ಮಹಾರಾಷ್ಟ್ರದ ರತ್ನಗಿರಿಯಲ್ಲಿ 44 ಬಿಲಿಯನ್ ಡಾಲರ್ಗಳ ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್(ಆರ್ಆರ್ಪಿಸಿಎಲ್)ನ್ನು ನಿರ್ಮಾಣ ಮಾಡಲು ಭಾರತ ಸರ್ಕಾರ ಮುಂದಾಗಿದೆ. ಆರ್ಆರ್ಪಿಸಿಎಲ್ ಪ್ರಾಜೆಕ್ಟ್ನ್ನು ವೆಸ್ಟ್ ಕೋಸ್ಟ್ ರಿಫೈನರಿ ಎಂದೂ ಕರೆಯಲಾಗುತ್ತಿದ್ದು, ಇದು ವಿಶ್ವದ ಅತೀದೊಡ್ಡ ಗ್ರೀನ್ಫೀಲ್ಡ್ ಆಯಿಲ್ ರಿಫೈನರಿ ಪ್ರಾಜೆಕ್ಟ್ ಆಗಲಿದೆ, ಸೌದಿ ಅರ್ಮಕೋ ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ ಇದರಲ್ಲಿ ಶೇ.50ರಷ್ಟು ಷೇರನ್ನು ಹೊಂದಲಿವೆ. ಭಾರತೀಯ ತೈಲ ದಿಗ್ಗಜರಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಇದರಲ್ಲಿ ಪಾಲುದಾರಿಕೆ ಹೊಂದಲಿವೆ. ಸುಮಾರು 14,675 ಎಕರೆ ಪ್ರದೇಶದಲ್ಲಿ ಈ ಪ್ರಾಜೆಕ್ಟ್ ವಿಸ್ತಾರಗೊಳ್ಳಲಿದ್ದು, ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಪ್ರಾಜೆಕ್ಟ್ನ ಕಾರ್ಯ ತುಸು ವಿಳಂಬಗೊಂಡಿದೆ.
ಆರ್ಆರ್ಪಿಸಿಎಲ್ನ್ನು ಸೌದಿಯ ಸಹಕಾರದೊಂದಿಗೆ ಅಭಿವೃದ್ಧಿಪಡಿಸುವ ವಿಷಯದ ಬಗ್ಗೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸೌದಿ ತೈಲ ಸಚಿವ ಮತ್ತು ಸೌದಿಯ ಅರಮ್ಕೋ ಖಲೀಸ್ ಸಂಸ್ಥೆಯ ಎಲ್-ಫಲ್ಹೀಹ್ ಅವರು ಚರ್ಚೆ ನಡೆಸಿದ್ದಾರೆ. ವಿಶ್ವದ ಅತೀದೊಡ್ಡ ಗ್ರೀನ್ಫೀಲ್ಡ್ ರಿಫೈನರಿ ಆಗಲಿರುವ, 44 ಬಿಲಿಯನ್ ಡಾಲರ್ ವೆಚ್ಚದಲ್ಲಿ ಮಹಾರಾಷ್ಟ್ರದಲ್ಲಿ ವೆಸ್ಟ್ ಕೋಸ್ಟ್ ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ ಪ್ರಾಜೆಕ್ಟ್ನ ಮೊದಲ ಜಾಯಿಂಟ್ ವೆಂಚರ್ನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಸೇರಿದಂತೆ ಇಂಡಿಯನ್ ಆಯಿಲ್ ಮತ್ತು ಗ್ಯಾಸ್ ಸೆಕ್ಟರ್ನಲ್ಲಿ ಸೌದಿ ಹೂಡಿಕೆ ಪ್ರಸ್ತಾವನೆಗಳ ಬಗ್ಗೆ ಈ ಸಚಿವರುಗಳು ಪರಿಶೀಲನೆಯನ್ನು ನಡೆಸಿದ್ದಾರೆ.
ಈ ಯೋಜನೆ ಮಹಾರಾಷ್ಟ್ರಕ್ಕೆ ಸುಮಾರು 3 ಲಕ್ಷ ಕೋಟಿಯ ಹೂಡಿಕೆಯನ್ನು ತಂದು ಕೊಡುವ ನಿರೀಕ್ಷೆ ಇದೆ ಮತ್ತು ಸುಮಾರು 1 ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು, ‘ಕೊಂಕಣ್ ಭಾಗದಲ್ಲಿ ವೆಸ್ಟ್ ಕೋಸ್ಟ್ ರಿಫೈನರಿಯನ್ನು ಸ್ಥಾಪನೆ ಮಾಡುವತ್ತ ನಾವು ಹೆಚ್ಚಿನ ಗಮನವನ್ನು ಹರಿಸಿದ್ದೇವೆ. ಮಹಾರಾಷ್ಟ್ರಕ್ಕೆ ಬರುವ ಪ್ರತಿ ಯೋಜನೆಗಳು ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಬಂದಿರುತ್ತವೆ. ಜನರ ಹಿತಾಸಕ್ತಿಗೆ ವಿರುದ್ಧವಾಗಿ ಯಾವುದೇ ಪ್ರಾಜೆಕ್ಟ್ನ್ನು ಅನುಷ್ಠಾನಕ್ಕೆ ತರಲು ನಮ್ಮ ಸರ್ಕಾರ ಮುಂದಾಗುವುದಿಲ್ಲ. ರಿಫೈನರಿ ಸ್ಥಾಪನೆ ವಿಷಯದಲ್ಲೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತೇವೆ. ಪರಿಸರಕ್ಕೆ ಸಂಬಂಧಿಸಿದ ಎಲ್ಲಾ ಸವಾಲುಗಳನ್ನು ನಿವಾರಿಸಲು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.
ಮಹಾರಾಷ್ಟ್ರದ ಜಿಡಿಪಿ ಪ್ರಗತಿಗೆ ಈ ಯೋಜನೆ ಶೇ.10 ರಷ್ಟು ಕೊಡುಗೆಯನ್ನು ನೀಡಲಿದೆ, ಆರ್ಥಿಕ ಪ್ರಗತಿಗೆ ಶೇ.2 ರಷ್ಟು ಕೊಡುಗೆಯನ್ನು ನೀಡಲಿದೆ. ಈ ಯೋಜನೆಯ ಅನುಷ್ಠಾನದಿಂದಾಗಿ ಮಹಾರಾಷ್ಟ್ರ ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂಬ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ, ‘2025ರ ವೇಳೆಗೆ ರಿಫೈನರಿ ಕಾರ್ಯಾರಂಭ ಮಾಡಲಿದೆ. ಇದು ಹಲವಾರು ವಿಧದ ಪೆಟ್ರೋಕೆಮಿಕಲ್ ಉತ್ಪನ್ನಗಳು ಸೇರಿದಂತೆ ಯುರೋ-ವಿಐ ಮತ್ತು ಉನ್ನತ ಗುಣಮಟ್ಟದ ಅಟೊಮೋಟಿವ್ ಮತ್ತು ಆವಿಯೇಶನ್ ಇಂಧನಗಳನ್ನು ಉತ್ಪಾದನೆ ಮಾಡಲಿದೆ, ಇದು ವಿಶ್ವದರ್ಜೆಯ ಗುಣಮಟ್ಟದ ಇಂಧನಗಳಾಗಲಿವೆ ಎಂದು ಆರ್ಆರ್ಪಿಸಿಎಲ್ ವೆಬ್ಸೈಟ್ ಹೇಳಿದೆ.
ಅಮೆರಿಕಾ, ಚೀನಾ ಮತ್ತು ರಷ್ಯಾದ ಬಳಿಕ ಭಾರತ ನಾಲ್ಕನೇ ಅತೀದೊಡ್ಡ ಆಯಿಲ್ ರಿಫೈನರಿ ಸಾಮರ್ಥ್ಯವನ್ನು ಹೊಂದಿದೆ. ಅಮೆರಿಕ 841 ಎಂಟಿಪಿಎ ರಿಫೈನರಿ ಸಾಮರ್ಥ್ಯವನ್ನು ಹೊಂದಿದೆ, ಚೀನಾ 589 ಎಂಟಿಪಿಎ ಸಾಮರ್ಥ್ಯ ಹೊಂದಿದೆ, ರಷ್ಯಾ 282 ಎಂಟಿಪಿಎ ಸಾಮರ್ಥ್ಯವನ್ನು ಹೊಂದಿದೆ. ಭಾರತದ 266 ಎಂಟಿಪಿಎ ರಿಫೈನರಿ ಸಾಮರ್ಥ್ಯವನ್ನು ಹೊಂದಿದೆ. ಶೀಘ್ರದಲ್ಲೇ ಭಾರತ ರಷ್ಯಾವನ್ನು ಹಿಂದಿಕ್ಕುವ ನಿರೀಕ್ಷೆ ಇದೆ. ವೆಸ್ಟ್ ಕೋಸ್ಟ್ ರಿಫೈನರಿ ಭಾರತದ ಸಾಮರ್ಥ್ಯವನ್ನು 60 ಎಂಟಿಪಿಎಯಷ್ಟು ಹೆಚ್ಚಿಸಲಿದೆ. 2020ರ ವೇಳೆಗೆ ಇದು ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯನ್ನು ಹೊಂದಲಿದೆ. ಆದರೆ ಅದಕ್ಕೂ ಮುನ್ನವೇ ಭಾರತ ರಷ್ಯಾವನ್ನು ಓವರ್ಟೇಕ್ ಮಾಡುವ ಸಾಧ್ಯತೆ ಇದೆ.
source: rightlog
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.