ವಾಷಿಂಗ್ಟನ್: ಭಾರತ ಮತ್ತು ಅಮೆರಿಕಾ, ಬುಧವಾರ ಭದ್ರತೆ ಮತ್ತು ನಾಗರಿಕ ಪರಮಾಣು ಸಹಕಾರವನ್ನು ವೃದ್ಧಿಸಲು ಪರಸ್ಪರ ಸಮ್ಮತಿಸಿದ್ದು, ಭಾರತದಲ್ಲಿ 6 ಯುಎಸ್ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೂ ನಿರ್ಧರಿಸಲಾಗಿದೆ ಎಂದು ಜಂಟಿ ಪ್ರತಿಕಾಪ್ರಕಟನೆಯಲ್ಲಿ ಎರಡೂ ದೇಶಗಳು ತಿಳಿಸಿವೆ.
ವಾಷಿಂಗ್ಟನ್ನೊಂದಿಗೆ ನಡೆದ ಎರಡು ದಿನಗಳ ಮಾತುಕತೆಯ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕಾ ಆಡಳಿತ, ವಿಶ್ವದ ಮೂರನೇ ಅತೀದೊಡ್ಡ ತೈಲ ಖರೀದಿದಾರ ರಾಷ್ಟ್ರ ಭಾರತಕ್ಕೆ ಹೆಚ್ಚಿನ ಶಕ್ತಿಯ ಉತ್ಪನ್ನಗಳನ್ನು ಮಾರಾಟ ಮಾಡುವತ್ತ ಚಿತ್ತ ಹರಿಸಿದೆ.
ಭಾರತೀಯ ವಿದೇಶಾಂಗ ವಕ್ತಾರ ವಿಜಯ್ ಗೋಖಲೆ ಮತ್ತು ಅಮೆರಿಕಾದ ಶಸ್ತ್ರಾಸ್ತ್ರ ನಿಯಂತ್ರಣ ಹಾಗೂ ಅಂತಾರಾಷ್ಟ್ರೀಯ ಭದ್ರತೆಯ ಅಧೀನ ಕಾರ್ಯದರ್ಶಿ ಆಂಡ್ರಿಯ ಥಾಮ್ಸನ್ ಅವರ ನಡುವೆ ಈ ಬಗೆಗಿನ ನಿರ್ಧಾರಗಳು ಅಂತಿಮವಾಗಿವೆ.
‘ಭಾರತದಲ್ಲಿ 6 ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಸೇರಿದಂತೆ, ಎರಡೂ ದೇಶಗಳು ದ್ವಿಪಕ್ಷೀಯ ಭದ್ರತೆ ಮತ್ತು ನಾಗರಿಕ ಪರಮಾಣು ಸಹಕಾರವನ್ನು ಬಲಿಷ್ಠಗೊಳಿಸಲು ಬದ್ಧವಾಗಿವೆ’ ಎಂದು ಜಂಟಿ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಅಮರಿಕದ ಪಿಟ್ಸ್ ಬರ್ಗ್ ಮೂಲದ ವೆಸ್ಟಿಂಗ್ ಹೌಸ್ ಸಂಸ್ಥೆ ಭಾರತದಲ್ಲಿ ಪರಮಾಣು ಸ್ಥಾವರ ನಿರ್ಮಾಣ ಸಂಬಂಧ ಭಾರತದೊಂದಿಗೆ ಚರ್ಚೆ ನಡೆಸುತ್ತಿದೆ.
ನಾಗರಿಕ ಪರಮಾಣು ವಲಯದಲ್ಲಿ ಸಹಕಾರಕ್ಕೆ ಸಂಬಂಧಿಸಿದಂತೆ 2018ರಲ್ಲಿ ಭಾರತ ಮತ್ತು ಅಮೆರಿಕಾ ಒಪ್ಪಂದವನ್ನು ಮಾಡಿಕೊಂಡಿದೆ. ಫ್ರಾನ್ಸ್, ರಷ್ಯಾ, ಕೆನಡಾ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್, ಜಪಾನ್, ವಿಯೆಟ್ನಾಂ ಬಾಂಗ್ಲಾದೇಶ, ಕಜಕೀಸ್ತಾನ, ದಕ್ಷಿಣ ಕೊರಿಯಾಗಳೊಂದಿಗೆ ಭಾರತ ಈಗಾಗಲೇ ನಾಗರಿಕ ಪರಮಾಣು ಸಹಕಾರ ಒಪ್ಪಂದವನ್ನು ಮಾಡಿಕೊಂಡಿದೆ. 2024ರ ವೇಳೆಗೆ ತನ್ನ ಪರಮಾಣು ಇಂಧನ ಸಾಮರ್ಥ್ಯವನ್ನು ತ್ರಿಗುಣಗೊಳಿಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದ್ದು, ಪರಮಾಣು ಪೂರೈಕೆದಾರರ ಒಕ್ಕೂಟದಲ್ಲಿ ಭಾರತಕ್ಕೆ ಸದಸ್ಯತ್ವ ದೊರಕಿಸಿಕೊಡಲು ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಅಮೆರಿಕಾ ಸ್ಪಷ್ಟಪಡಿಸಿದೆ. 45 ಸದಸ್ಯ ರಾಷ್ಟ್ರಗಳುಳ್ಳ ಈ ಒಕ್ಕೂಟದಲ್ಲಿ ಭಾರತ ಸದಸ್ಯತ್ವ ಪಡೆಯುವುದಕ್ಕೆ ಚೀನಾ ಅಡ್ಡಗಾಲಾಕುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.