ನವದಹೆಲಿ: ಬ್ರಹ್ಮೋಸ್ನ ಮುಂದಿನ ತಲೆಮಾರಿನ ಐದು ಕ್ಷಿಪಣಿಗಳನ್ನು ಭಾರತೀಯ ವಾಯುಸೇನೆಯ ಸುಖೋಯ್ 30 ಎಂಕೆಐ ಫೈಟರ್ಸ್ಗಳೊಂದಿಗೆ ಏಕೀಕರಣಗೊಳಿಸುವ ನಿರೀಕ್ಷೆ ಇದೆ ಎಂದು ಫಿನಾನ್ಶಿಯಲ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಬ್ರಹ್ಮೋಸ್ ಎನ್ಜಿ ಸೂಪರ್ಸಾನಿಕ್ ಮಿಸೈಲ್ನ ಲಘು ಅವತರಣಿಕೆ ಆಗಿದೆ, ಮೊದಲು ಇದನ್ನು ಲಘು ಯುದ್ಧವಿಮಾನ ತೇಜಸ್ನೊಂದಿಗೆ ಏಕೀಕೃತಗೊಳಿಸಲಾಗುತ್ತದೆ.
ಈ ನಿರ್ಧಾರದಿಂದಾಗಿ ಭವಿಷ್ಯದಲ್ಲಿ ಚೀನಾ ಅಥವಾ ಪಾಕಿಸ್ಥಾನದೊಂದಿಗೆ ಹೋರಾಟ ಮಾಡುವ ಪರಿಸ್ಥಿತಿ ಬಂದರೆ ನಮ್ಮ ವಾಯುಸೇನೆಗೆ ಹೆಚ್ಚಿನ ಬಲ ಸಿಗಲಿದೆ. ಸ್ಟ್ಯಾಂಡರ್ಡ್ ಬ್ರಹ್ಮೋಸ್ ಮಿಸೈಲ್ 300 ಕಿಮೀ ರೇಂಜ್ನ್ನು ಹೊಂದಿದೆ ಮತ್ತು ಇದು 2.9 ಮ್ಯಾಚ್ ವೇಗದಲ್ಲಿ ಪ್ರಯಾಣಿಸಬಲ್ಲದು. ಅದರಲ್ಲೂ ಎನ್ಜಿ ವರ್ಶನ್ ಹೆಚ್ಚು ವೇಗ, 2.5ಮ್ಯಾಚ್ ಸ್ಪೀಡ್ನ್ನು ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿದೆ.
‘ಹೊಸ ಬ್ರಹ್ಮೋಸ್ ಎನ್ಜಿ ಕ್ಷಿಪಣಿ ಭವಿಷ್ಯದಲ್ಲಿ ಸಿದ್ಧ ವಾಯು ಪ್ರಾಬಲ್ಯವನ್ನು ವಾಯುಸೇನೆಗೆ ತಂದುಕೊಡಲಿದೆ. ಬ್ರಹ್ಮೋಸ್ ಎನ್ಜಿಯನ್ನು ಡಿಆರ್ಡಿಓ ವಿನ್ಯಾಸಪಡಿಸಿದೆ ಮತ್ತು ಅಭಿವೃದ್ಧಿಪಡಿಸಿದೆ’ ಎಂದು ಬ್ರಹ್ಮೋಸ್ ಏರೋಸ್ಪೇಸ್ ಎಂಡಿ ಡಾ.ಸುಧೀರ್ ಮಿಶ್ರಾ ಹೇಳಿದ್ದಾರೆ.
ಬ್ರಹ್ಮೋಸ್ ಭಾರತ ಮತ್ತು ರಷ್ಯಾದ ಜಾಯಿಂಟ್ ವೆಂಚರ್ ಆಗಿದ್ದರು ಕೂಡ, ಹೆಚ್ಚಿನ ಪ್ರಮಾಣದಲ್ಲಿ ಇದು ಮೇಕ್ ಇನ್ ಇಂಡಿಯಾ ಉತ್ಪನ್ನವೇ ಆಗಿದೆ ಎಂದಿದ್ದಾರೆ.
ಈ ಹೊಸ ವರ್ಶನ್ನ ಮತ್ತೊಂದು ಪ್ರಯೋಜನವೇನೆಂದರೆ, ಪ್ರಸ್ತುತ ಇರುವ ಬ್ರಹ್ಮೋಸ್ಗಿಂತ ಇದರ ವೆಚ್ಚ ಅರ್ಧದಷ್ಟು ಕಡಿಮೆ. ಲಘು ತೂಕವನ್ನು ಹೊಂದಿರಲಿರುವ ಇದು, ಎಲ್ಸಿಎ ತೇಜಸ್ಗೆ ಅತ್ಯಂತ ಸುಲಭವಾಗಿ ಹೊಂದಿಕೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.