ನವದೆಹಲಿ: ಎಪ್ರಿಲ್-ಮೇ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯನ್ನು ಬಾಲಿವುಡ್ ಸೇರಿದಂತೆ ವಿವಿಧ ಕ್ಷೇತ್ರದ ದಿಗ್ಗಜರಿಗೆ ಟ್ಯಾಗ್ ಮಾಡಿರುವ ಮೋದಿ, ಜನರಿಗೆ ಮತದಾನ ಮಾಡಲು ಪ್ರೇರೇಪಿಸುವಂತೆ ಕೋರಿದ್ದಾರೆ.
My fellow Indians,
Urging you all to strengthen voter awareness efforts across India.
Let us all ensure maximum number of Indians come out to vote in the 2019 Lok Sabha elections.
— Narendra Modi (@narendramodi) March 13, 2019
‘ನನ್ನ ದೇಶವಾಸಿಗಳೇ, ಭಾರತದಾದ್ಯಂತ ಮತದಾರರ ಜಾಗೃತಿ ಪ್ರಯತ್ನಗಳನ್ನು ಬಲಪಡಿಸಲು ನಿಮ್ಮೆಲ್ಲರಲ್ಲೂ ಕೋರುತ್ತೇನೆ. 2019 ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯ ಭಾರತೀಯರು ಮತದಾನ ಮಾಡಲಿ ಎಂಬುದನ್ನು ಖಚಿತಪಡಿಸಿಕೊಳ್ಳೋಣ’ ಎಂದು ಟ್ವೀಟ್ ಮಾಡಿದ್ದಾರೆ.
ಹೀಗೆ ಸರಣಿ ಟ್ವೀಟ್ಗಳನ್ನು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕ್ರೀಡಾಕ್ಷೇತ್ರ, ಚಿತ್ರರಂಗ, ರಾಜಕೀಯ, ಪತ್ರಕರ್ತರು, ಉದ್ಯಮಿಗಳು, ಆಧ್ಯಾತ್ಮ ಕ್ಷೇತ್ರದ ದಿಗ್ಗಜರು, ಹೀಗೆ ಆಯಾ ಕ್ಷೇತ್ರಕ್ಕೆ ಹೊಂದುವಂತಹ ಸಂದೇಶವನ್ನು ಹೇಳಿರುವ ಟ್ವೀಟ್ಗಳಲ್ಲಿ ಹಲವು ಪ್ರಮುಖ ವ್ಯಕ್ತಿಗಳನ್ನು ಟ್ಯಾಗ್ ಮಾಡಿದ್ದಾರೆ.
ಬಾಲಿವುಡ್ ದಿಗ್ಗಜರಾದ ಅಮಿತಾಭ್ ಬಚ್ಚನ್, ಶಾರೂಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಕರಣ್ ಜೋಹರ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಅನುಷ್ಕಾ ಶರ್ಮಾ, ಅಕ್ಷಯ್ ಕುಮಾರ್, ಭೂಮಿ ಫಡ್ನೇಕರ್, ರಣವೀರ್ ಸಿಂಗ್, ವಿಕ್ಕಿ ಕೌಶಲ್, ದಕ್ಷಿಣ ಭಾರತದ ನಟರಾದ ಮೋಹನ್ಲಾಲ್, ನಾಗಾರ್ಜುನ ಅಕ್ಕಿನೇನಿ, ಶಂಕರ್ ಮಹಾದೇವನ್, ಲತಾ ಮಂಗೇಶ್ಕರ್, ಎಆರ್ ರೆಹಮಾನ್, ಮನೋಜ್ ಬಾಜಪೇಯಿ, ಆಯುಷ್ಮಾನ್ ಖುರಾನಾ ಮುಂತಾದವರಿಗೆ ತಮ್ಮ ಟ್ವಿಟ್ನ್ನು ಅವರು ಟ್ಯಾಗ್ ಮಾಡಿದ್ದಾರೆ.
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್, ಸೈನಾ ನೆಹ್ವಾಲ್, ಭಜರಂಗ್ ಪೂನಿಯಾ, ಪೋಗಟ್ ಸಹೋದರಿಯರು, ನೀರಜ್ ಚೋಪ್ರಾ, ಯೋಗೇಶ್ವರ್ ದತ್, ಸುಶೀಲ್ ಕುಮಾರ್ ಮುಂತಾದ ಕ್ರೀಡಾಪಟುಗಳಿಗೆ ಟ್ಯಾಗ್ ಮಾಡಿದ್ದಾರೆ.
ಆಧ್ಯಾತ್ಮ ಕ್ಷೇತ್ರದ ಶ್ರೀ ಶ್ರೀ ರವಿಶಂಕರ್, ಜಗ್ಗಿ ವಾಸುದೇವ್, ಬಾಬಾ ರಾಮದೇವ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಕೆಸಿಆರ್, ಚಂದ್ರಬಾಬು ನಾಯ್ಡು, ಕುಮಾರ ಸ್ವಾಮಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಸರ್ಬಾನಂದ್ ಸೋನೋವಾಲ್, ನಿತೀಶ್ ಕುಮಾರ್, ಜಗನ್ ಮೋಹನ್ ರೆಡ್ಡಿ, ತೇಜಸ್ವಿ ಯಾದವ್, ಅಖಿಲೇಶ್ ಯಾದವ್ ಸೇರಿದಂತೆ ವಿವಿಧ ರಾಜಕಾರಣಿಗಳಿಗೆ ಟ್ವಿಟ್ನ್ನು ಟ್ಯಾಗ್ ಮಾಡಿದ್ದಾರೆ.
ಉದ್ಯಮಿಗಳು, ಪತ್ರಕರ್ತರು, ವಿವಿಧ ಕ್ಷೇತ್ರಗಳ ಗಣ್ಯರು ಹೀಗೆ ಅನೇಕರಿಗೆ ಟ್ಯಾಗ್ ಮಾಡಿದ್ದಾರೆ.
‘’ನಿಮ್ಮ ನಟನೆ ಹಲವಾರು ಜನರನ್ನು ಮನೋರಂಜನೆಗೊಳಿಸಿದೆ ಮತ್ತು ನೀವು ಹಲವಾರು ಪ್ರಶಸ್ತಿಗಳನ್ನೂ ಗೆದ್ದಿದ್ದೀರಿ. ಜನರಿಗೆ ಮತದಾನ ಮಾಡುವಂತೆ ಜನರಿಗೆ ಪ್ರೇರೇಪಿಸಿ ಎಂದು ನಿಮ್ಮ ಬಳಿ ಮನವಿ ಮಾಡುತ್ತೇನೆ. ಭವ್ಯ ಪ್ರಜಾಪ್ರಭುತ್ವವೇ ಇಲ್ಲಿ ನಿಮಗೆ ಪ್ರಶಸ್ತಿ” ಎಂದು ಮೋಹನ್ಲಾಲ್ ಮತ್ತು ಅಕ್ಕಿನೇನಿಗೆ ಮಾಡಿದ ಟ್ಯಾಗ್ನಲ್ಲಿ ಮೋದಿ ತಿಳಿಸಿದ್ದಾರೆ.
ಎಲ್ಲಾ ಸೆಲೆಬ್ರಿಟಿಗಳಿಗೂ ಖಂಡಿತವಾಗಿಯೂ ನಾವು ಮತದಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯುವಂತೆ ಜನರನ್ನು ಪ್ರೇರೇಪಿಸುತ್ತೇವೆ ಎಂದಿದ್ದಾರೆ.
My young friends @RanveerOfficial, @Varun_dvn & @vickykaushal09,
Many youngsters admire you.
It is time to tell them: Apna Time Aa Gaya Hai and that it is time to turn up with high Josh to a voting centre near you.
— Narendra Modi (@narendramodi) March 13, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.