ತಿರುವನಂತಪುರಂ: ಒಂದು ಕ್ಷಣವೂ ತಮ್ಮ ಬಗ್ಗೆ ಯೋಚನೆ ಮಾಡದೆ, ದೇಶದ ರಕ್ಷಣೆಗೆ ಮುಂದಾಗುವವರು ಯೋಧರು. ನಮ್ಮ ನಾಳೆಗಳಿಗಾಗಿ ತಮ್ಮ ಇಂದಿನ ಬದುಕನ್ನು ತ್ಯಾಗ ಮಾಡುವ ಯೋಧರಿಗೆ ನಮ್ಮ ಸಮಾಜದಲ್ಲಿ ಅತ್ಯುನ್ನತವಾದ ಗೌರವವಿದೆ. ಸೈನಿಕರಿಲ್ಲದೆ ನೆಮ್ಮದಿಯಾಗಿ ಬದುಕುವುದು ಬಿಡಿ, ಉಸಿರಾಡಲೂ ಸಾಧ್ಯವಿಲ್ಲ. ಇಂತಹ ಯೋಧರಿಗೆ ಗೌರವ ನೀಡಬೇಕಾದುದು, ಒಗ್ಗಟ್ಟನ್ನು ಪ್ರದರ್ಶಿಸಬೇಕಾದುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿರುತ್ತದೆ. ಪುಲ್ವಾಮ ದಾಳಿಯ ಬಳಿಕ ಯೋಧರಿಗೆ ದೇಶದ ನಾನಾ ಭಾಗಗಳಲ್ಲಿ ನಾನಾ ವಿಧಾನಗಳಲ್ಲಿ ಗೌರವಗಳನ್ನು ಜನರು ಅರ್ಪಿಸಿದ್ದನ್ನು ನಾವು ನೋಡಿದ್ದೇವೆ. ಅಂತಹವರಲ್ಲಿ ಕೇರಳದ ಈ ವಿದ್ಯಾರ್ಥಿಗಳೂ ಸೇರಿದ್ದಾರೆ.
ಪಂದಳಂನ ಎನ್ಎಸ್ಎಸ್ ಕಾಲೇಜಿನ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು, ಯೋಧರಿಗೆ ಗೌರವವನ್ನು ಸೂಚಿಸುವ ಸಲುವಾಗಿ #SloganForSolidarityWithSolidiers, ನಮ್ಮ ಜನ ನಮ್ಮ ಬಲ ಎಂಬ ಅಭಿಯಾನಗಳನ್ನು ನಡೆಸಿದ್ದಾರೆ.
ಯೋಧರಿಗಾಗಿ ತಮ್ಮದೇ ಆದ ಘೋಷವಾಕ್ಯಗಳನ್ನು ರಚನೆ ಮಾಡುವುದು, ಅವರ ಬಗೆಗಿನ ತಮ್ಮ ಅನಿಸಿಕೆಯನ್ನು ಇನ್ಸ್ಟಾಗ್ರಾಂ, ಟ್ವಿಟರ್, ಫೇಸ್ಬುಕ್ ಇತ್ಯಾದಿಗಳಲ್ಲಿ ವ್ಯಕ್ತಪಡಿಸುವುದು ಈ ಅಭಿಯಾನದ ವಿಧಾನವಾಗಿದೆ.
‘ನಿಮ್ಮ ಬದುಕು ನಮಗೆ ಜೀವನ’, ‘ನಮ್ಮ ಯುವಕರ ಬಲಿಷ್ಠ ಕೈಗಳಲ್ಲಿ ವೀರ ಯೋಧರು ಸದಾ ಚಿರಸ್ಮರಣೀಯರಾಗಿರುತ್ತಾರೆ’, ‘ನಿಮ್ಮ ಆತ್ಮಕ್ಕಾಗಿ ನಮ್ಮ ಪ್ರಾರ್ಥನೆ’ ಎಂಬಿತ್ಯಾದಿ ಘೋಷಣೆಯನ್ನು, ಭಾವನೆಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.
ಕೆಲವು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ, ‘ಏಳಿ, ಏದ್ದೇಳಿ ಗುರಿ ಮುಟ್ಟುವ ತನಕ ನಾವು ನಿಲ್ಲುವುದು ಬೇಡ’ ಎಂಬ ಘೋಷಣೆಯನ್ನು ಬರೆದಿದ್ದಾರೆ.
ವಿದ್ಯಾರ್ಥಿಗಳ ಈ ಅಭಿಯಾನವನ್ನು ಭಾರತೀಯ ಸೇನೆ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಭಾರತ ನಮ್ಮ ಪ್ರೇರಣೆ ಎಂದಿದೆ.
#Students of Political Science Department at NSS College #Pandalam #Kerala conducted campaign titled
#SloganForSolidarityWithSolidiers
to express students solidarity with soldiers. Our people are our strength & are our #Humsaya & for #IndianArmy, ‘India is Our Inspiration’. pic.twitter.com/QJ6Mi7bjnG— ADG PI – INDIAN ARMY (@adgpi) March 12, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.