ನವದೆಹಲಿ: ಭಾರತೀಯ ಸೇನೆಯ ಮಾಹಿತಿಗಳನ್ನು ಕದ್ದು ಪಾಕಿಸ್ಥಾನಕ್ಕೆ ನೀಡಲು ನಿಯೋಜನೆಗೊಂಡಿದ್ದ ಗೂಢಾಚಾರಿಯೊಬ್ಬನನ್ನು ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿ ಸಮೀಪದಿಂದ ಮಂಗಳವಾರ ಬಂಧನಕ್ಕೊಳಪಡಿಸಲಾಗಿದೆ.
ರಾಜಸ್ಥಾನದಲ್ಲಿನ ಭಾರತ-ಪಾಕಿಸ್ಥಾನ ಗಡಿ ಸಮೀಪದ ಜೈಸಲ್ಮೇರ್ ಜಿಲ್ಲೆಯ ನಿವಾಸಿ ನವಾಬ್ ಖಾನ್ ಬಂಧನಕ್ಕೊಳಪಟ್ಟ ಗೂಢಾಚಾರಿ ಎಂದು ಮೂಲಗಳು ತಿಳಿಸಿವೆ.
ಜೀಪ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಈತ, ಗೂಢಾಚಾರಿ ಚಟುವಟಿಕೆಗಳಲ್ಲಿ ತೊಡಗಿದ್ದ. ಈತ ಹಣದ ಆಸೆಗೆ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ವಾಟ್ಸಾಪ್ ಮೂಲಕ ಕೋಡ್ ಲ್ಯಾಂಗ್ವೇಜ್ ಬಳಸಿ ಪಾಕಿಸ್ಥಾನದಲ್ಲಿನ ತನ್ನ ಹ್ಯಾಂಡ್ಲರ್ಗೆ ರವಾನಿಸುತ್ತಿದ್ದ ಎಂದು ಗುಪ್ತಚರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಉಮೇಶ್ ಮಿಶ್ರಾ ಹೇಳಿದ್ದಾರೆ.
ಕಳೆದ ವರ್ಷ ಪಾಕಿಸ್ಥಾನಕ್ಕೆ ತೆರಳಿದ್ದ ಖಾನ್ಗೆ ಅಲ್ಲಿ ಐಎಸ್ಐ ಏಜೆಂಟ್ವೊಬ್ಬನ ಪರಿಚಯವಾಗಿದೆ. ಆತ ಖಾನ್ಗೆ ತರಬೇತಿಯನ್ನು ನೀಡಿ, ಸೇನೆಯ ಚಲನವಲನದ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಹಂಚಿಕೊಳ್ಳುವ ವಿಧಾನಗಳ ಬಗ್ಗೆ ಹೇಳಿಕೊಟ್ಟಿದ್ದ.
ಭದ್ರತಾ ಪಡೆಗಳ ಜಂಟಿ ತಂಡ ಈತನನ್ನು ಬಂಧನಕ್ಕೊಳಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.