ನವದೆಹಲಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶದ ನಾಗರಿಕರನ್ನು ಹೆಚ್ಚು ಸಬಲರನ್ನಾಗಿಸುವ ಸಲುವಾಗಿ ಚುನಾವಣಾ ಆಯೋಗವು cVIGIL ಆ್ಯಪ್ನ್ನು ಪಾನ್ ಇಂಡಿಯಾ ಮಟ್ಟದಲ್ಲಿ ಪರಿಚಯಿಸಿದೆ. ಈ ಆ್ಯಪ್ ಮೂಲಕ ಜನರು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಗಳ ಫೋಟೋ, ವೀಡಿಯೋಗಳನ್ನು ಮಾಡಿ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಬಹುದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರು, ‘cVIGIL ಆ್ಯಪ್ನ್ನು ಬಳಕೆ ಮಾಡಿಕೊಂಡು, ನಾಗರಿಕರು ತಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕ ಚುನಾವಣಾ ನೀತಿ ಸಂಹಿತೆಗಳ ಉಲ್ಲಂಘನೆಯ ಫೋಟೋ, ವೀಡಿಯೋಗಳನ್ನು ಆಯೋಗಕ್ಕ ಕಳುಹಿಸಿಕೊಡಬಹುದಾಗಿದೆ. ಯಾವರ ಸ್ಥಳದಲ್ಲಿ ಘಟನೆ ನಡೆದಿದೆ ಎಂಬುದರ ವಿವರಗಳನ್ನೂ ಇಲ್ಲಿ ನೀಡಬೇಕಾಗುತ್ತದೆ’ ಎಂದಿದ್ದಾರೆ.
cVIGIL ಒಂದು ಸರಳ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಆ್ಯಪ್ ಆಗಿದೆ, ಬಳಕೆದಾರ ಸ್ನೇಹಿ ಮತ್ತು ಸುಲಭ ವ್ಯವಹಾರದ ಆ್ಯಪ್ ಆಗಿದೆ. ಉಲ್ಲಂಘನೆಗಳ ಫೋಟೋ, ವೀಡಿಯೋಗಳನ್ನು ಮಾಡಿ ಅದರ ವಿವರಣೆಗಳನ್ನು ನೀಡಿ ಈ ಆ್ಯಪ್ನಲ್ಲಿ ಅಪ್ಲೋಡ್ ಮಾಡಿದರೆ ಸಾಕು. ದೂರುದಾರ ಅನಾಮಧೇಯನಾಗಿ ಉಳಿಯಲು ಬಯಸಿದರೂ ಅದಕ್ಕೆ ಅವಕಾಶಗಳಿವೆ.
ಡಿಸ್ಟ್ರಿಕ್ಟ್ ಕಂಟ್ರೋಲ್ ರೂಮ್ಗಳು cVIGIL ಪ್ರಕರಣಗಳನ್ನು ಜಿಐಎಸ್ ಆಧಾರಿತ ವೇದಿಕೆಯ ಮೂಲಕ ಫ್ಲೈಯಿಂಗ್ ಸಡ್ಗಳಿಗೆ ತಲುಪಿಸುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 100 ನಿಮಿಷಗಳೊಳಗೆ ಕ್ರಮ ಜರುಗಿಸಬೇಕು.
ಎಪ್ರಿಲ್ 11ರಿಂದ ಲೋಕಸಭಾ ಚುನಾವಣೆ ಆರಂಭವಾಗಲಿದ್ದು, ರಾಜಕೀಯ ಪಕ್ಷಗಳು ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿವೆ. ಈ ವೇಳೆ ಅಭ್ಯರ್ಥಿಗಳು ಜನರನ್ನು ಓಲೈಸುವ ಸಲುವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಸಾಧ್ಯತೆಗಳಿವೆ. ಈ ವೇಳೆ ಪ್ರಜ್ಞಾವಂತ ನಾಗರಿಕರು ಎಚ್ಚೆತ್ತುಕೊಂಡು ಅವರಿಗೆ ಪಾಠವನ್ನು ಕಲಿಸಬೇಕು ಎಂಬ ಉದ್ದೇಶದೊಂದಿಗೆ ಈ ಆ್ಯಪ್ ಬಿಡುಗಡೆಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.