ನವದೆಹಲಿ: ಭಾರತದ ಎದುರಾಳಿ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ಥಾನದ ಕ್ಷಿಪಣಿ ವ್ಯವಸ್ಥೆ ಅಥವಾ ಬಾಂಬ್ ದಾಳಿಗಳಿಂದ ಭಾರತೀಯ ವಾಯುಸೇನೆಯ ಯುದ್ಧವಿಮಾನಗಳನ್ನು ರಕ್ಷಣೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಗಡಿ ಪ್ರದೇಶಗಳಲ್ಲಿ 110 ಬಲಿಷ್ಠ ಆಶ್ರಯಗಳನ್ನು ನಿರ್ಮಾಣ ಮಾಡಲು ಅನುಮೋದನೆ ನೀಡಿದೆ.
‘ಯುದ್ಧವಿಮಾನಗಳನ್ನು ಶತ್ರುಗಳ ಮಿಸೈಲ್ ಅಥವಾ ಬಾಂಬ್ ದಾಳಿಗಳಿಂದ ರಕ್ಷಣೆ ಮಾಡುವ ಬ್ಲಾಸ್ಟ್ ಪೆನ್ಸ್ ಎಂದು ಕರೆಯಲ್ಪಡುವ 110 ಬಲಿಷ್ಠ ವಸತಿಗಳನ್ನು ಚೀನಾ ಮತ್ತು ಪಾಕಿಸ್ಥಾನದ ಗಡಿಗಳಲ್ಲಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿದೆ’ ಎಂದು ಡಿಫೆನ್ಸ್ ನ್ಯೂಸ್ ವರದಿ ಮಾಡಿದೆ.
ವಿವಿಧ ವಾಯುನೆಲೆಗಳಲ್ಲಿ ವಿವಿಧ ಹಂತಗಳಲ್ಲಿ ಈ ಬ್ಲಾಸ್ಟ್ ಪೆನ್ಸ್ ಸ್ಥಾಪನೆಯಾಗಲಿದೆ, ಈ ಯೋಜನೆಗೆ ಸುಮಾರು 5 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ ಎನ್ನಲಾಗಿದೆ.
ಈ ಪೆನ್ಸ್ ಬ್ಲಾಸ್ಟ್ಗಳಲ್ಲಿ ಸುಖೋಯ್ ಸು-30ಎಂಕೆಐನಂತಹ ಯುದ್ಧವಿಮಾನಗಳನ್ನು ಇಡಬಹುದಾಗಿದೆ, ಯಾವುದೇ ರೀತಿಯಲ್ಲಿ ವಿಮಾನಗಳಿಗೆ ಹಾನಿಯಾಗದಂತೆ ಇಲ್ಲಿ ಸುರಕ್ಷಿತವಾಗಿರುತ್ತವೆ.
ಪ್ರಸ್ತುತ, ಪಾಕಿಸ್ಥಾನ ಸಮೀಪದ ಗಡಿಯಲ್ಲಿ ಕಾರ್ಯಾಚರಣೆ ಮಾಡುವ ಸಂದರ್ಭಗಳಲ್ಲಿ ವಾಯುಸೇನೆಯು ತನ್ನ ಯುದ್ಧ ವಿಮಾನಗಳನ್ನು ಅತ್ಯಂತ ಕುಗ್ರಾಮ ಪ್ರದೇಶಗಳಲ್ಲಿ ನಿಯೋಜನೆ ಮಾಡುತ್ತದೆ.
1965ರ ಯುದ್ಧ ವೇಳೆ ಭಾರತ ಸಾಕಷ್ಟು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ. ಅಲ್ಲಿಂದ ವಾಯುಸೇನೆ ಬ್ಲಾಸ್ಟ್ ಪೆನ್ಸ್ಗಳನ್ನು ಸ್ಥಾಪನೆ ಮಾಡಲು ಒಲವನ್ನು ತೋರಿಸುತ್ತಾ ಬಂದಿದೆ.
ಬ್ಲಾಸ್ಟ್ ಪೆನ್ಸ್ಗಳನ್ನು ಅತ್ಯಂತ ದಪ್ಪ ಕಾಂಕ್ರೀಟ್ ವಾಲ್ಗಳಿಂದ ನಿರ್ಮಾಣ ಮಾಡಲಾಗುತ್ತದೆ, ಶತ್ರುಗಳ ಯಾವುದೇ ದಾಳಿಗಳಿಗೂ ಈ ಗೋಡೆ ಜಗ್ಗುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.