ನವದೆಹಲಿ: ಇಂಟರ್ನೆಟ್ನಲ್ಲಿ ಕೂತು ಮಾಹಿತಿಯನ್ನು ತಡಕಾಡಲು, ಮಾಹಿತಿಗಳನ್ನು ಹಾಕಲು ನಿರ್ದಿಷ್ಟ ಗುರುತಿಸುವಿಕೆಯನ್ನು ಪಡೆಯಲು ಮೂಲ ಕಾರಣವಾದ ವರ್ಲ್ಡ್ ವೈಡ್ ವೆಬ್(WWW) 30 ವರ್ಷಗಳನ್ನು ಪೂರೈಸಿದೆ, ಈ ಸಂತೋಷವನ್ನು ಗೂಗಲ್ ಆನಿಮೇಟೆಡ್ ಗೂಗಲ್ ಡೂಡಲ್ ಮೂಲಕ ಹಂಚಿಕೊಂಡಿದೆ. ಈ ಮೂಲಕ ಇಂಟರ್ನೆಟ್ ಬಳಕೆದಾರರಿಗೆ ಇತಿಹಾಸವನ್ನು ಜ್ಞಾಪಿಸುವ ಕಾರ್ಯವನ್ನು ಮಾಡಿದೆ.
1989ರ ಮಾರ್ಚ್ 12ರಂದು ಸರ್ ಟಿಮ್ ಬರ್ನರ್ಸ್-ಲಿ ಎಂಬ ಬ್ರಿಟಿಷ್ ವಿಜ್ಞಾನಿಯು ವಲ್ಡ್ ವೈಡ್ ವೆಬ್ನ್ನು ಅನ್ವೇಷಣೆ ಮಾಡಿದರು. ಆ ವೇಳೆ ಲೀ 33 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರು. ಅವರು ಮಾಡಿದ ಅನ್ವೇಷಣೆ ಜಗತ್ತೇ ಇಂಟರ್ನೆಟ್ಗೆ ಅವಲಂಬಿತವಾಗುವಷ್ಟರ ಮಟ್ಟಿಗೆ ಬದಲಾವಣೆಯನ್ನು ತಂದಿತು.
ಇಂಟರ್ನೆಟ್ ಬಳಕೆದಾರರಿಗೆ WWW ಮಾಹಿತಿಯನ್ನು ಶೋಧಿಸಲು ಪ್ರಮುಖವಾದ ಸಾಧನವಾಗಿದೆ. ಸಂಪನ್ಮೂಲ ಸೂಚಿ ಅಥವಾ ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್(ಯುಆರ್ಎಲ್)ಗಳ ಸೃಷ್ಟಿಗೆ WWW ಆಧಾರವಾಯಿತು. ಯಾವುದೇ ದಾಖಲೆಗಳು, ಮಾಹಿತಿಗಳನ್ನು ಅಂತರ್ಜಾಲ ಸಂಪರ್ಕ ಬಳಸಿ ಹುಡುಕಲು WWW ಬೆನ್ನೆಲುಬಿನಂತಾಯಿತು. ವೆಬ್ ಬ್ರೌಸರ್ಗಳಲ್ಲಿ WWW ಎಂದು ಟೈಪಿಸಿ, ನಿರ್ದಿಷ್ಟ ಸಂಪನ್ಮೂಲ ಹುಡುಕುವುದು ಪ್ರಾರಂಭವಾಯಿತು.
ಈ ಬಗ್ಗೆ ಬ್ಲಾಗ್ನಲ್ಲಿ ಬರೆದುಕೊಂಡಿರುವ ಗೂಗಲ್, “1960 ರ ದಶಕದಿಂದಲೂ ವಿಕಸನಗೊಂಡಿರುವ ಅಂತರ್ಜಾಲದೊಂದಿಗೆ ಗೊಂದಲಕ್ಕೀಡಾಗಬಾರದು, ವರ್ಲ್ಡ್ ವೈಡ್ ವೆಬ್ ಎಂಬುದು ಆನ್ಲೈನ್ ಅಪ್ಲಿಕೇಶನ್ ಭಾಷೆ, ಎಚ್ಟಿಎಂಎಲ್ ಲ್ಯಾಂಗ್ವೇಜ್, ಯುಆರ್ಎಲ್ ವಿಳಾಸಗಳು, “ಮತ್ತು ಹೈಪರ್ಟೆಕ್ಸ್ಟ್ರಾನ್ಸ್ಫರ್ ಪ್ರೋಟೋಕಾಲ್, ಅಥವಾ ಎಚ್ಟಿಪಿಪಿ” ನಂತಹ ನಾವೀನ್ಯತೆಗಳ ಮೇಲೆ ನಿರ್ಮಿಸಲಾದ ಆನ್ ಲೈನ್ ಅಪ್ಲಿಕೇಶನ್ ಆಗಿದೆ’ ಎಂದಿದೆ.
ಸೋಮವಾರ ಪ್ರಕಟಿಸಿದ ಪತ್ರವೊಂದರಲ್ಲಿ, ಬರ್ನರ್ಸ್-ಲೀ ವೆಬ್ ಸೃಷ್ಟಿಸಿದ ಅವಕಾಶಗಳನ್ನು ಪ್ರಶಂಸಿದ್ದಾರೆ. ಹಿಂದುಳಿದ ಜನರಿಗೆ ಧ್ವನಿಯನ್ನು ನೀಡಿದೆ ಮತ್ತು ದೈನಂದಿನ ಜೀವನವನ್ನು ವೆಬ್ ಸರಳಗೊಳಿಸಿದೆ ಎಂದಿದ್ದಾರೆ. ಆದರೆ, “ಇದು ಸುಳ್ಳುಗಾರರಿಗೆ ಅವಕಾಶವನ್ನು ಸೃಷ್ಟಿಸಿದೆ, ದ್ವೇಷವನ್ನು ಹರಡುವವರಿಗೆ ಧ್ವನಿಯನ್ನು ನೀಡಿದೆ, ಮತ್ತು ಎಲ್ಲಾ ರೀತಿಯ ಅಪರಾಧಗಳನ್ನು ಮಾಡಿಕೊಳ್ಳಲು ಸುಲಭವಾಗಿದೆ” ಎಂಬುದಾಗಿಯೂ ಅವರು ಎಚ್ಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.