ಗುವಾಹಟಿ: ಈಶಾನ್ಯ ಭಾರತದ ಒಟ್ಟು 25 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಸುಮಾರು 19ರಿಂದ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಸ್ಸಾಂ ವಿತ್ತ ಸಚಿವ ಹಿಮಾಂತ ಬಿಸ್ವಾ ಸರ್ಮಾ ಭರವಸೆ ವ್ಯಕ್ತಪಡಿಸಿದ್ದಾರೆ.
2014ರ ಲೋಕಸಭಾ ಚುನಾವಣೆಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಅಧಿಕಾರದ ಗದ್ದುಗೆಯನ್ನು ಏರಲಿದೆ ಎಂದು ಅವರು ಹೇಳಿದ್ದಾರೆ.
ಅಸ್ಸಾಂನ 14 ಲೋಕಸಭಾ ಸ್ಥಾನಗಳು ಎಪ್ರಿಲ್ 11, 18 ಮತ್ತು 23ರಂದು ಮೂರು ಹಂತದಲ್ಲಿ ಚುನಾವಣೆಯನ್ನು ಎದುರಿಸಲಿದೆ. ಎರಡು ಸ್ಥಾನಗಳನ್ನು ಹೊಂದಿರುವ ಮಥುರಾ ಮತ್ತು ತ್ರಿಪುರಾ ಎಪ್ರಿಲ್ 11 ಮತ್ತು 18 ರಂದು ಎರಡು ಹಂತದಲ್ಲಿ ಚುನಾವಣೆಯನ್ನು ಎದುರಿಸಲಿದೆ. ಎರಡು ಸ್ಥಾನ ಹೊಂದಿರುವ ಮೇಘಾಲಯ, ಒಂದು ಸ್ಥಾನ ಹೊಂದಿರುವ ನಾಗಾಲ್ಯಾಂಡ್, ಎರಡು ಸ್ಥಾನ ಹೊಂದಿರುವ ಅರುಣಾಚಲ ಪ್ರದೇಶ, ಒಂದು ಸ್ಥಾನ ಹೊಂದಿರುವ ಮಿಜೋರಾಂ ಮತ್ತು ಸಿಕ್ಕಿಂ ಎಪ್ರಿಲ್ 11ರಂದು ಚುನಾವಣೆಯನ್ನು ಎದುರಿಸಲಿವೆ.
‘ಈಶಾನ್ಯದಲ್ಲಿ 25 ಲೋಕಸಭಾ ಸ್ಥಾನಗಳಿವೆ. ಇದರಲ್ಲಿ ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷ ನಾರ್ತ್ ಈಸ್ಟ್ ಡೆಮೋಕ್ರಾಟಿಕ್ ಅಲಾಯನ್ಸ್ನ ಸದಸ್ಯರು 19-21 ಸ್ಥಾನ ಪಡೆಯಲಿವೆ’ ಎಂದು ಹಿಮಾಂತ ಅವರು ಬೊಕಖಾಟ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಂದರ್ಭ ಹೇಳಿಕೊಂಡಿದ್ದಾರೆ. ಗುರುತಿಸುವಿಕೆ ಮತ್ತು ಅಭಿವೃದ್ಧಿಯೇ 2019ರ ಚುನಾವಣೆಯನ್ನು ಗೆಲ್ಲಲು ಬಿಜೆಪಿಯ ಅಜೆಂಡಾವಾಗಿರಲಿದೆ ಎಂದಿದ್ದಾರೆ.
ಬಿಜೆಪಿಯ ಹಿರಿಯ ನಾಯಕನಾಗಿರುವ ಹಿಮಾಂತ ಬಿಸ್ವಾ ಅವರು, ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಮಾಡಿದ ಪ್ರಮುಖ ನಾಯಕ. ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.