ ಮಿಗಿಲಾಗಿ ಸುಲಲಿತ ಉದ್ಯಮ ರ್ಯಾಂಕಿಂಗ್ನಲ್ಲಿ ಭಾರತದ ಸ್ಥಾನವನ್ನು 142ನೇ ಸ್ಥಾನದಿಂದ ನಾಲ್ಕು ವರ್ಷಗಳಲ್ಲಿ 77ನೇ ಸ್ಥಾನಕ್ಕೆ ತಂದಿದೆ. ಭವಿಷ್ಯದಲ್ಲಿ ಭಾರತದ ಆರ್ಥಿಕತೆ ತನ್ನ ಪ್ರಭಾವ ಹೆಚ್ಚಿಸುವುದನ್ನು ಆರಂಭಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.